LOCAL NEWS : ಭಾನಾಪುರ ರೈಲ್ವೆ ಮೇಲ್ ಸೇತುವೆ ಲೋಕಾರ್ಪಣೆ!!

You are currently viewing LOCAL NEWS : ಭಾನಾಪುರ ರೈಲ್ವೆ ಮೇಲ್ ಸೇತುವೆ ಲೋಕಾರ್ಪಣೆ!!

ಭಾನಾಪುರ ರೈಲ್ವೆ ಮೇಲ್ ಸೇತುವೆ ಲೋಕಾರ್ಪಣೆ!!

ಕುಕನೂರು : ತಾಲೂಕಿನಲ್ಲಿ ಹಾದುಹೋಗುವ ಭಾನಾಪುರ ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ 367 ರ ಬಾನಾಪುರ ಗ್ರಾಮದ ರೈಲ್ವೆ ಕ್ರಾಸಿಂಗ್ ಮೇಲ್ ಸೇತುವೆ ಮೊದಲ ಹಂತದ ಕಾಮಗಾರಿಯನ್ನು ಸಂಸದ ರಾಜಶೇಖರ ಹಿಟ್ನಾಳ, ಬಸವರಾಜ ರಾಯರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಇವರುಗಳಿಂದ ಲೋಕಾರ್ಪಣೆ ಗೊಳಿಸಲಾಯಿತು.

ಈ ವೇಳೆಯಲ್ಲಿ ಬಸವರಾಜ ಮಾತನಾಡುತ್ತಾ 150 ಕೋಟಿ ರೂಪಾಯಿಗಳ ಅನುದಾನದಲ್ಲಿ ತಾಲೂಕಿನ ಎಲ್ಲಾ ರಸ್ತೆಗಳ ಅಭಿವೃದ್ಧಿಪಡಿಸಲಾಗುವುದು ಜೊತೆಗೆ ಕಲ್ಯಾಣ ಪಥ ಯೋಜನೆ ಮತ್ತು ರಾಜ್ಯ ಸರ್ಕಾರದ ಪ್ರಗತಿಪತ ಯೋಜನೆಗಳಲ್ಲೂ ಸಹ ಸಾಕಷ್ಟು ಅಭಿವೃದ್ಧಿಯನ್ನು ಕ್ಷೇತ್ರ ಕಾಣಲಿದೆ ಎಂದು ಹೇಳಿದರು.

ಭಾನಾಪುರದ ರೈಲ್ವೆ ಮೇಲ್ ಸೇತುವೆ ಕಾಮಗಾರಿ ಹಲವು ತಾಂತ್ರಿಕ ಕಾರಣಗಳಿಂದ ಯೋಜನೆ ಸಂಪೂರ್ಣಗೊಳ್ಳಲು ವಿಳಂಬವಾಗಿದ್ದು ಈ ಭಾಗದ ಹಾಗೂ ಜನಪ್ರತಿನಿಧಿಗಳ ನಿರೀಕ್ಷೆಯ ಯೋಜನೆಯ ಕಾಮಗಾರಿಯ ಮೊದಲ ಹಂತದ ಉದ್ಘಾಟನೆಯನ್ನು ಸಾರ್ವಜನಿಕರಿಗೆ ಅನುಕೂಲವಾಗುವ ಹಿತ ದೃಷ್ಟಿಯಿಂದ ನೆರವೇರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ಸಂಪೂರ್ಣಗೊಂಡ ನಂತರ ಸಂಬಂಧಪಟ್ಟ ಜನ ಪ್ರತಿನಿಧಿಗಳ ಸಮ್ಮುಖದಲ್ಲಿ ನೆರವೇರಿಸಲಾಗುವುದು ಎಂದು ಹೇಳಿದರು.

