ತೃತಿಯ ಮಂತ್ರಾಲಯಕ್ಕೆ ೫೦ರ ಸಂಭ್ರಮ – ವಿಶೇಷ ಕಾರ್ಯಕ್ರಮಗಳ ಆಯೋಜನೆ..

You are currently viewing ತೃತಿಯ ಮಂತ್ರಾಲಯಕ್ಕೆ ೫೦ರ ಸಂಭ್ರಮ – ವಿಶೇಷ ಕಾರ್ಯಕ್ರಮಗಳ ಆಯೋಜನೆ..
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 43;

ಮುದಗಲ್ಲ ವರದಿ..

ತೃತಿಯ ಮಂತ್ರಾಲಯಕ್ಕೆ ೫೦ರ ಸಂಭ್ರಮ – ವಿಶೇಷ ಕಾರ್ಯಕ್ರಮಗಳ ಆಯೋಜನೆ..

ಮುದಗಲ್ಲನಲ್ಲಿ ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷರಾದ ನಾರಾಯಣರಾವ್ ದೇಶಪಾಂಡೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಮುದಗಲ್ಲ: ತೃತಿಯ ಮಂತ್ರಾಲಯವೆAದೇ ಕರೆಯಲ್ಪಡುವ ಐತಿಹಾಸಿಕ ಮುದಗಲ್ಲ ಪಟ್ಟಣದ ಕಿಲ್ಲಾದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ೫೦ ವರ್ಷಗಳ ಸಂಭ್ರಮ. ಈ ಹಿನ್ನೆಲೆಯಿಂದ ನಡೆಯುವ ವಿಶೇಷ ಕಾರ್ಯಕ್ರಮಗಳೊಂದಿಗೆ ರಾಘವೇಂದ್ರ ಸ್ವಾಮಿಗಳ ಆರಾಧನೆ ಆಯೋಜಿಸಿದ್ದರಿಂದ ಇದೇ ಜು. ೨೦ ಗುರುವಾರದಂದು ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರು ಆಗಮಸಲಿದ್ದಾರೆ ಶ್ರೀಮಠದ ಅಧ್ಯಕ್ಷರಾದ ನಾರಾಯಣರಾವ್ ದೇಶಪಾಂಡೆ ಹೇಳಿದರು.

ಅವರು ಪಟ್ಟಣದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಮುದಗಲ್ಲ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ೫೦ ವರ್ಷ ತುಂಬಿದ ಸಂದರ್ಭಧಲ್ಲಿ ವಿಶೇಷವಾಗಿ ರಾಯರ ಆರಾಧನೆಯನ್ನು ಆಚರಣೆ ಮಾಡಬೇಕೆನ್ನುವ ನಿಟ್ಟಿನಲ್ಲಿ ಮಂತ್ರಾಲಯ ಶ್ರೀಗಳಾದ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರು ದಿ. ೨೦ ರವಿವಾರದಂದು ಬೆಳಿಗ್ಗೆಯೇ ಆಗಮಿಸಿ ಭಕ್ತರಿಂದ ಪಾದಪೂಜೆ ಸ್ವೀಕರಿಸಿದ ನಂತರ ಭಕ್ತರಿಗೆ ಮುದ್ರಾಧಾರಣೆ ಮಾಡುವದು, ಪರಿಮಳ ಗುರುಕುಲ ವೀಕ್ಷಣೆ, ಶ್ರೀರಾಮ ದೇವರ ಸಂಸ್ಥಾನ ಪೂಜೆ, ಆಶೀರ್ವಚನ, ಮಹಾಪ್ರಸಾದ ಸೇವೆಗಳ ಮೂಲಕ ೫೦ರ ಸಂಭ್ರಮಕ್ಕೆ ಚಾಲನೆ ನೀಡುವರು.
ದಿ. ೩೧ರಂದು ರಾಯರ ಬೃಂದಾವನ ಪುನರ್‌ಪ್ರತಿ಼ಷ್ಠಾಪನೆಯ ೫೦ರ ಸಂಭ್ರಮದ ಹಿನ್ನೆಲೆಯಲ್ಲಿ ಶ್ರೀ ಕೆ. ಅಪ್ಪಣ್ಣಾಚಾರ್ಯ, ವಿಶೇಷ ಅಧಿಕಾರಿಗಳು, ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರೋಜೆಕ್ಟ್, ಮುಂತ್ರಾಲಯ ಇವರ ಮಾರ್ಗದರ್ಶನದಲ್ಲಿ ವಿಶೇಷ ಸಂದೇಶ, ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ದಿ. ೭ ರಿಂದ ೧೩ರವರೆಗೆ ಪಂಡಿತ್ ಗೋಪಿನಾಥಾಚಾರ್ಯ ಗಲಗಲಿ ಇವರಿಂದ ಶ್ರೀಮದ್ ಭಾಗವತ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ದಿ. ೮ರಂದು ಗುರುಸಾರ್ವಭೌಮರ ಗ್ರಾಮ ಪ್ರದಕ್ಷಿಣೆ ಜರುಗಲಿದೆ. ದಿ. ೯ರಂದು ಯಜುರ್ವೇದಿಯ ಉಪಾಕರ್ಮ, ಗುರುಸಾರ್ವಭೌಮರ ಗ್ರಾಮ ಪ್ರದಕ್ಷಿಣೆ ನಡೆಯಲಿದೆ. ದಿ. ೧೦ ಪೂರ್ವಾರಾಧನೆ, ದಿ. ೧೧ರಂದು ಮಧ್ಯಾರಾಧನೆ, ದಿ. ೧೨ರಂದು ಉತ್ತರಾರಾಧನೆ, ದಿ. ೧೩ರಂದು ಅವಭೃತ ಕಾರ್ಯಕ್ರಮ ಜರುಗಲಿದೆ. ಆರಾಧನೆಗಳ ದಿನದಂದು ದಿನಂಪ್ರತಿಯಾಗಿ ಸುಪ್ರಭಾತ, ವಿಷ್ಣುಸಹಸ್ರನಾಮ, ರಾಯರ ಅಷ್ಟೋತ್ತರ, ಅಶ್ವತ್ಥನಾರಾಯಣ, ವಿಷ್ಣು ಸಹಸ್ರನಾಮ, ರಾಘವೇಂದ್ರ ಅಷ್ಟಾಕ್ಷರ ಹೋಮ, ಪಂಚಾಮೃತಾಭಿಷೇಕ, ಭಾಗವತ ಸಪ್ತಾಹ, ಸಾಮೂಹಿಕ ಸತ್ಯನಾರಾಯಣ ಪೂಜೆ, ಅಲಂಕಾರ ಸೇವೆ, ಮಹಾಪ್ರಸಾದ, ಭಜನೆ-ಅಂದಣೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತವೆ ಎಂದು ತಿಳಿಸಿದರು.
ಈ ಸಮಯದಲ್ಲಿ ಡಾ: ಗುರುರಾಜ ದೇಶಪಾಂಡೆ, ವೆಂಕಟೇಶ ಕುಲಕರ್ಣಿ

ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!