LOCAL NEWS : ಪಟ್ಟಣದಲ್ಲಿ ದಲ್ಲಿ ಬೆತ್ತಲೆಯಾಗಿ ಓಡಾಡುತ್ತಿದ್ದ ಮಾನಸಿಕ ವ್ಯಕ್ತಿ…!!

You are currently viewing LOCAL NEWS : ಪಟ್ಟಣದಲ್ಲಿ ದಲ್ಲಿ ಬೆತ್ತಲೆಯಾಗಿ ಓಡಾಡುತ್ತಿದ್ದ ಮಾನಸಿಕ ವ್ಯಕ್ತಿ…!!

ಪ್ರಜಾವೀಕ್ಷಣೆ ವರದಿ :- 

LOCAL NEWS : ಪಟ್ಟಣದಲ್ಲಿ ದಲ್ಲಿ ಬೆತ್ತಲೆಯಾಗಿ ಓಡಾಡುತ್ತಿದ್ದ ಮಾನಸಿಕ ವ್ಯಕ್ತಿ…!!

ಮುದಗಲ್ಲ :- ಅದೊಂದು ವಿಚಿತ್ರ ಸನ್ನಿವೇಶ. ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಓಡುತ್ತಿದ್ದರೆ ಯಾರಿಗಾದ್ರೂ ಶಾಕ್ ಆಗೋದು ಖಚಿತ! ಜೋರಾಗಿ ಕೂಗಾಡುತ್ತಾ ಓಡಾಡುತ್ತಿದ್ದ ಈ ವ್ಯಕ್ತಿಯನ್ನು ಕಂಡು ದಂಗಾದ ಜನರು ಪಟ್ಟಣದ ಬಜಾರ್ ಮುಖ್ಯ ರಸ್ತೆಯ ಬೀದಿಯಲ್ಲಿ ಮಾನಸಿಕ ವ್ಯಕ್ತಿ ಬೆತ್ತಲೆಯಾಗಿ ಓಡಾಡುವ ಪದೇ ಪದೇ ಕಂಡು ಬರುತ್ತದೆ.

ಜನ ವಸತಿ ಪ್ರದೇಶದಲ್ಲಿ ಈ ವ್ಯಕ್ತಿಯು ಸಂಪೂರ್ಣ ಬೆತ್ತಲೆಯಾಗಿ ಓಡಾಡುತ್ತಿದ್ದದ್ದು ಕಂಡುಬರುತ್ತದೆ. ರಜೆಯ ದಿನವಾದ ಕಾರಣ ಜನರು ಮನೆಗಳಲ್ಲೇ ಉಳಿದಿದ್ದರು. ಮಕ್ಕಳು ರಸ್ತೆಯಲ್ಲಿ ಆಟವಾಡುತ್ತಿದ್ದರು. ಆದರೆ, ಇದ್ಯಾವುದರ ಪರಿವೆಯೂ ಇಲ್ಲದೆ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಕಿರುಚಾಡುತ್ತಾ ಓಡುತ್ತಿದ್ದಾನೆ!.

ಬೆತ್ತಲೆಯಾಗಿದ್ದ ವ್ಯಕ್ತಿ ಮಧ್ಯ ವಯಸ್ಕನಂತೆ ಕಂಡು ಬರುತ್ತಿದ್ದ. ಇದು ನಿಜಕ್ಕೂ ಆತಂಕಕಾರಿ ಈ ವ್ಯಕ್ತಿ ಸವ೯ಜನಿಕರ ಆಸ್ತಿಗಳನ್ನು ಹಾಳು ಮಾಡುವ ದೃಶ್ಯಗಳು ಕಂಡುಬರುತ್ತದೆ..

ಇ ವ್ಯಕ್ತಿಗೆ ಸಂಬಂಧ ಪಟ್ಟ ಕುಟುಂಬದವರು ಅದಷ್ಟು ಬೇಗನೆ ಮಾನಸಿಕ ಆಸ್ಪತ್ರೆಗೆ ದಾಖಲಿಸಬೇಕಾಗಿದೆ ಎಂದು ಸವ೯ಜನಿಕರ ದೂರು..

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!