ಭಾನಾಪುರ ಗದ್ದನಕೇರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಯನ್ನಾಗಿ ಪರಿವರ್ತನೆಗೊಳಿಸಲು ಸುಮಾರು 10 ವರ್ಷಕ್ಕೂ ಹೆಚ್ಚು ಕಾಲ ಪ್ರಯತ್ನಪಟ್ಟಿದ್ದು ಅಂದಿನ ಕೇಂದ್ರ ಹೆದ್ದಾರಿ ಸಚಿವ ಭಾಸ್ಕರ್ ಫರ್ನಾಂಡಿಸ್ ಅವರ ಸಹಕಾರವನ್ನು ಎಂದಿಗೂ ಮರೆಯುವಂತಿಲ್ಲ ನಂತರದ ದಿನಗಳಲ್ಲಿ ಸಚಿವರಾಗಿ ಖಾತೆ ನಿರ್ವಹಿಸಿದ ನಿಖಿಲ್ ಗಡ್ಕರಿ ಅವರ ಕೂಡ ಸಂಪೂರ್ಣ ರೀತಿಯಲ್ಲಿ ಸಹಕರಿಸಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಯಲಬುರ್ಗಾ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಹೆದ್ದಾರಿಗಳ ಅಭಿವೃದ್ಧಿಗಳಿಗೆ ಸರ್ಕಾರದಿಂದ ಅನುದಾನ ಮಂಜೂರು ಮಾಡಲು ಕೋರಿಕೆಯನ್ನು ಸಲ್ಲಿಸಲಾಗಿದ್ದು ಶೀಘ್ರದಲ್ಲಿಯೇ ಜಿಲ್ಲೆಯ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ ಜಿಲ್ಲೆಯ ನೂತನ ರೈಲ್ವೆ ಮಾರ್ಗಗಳಾದ ಮುನಿರಾಬಾದ-ಮಹಬೂಬ ನಗರ ಹಾಗೂ ಗದಗ್ ವಾಡಿ ರೈಲ್ವೆ ಮಾರ್ಗ ಯೋಜನೆ ಜಾರಿಗೆ ತಂದು ಕಾರ್ಯರೂಪಕ್ಕೆ ಬರುವಲ್ಲಿ ಬಸವರಾಜ ರಾಯರೆಡ್ಡಿ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳ ಕಾಳಜಿ ಅಪಾರವಾಗಿದೆ. ಇದರ ಜೊತೆ ರಾಯರೆಡ್ಡಿ ಅವರು ಮುತವರ್ಜಿವಹಿಸಿ ಕೊಪ್ಪಳ ವಿಮಾನ ನಿಲ್ದಾಣ ಹಾಗೂ ಗಂಗಾವತಿ ರೈಲು ನಿಲ್ದಾಣದಿಂದ ಅಂಜನಾದ್ರಿ ಬೆಟ್ಟಕ್ಕೆ ಹತ್ತು ಕಿಲೋಮೀಟರ್ ಅಂತರದ ರೋಪ್ ವೇ ನಿರ್ಮಾಣ ಮಾಡುವುದರಿಂದ ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಆಗಮಿಸುವ ದೇಶ ಹಾಗೂ ವಿದೇಶಿಯ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಹೇಳಿದರಲ್ಲದೆ. ಲೋಕಾರ್ಪಣೆ ಗೊಳ್ಳುತ್ತಿರುವ ರೈಲ್ವೆ ಮೇಲ್ ಸೇತುವೆ ಸಂಪೂರ್ಣ ಗೊಳ್ಳುವುದರಲ್ಲಿ ಹಾಲಪ್ಪ ಆಚಾರ್ ರವರ ಕೊಡುಗೆ ಕೂಡ ಗಮನಾರ್ಹವಾಗಿದೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ ಅಭಿವೃದ್ಧಿ ಇಚ್ಛಾಸಕ್ತಿ ಇರುವವರೆ ನಿಜವಾದ ರಾಜಕಾರಣಿಯಾಗಿದ್ದು,  ಇದಕ್ಕೆ ಉತ್ತಮ ಉದಾಹರಣೆಯೆಂದರೆ ದೇಶದಲ್ಲಿಯೇ ಬಸವರಾಜ ರಾಯರೆಡ್ಡಿ ಅವರು ಉತ್ತಮ ಮಾದರಿಯಾಗುತ್ತಾರೆ. ಬಸವರಾಜ ರಾಯರೆಡ್ಡಿ ಅವರ ಸಹಕಾರ ಹಾಗೂ ಸಂಗಣ್ಣ ಕರಡಿಯವರ ಮಾರ್ಗದರ್ಶನದಲ್ಲಿ ಮುಂದೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ, ವೀರನಗೌಡ ಬಳೊಟಗಿ, ಹನುಮಂತ ಗೌಡ ಚಂಡೂರು, ಸಂಗಮೇಶ ಗುತ್ತಿ, ಚಂದ್ರಶೇಖರಯ್ಯ ಹಿರೇಮಠ, ಮಂಜುನಾಥ ಕಡೆಮನಿ, ನೂರುದ್ದೀನ್ ಸಾಬ್ ಗುಡಿ ಹಿಂಡಲ ಅಧಿಕಾರಿಗಳಾದ ಕೃಷ್ಣಮೂರ್ತಿ, ಗಿರೀಶ, ಪ್ರಾಣೇಶ್ ಹೆಚ್ ಸಂತೋಷ್ ಪಾಟೀಲ ಬಿರಾದರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

error: Content is protected !!