PV ನ್ಯೂಸ್ : ಗೊಂದಲಕ್ಕೆ ಕಾರಣವಾದ ತಾ.ಪಂ.ಇಓ ಪತ್ರ ? : ಫಲಾನುಭವಿಗಳಿಗೆ ಕಾರ್ಯಕ್ರಮಕ್ಕೆ ಕರೆ ತರಲು ಪಿಡಿಒ ಗೆ ಸೂಚನೆ..!!

ಕುಕನೂರು : ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಾಳೆ (ಡಿಸೆಂಬರ್ 2ರಂದು) ನಡೆಯಲಿರುವ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿರುವ “ಯಲಬುರ್ಗಾ ಅಭಿವೃದ್ಧಿ ಸುವರ್ಣಯುಗ ಎಂಬ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ 15 ಜನರನ್ನು ಬನ್ನಿಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಆದೇಶ ನೀಡಿ ಪತ್ರ ಬರೆದಿರುವುದು ಅನೇಕ ಅನುಮಾನ ಹಾಗೂ ಗೊಂದಲಗಳಿಗೆ ಕಾರಣವಾಗಿದೆ. ಇದರ ಜೊತೆಗೆ ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಂ. ಸದಸ್ಯರ ಆಕ್ರೋಶಕ್ಕೂ ಕಾರಣವಾಗಿದೆ ಎಂದು ಹೇಳಬಹುದು.
ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಜರುಗುತ್ತಿರುವ “ಯಲಬುರ್ಗಾ ಅಭಿವೃದ್ಧಿ ಸುವರ್ಣಯುಗ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬನ್ನಿಕೊಪ್ಪ ಗ್ರಾಮದ ಸರ್ವೆ ನಂಬರ್ 39/3 ರಲ್ಲಿ ರಚಿಸಲಾಗಿರುವ ನಿವೇಶನಗಳ ಹಂಚಿಕೆ ಉದ್ದೇಶ ಇರುವುದರಿಂದ ಅದಕ್ಕಾಗಿ ಕನಿಷ್ಠ 15 ಜನ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರುವಂತೆ ಹಾಗೂ ಕರೆ ತರಲು ವಿಫಲರಾದಲ್ಲಿ ಅಭಿವೃದ್ಧಿ ಅಧಿಕಾರಿಗಳೇ ನೇರವಾಗಿ ಹೊಣೆಗಾರರಾಗುತ್ತಿದ್ದು, ನಿಮ್ಮ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ನಮೂದಿಸಿದ್ದು, ಈ ಕಾರ್ಯಕ್ರಮವೂ ಖಾಸಗಿನೋ ಅಥವಾ ಸರ್ಕಾರಿನೋ ಮೊದಲು ತಿಳಿಸಬೇಕು. ಮೇಲಾಧಿಕಾರಿಗಳು ಕೆಳ ವರ್ಗದ ಅಧಿಕಾರಿಗಳ ಮೇಲೆ ಹೇರುತ್ತಿರುವ ಒತ್ತಡವಾಗಿದೆ ಎಂದು ಹೇಳಬಹುದು. ಇದನ್ನು ಸಂಪೂರ್ಣವಾಗಿ ವಿರೋಧಿಸಲಾಗುತ್ತದೆ ಎಂದು ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ವೆಂಕಟಪುರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಚುನಾಯಿತ ಪ್ರತಿನಿಧಿಗಳಿರುವಾಗ ಗ್ರಾಮ ಪಂಚಾಯತಿ ಸದಸ್ಯರಿಗಾಗಲಿ ಅಥವಾ ಅಧ್ಯಕ್ಷರಿಗಾಗಿ ಯಾವುದೇ ಮಾಹಿತಿ ನೀಡದೆ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನೇರವಾಗಿ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಡ ಹೆರುತ್ತಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ. ಇಲ್ಲಿ ಜನ ಪ್ರತಿನಿಧಿಗಳಿಗೆ ಯಾವುದೇ ರೀತಿಯ ಮಾಹಿತಿ ನೀಡದೆ ತಮ್ಮಿಷ್ಟಕ್ಕೆ ತಾವೇ ಕಾರ್ಯನಿರ್ವಹಿಸುತ್ತಾ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಷ್ಟಕ್ಕೂ ಗ್ರಾಮದ ಸರ್ವೆ ನಂಬರ್ 39/3 ರಲ್ಲಿ ಇದುವರೆಗೂ ಯಾವುದೇ ರೀತಿಯ ಡೆವಲಪ್ಮೆಂಟ್ ಕಾರ್ಯಗಳು ಜರುಗಿರುವುದಿಲ್ಲ. ಈ ಜಮೀನಿನಲ್ಲಿ ರಸ್ತೆ ಚರಂಡಿ ಹಾಗೂ ನಿವೇಶನ ಗಳ ಗುರುತು ಸಹ ಇರುವುದಿಲ್ಲ. ಇಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸಿದ್ದು ಇವರೆಲ್ಲ ಸುಸಜ್ಜಿತ ಮನೆಯನ್ನು ಹೊಂದಿದವರಾಗಿದ್ದು ಇದಕ್ಕೆ ಸಂಬಂಧಪಟ್ಟಂತೆ ತಾಲೂಕ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಈಗಾಗಲೇ ತಕರಾರು ಪತ್ರವನ್ನು ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಿಂದ ನೀಡಿರುತ್ತದೆ. ಆದರೂ ಸಹ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಾರದೋ ಒತ್ತಡಕ್ಕೆ ಮಾಡಿದ್ದು ಈ ರೀತಿಯ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದು ಸಂವಿಧಾನವನ್ನು ಆಶಯವನ್ನು ಗಾಳಿಗೆ ತೂರಿ, ಎಂಬಂತೆ ಕೆಲಸ ನಿರ್ವಹಿಸುತ್ತಿದ್ದು ಸೋಜಿಗದ ಸಂಗತಿಯಾಗಿದೆ ಎಂದು ಹೇಳಿದರು.
“ತಾಲೂಕ ಪಂಚಾಯತಿ ಕಾರ್ಯನಿರ್ವಾಹಕರ ನಡೆ ಇದೇ ರೀತಿ ಮುಂದುವರಿದರೆ ಅವರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು” ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ವೆಂಕಟಾಪುರ ತಿಳಿಸಿದರು.
“ಇದು ಐದು ವರ್ಷಗಳ ಹಿಂದಿನಿಂದ ನಿವೇಶನ ಹಂಚಿಕೆ ವಿವಾದವಾಗಿದ್ದು. ಸದ್ಯ ಈ ವಿವಾದಕ್ಕೆ ತೆರೆ ಎಳೆಯುವ ಕಾರ್ಯವಾಗುತ್ತಿದ್ದು, ಸದ್ಯದ ಜನಪ್ರತಿನಿಧಿಗಳಿಗೂ ಇದಕ್ಕೂ ಸಂಬಂಧ ವಿರುವುದಿಲ್ಲ. ಡಿಸೆಂಬರ್ ಎರಡರಂದು ಯಲಬುರ್ಗಾ ಪಟ್ಟಣದಲ್ಲಿ ಜರುಗುವ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಸಂಪೂರ್ಣವಾಗಿ ಸರ್ಕಾರದ ಇದು ಖಾಸಗಿ ಕಾರ್ಯಕ್ರಮ ಆಗಿರುವುದಿಲ್ಲ. ಈ ಕಾರ್ಯಕ್ರಮವನ್ನು ತಾಲೂಕ ಆಡಳಿತದಿಂದ ಆಯೋಜಿಸಲಾಗಿರುತ್ತದೆ ಆದ್ದರಿಂದ 15 ಜನ ಫಲಾನುಭವಿಗಳನ್ನು ಕರೆತ್ತಿರುವಂತೆ ಆದೇಶ ನೀಡಲಾಗಿದೆ.
ಸಂತೋಷ್ ಪಾಟೀಲ ಬಿರಾದರ
ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತಿ ಕುಕನೂರು ಹಾಗೂ ಯಲಬುರ್ಗಾ.