BREAKING : ಇಂದು ಧರ್ಮಸ್ಥಳದಲ್ಲಿ ಎಸ್‌ಐಟಿ ತಂಡ : ಇಂದಿನಿಂದ ತನಿಖೆ ಶುರು..!

You are currently viewing BREAKING : ಇಂದು ಧರ್ಮಸ್ಥಳದಲ್ಲಿ ಎಸ್‌ಐಟಿ ತಂಡ : ಇಂದಿನಿಂದ ತನಿಖೆ ಶುರು..!

BREAKING : ಇಂದು ಧರ್ಮಸ್ಥಳದಲ್ಲಿ ಎಸ್‌ಐಟಿ ತಂಡ : ಇಂದಿನಿಂದ ತನಿಖೆ ಶುರು..!

ಪ್ರಜಾವೀಕ್ಷಣೆ ಸುದ್ದಿ : ಜಿಲ್ಲೆಯ ಧರ್ಮಸ್ಥಳದಲ್ಲಿ (Dharmasthala Case) ನಡೆದಿದೆ ಎನ್ನಲಾದ ಅಸಹಜ ಸಾವುಗಳು ಹಾಗೂ ಶವಗಳನ್ನ ಹೂತು ಹಾಕಿರುವ ಪ್ರಕರಣ ಇದೀಗ ಭಾರೀ ಸಂಚಲನ ಸೃಷ್ಟಿಸಿದ್ದು, ಸೂಕ್ತ ತನಿಖೆಗೆ ಒತ್ತಡ ಹೆಚ್ಚಿದ ಹಿನ್ನೆಲೆ ಸರ್ಕಾರ ಪ್ರಕರಣದ ತನಿಖೆಗೆ ಎಸ್​ಐಟಿ ರಚಿಸಿದೆ.

4 ಐಪಿಎಸ್ ಅಧಿಕಾರಿಗಳನ್ನ (IPS Officers) ಒಳಗೊಂಡ ಎಸ್‌ಐಟಿ ತಂಡ (SIT Team) ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದು, ಇಂದಿನಿಂದಲೇ ತನಿಖೆ ಶುರುವಾಗಲಿದೆ ಎಂದು ತಿಳಿದು ಬಂದಿದೆ.

ಧರ್ಮಸ್ಥಳದ ಅರಣ್ಯ ಭಾಗಗಳಲ್ಲಿ ಅಕ್ರಮವಾಗಿ ಶವಗಳನ್ನ ಹೂತಿಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಶುಕ್ರವಾರ ತಡರಾತ್ರಿಯೇ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿದ ಎಸ್‌ಐಟಿ ತನಿಖಾಧಿಕಾರಿ, ಕೇಸ್ ಫೈಲ್ ಪಡೆದಿದ್ದಾರೆ. ಬೆಳ್ತಂಗಡಿಯಲ್ಲಿ ಕಚೇರಿ ತೆರದಿರೋ ಎಸ್‌ಐಟಿ ಇಂದೇ ತನಿಖೆಗೆ ಇಳಿಯಲಿದ್ದು, ಧರ್ಮಸ್ಥಳಕ್ಕೂ ಭೇಟಿ ನೀಡಲಿದೆ ಎಂದು ತಿಳಿದು ಬಂದಿದೆ.

Leave a Reply

error: Content is protected !!