ಕುಕನೂರ : ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ 189 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಆ ಪಟ್ಟಿಯಲ್ಲಿ 52 ಜನರನ್ನು ಹೊಸಬರಿಗೆ ಅವಕಾಶ ಕಲ್ಪಿಸಿದ್ದಾರೆ. ಆದರೆ ಕೊಪ್ಪಳ ಜಿಲ್ಲೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಈಶಣ್ಣ ಗುಳಗಣ್ಣನವರ್ ಪುತ್ರ ನವೀನ್ ಗುಳಗಣ್ಣನವರ್ ಗೆ ಈ ಬಾರಿಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗುತ್ತೆ ಎಂದು ಅವರ ಅಭಿಮಾನಿಗಳಲ್ಲಿ ಬಹುದೊಡ್ಡ ನಂಬಿಕೆ ಇತ್ತು. ಬಿಜೆಪಿ ಹೈಕಮಾಂಡ್ ನವೀನ್ ಗುಳಗಣ್ಣನವರ್ ಟಿಕೆಟ್ ನೀಡದೇ, ನವೀನ್ ಗುಳಗಣ್ಣನವರ್ ಅಭಿಮಾನಿಗಳಲ್ಲಿ ಅತೀವ ಬೇಸರ ತರಸಿದೆ.
ಈ ಕುರಿತು ನವೀನ್ ಗುಲಗಣ್ಣವರ ಅಭಿಮಾನಿಗಳು ತಮ್ಮ ಬೇಸರದ ನುಡಿಗಳನ್ನು ನಮ್ಮ “ಪ್ರಜಾ ವೀಕ್ಷಣೆ” ಟೀಮ್ ಗೆ ತಿಳಿಸಿದ್ದಾರೆ. ಮುಂದುವರೆದು ಮಾತನಾಡಿದ ನವೀನ್ ಗುಳಗಣ್ಣವರ ಅಭಿಮಾನಿಗಳು, “ಮುಂದಿನ ದಿನಗಳಲ್ಲಿ ನಮ್ಮ ನಡೆ ಯಾವುದರ ಪರ ಇರುತ್ತೆ ಅಂತ ನಾವು ತಿಳಿಸುತ್ತೇವೆ” ಎಂದು ಹೇಳಿದ್ದಾರೆ.
ಇತ್ತ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆದ ಸಚಿವ ಹಾಲಪ್ಪ ಆಚಾರ್ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ಸಚಿವ ಹಾಲಪ್ಪ ಆಚಾರ್ ಗೆ ಟಿಕೆಟ್ ಕನ್ಫರ್ಮ್ ಆದ ತಕ್ಷಣವೇ ಕುಕುನೂರು ವೀರಭದ್ರೇಶ್ವರ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ಮಾಡಿದ್ದಾರೆ. ಈ ವೇಳೆ ಕೆಲ ಬಿಜೆಪಿ ಮುಖಂಡರು ಮಾತನಾಡಿ, “ನಮ್ಮ ಹಾಲಪ್ಪ ಸಾಹುಕಾರ್ ಗೆ ಮೊದಲೇ ಟಿಕೆಟ್ ಕೊಡ್ತಾರೆ ಅನ್ನೋದು ನಮಗೆ ತಿಳಿದಿತ್ತು, ಬಿಜೆಪಿ ಹೈಕಮಾಂಡ್ ನಿಜ ಮಾಡಿದೆ. ಹಾಗಾಗಿ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಪ್ರಾಮಾಣಿಕ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಳೆದ ಚುನಾವಣೆಯಲ್ಲಿ ಯಾವ ಲೀಡ್ ನಲ್ಲಿ ಗೆದ್ದಿದ್ರು, ಈ ಬಾರಿ ಮೂರು ಪಟ್ಟು ಹೆಚ್ಚು ಮತಗಳಿಂದ ಜಯಶಾಲಿಯಾಗಲಿದ್ದಾರೆ” ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ಬಸವರಾಜ್ ಹಳ್ಳಿಕೇರಿ ಹಾಗೂ ಪ್ರಮುಖರಾದ ಸಿಎಚ್ ಪೊಲೀಸ್ ಪಾಟೀಲ್ , ಕರಬಸಯ್ಯ ಬಿನ್ನಳ, ಮಹೇಶ್ ಕಲ್ಮಠ, ಮಂಗಳೇಶ ಮಂಗಳೂರು, ಮಲ್ಲಿಕಾರ್ಜುನ್ ಚೌದರಿ, ಶರಣಪ್ಪ, ವೀರೇಶ್ ಮಾಳ ಗೌಡರ್, ಶಿವರಾಜ್ ಗೌಡ, ಬಾಲರಾಜ ಗಾಳಿ, ಹನುಮಂತ್ ರಾವ್ ಪೋಳದ, ಪರಶುರಾಮ್ ಹುಯಿಲಗೋಳ, ಹಾಗೂ ನೂರಾರು ಕಾರ್ಯಕರ್ತರು ಇದ್ದರು.