LOCAL NEWS : ಆ.11 ರಂದು ಬಿನ್ನಾಳ ಬಸವೇಶ್ವರ ಮಹಾ ರಥೋತ್ಸವ : 3 ದಿನಗಳಕಾಲ ಧಾರ್ಮಿಕ ಕಾರ್ಯಕ್ರಮ

You are currently viewing LOCAL NEWS : ಆ.11 ರಂದು ಬಿನ್ನಾಳ ಬಸವೇಶ್ವರ ಮಹಾ ರಥೋತ್ಸವ : 3 ದಿನಗಳಕಾಲ ಧಾರ್ಮಿಕ ಕಾರ್ಯಕ್ರಮ

ಪ್ರಜಾ ವೀಕ್ಷಣೆ ಸುದ್ದಿ:- 

LOCAL NEWS : ಆ.11 ರಂದು ಬಿನ್ನಾಳ ಬಸವೇಶ್ವರ ಮಹಾ ರಥೋತ್ಸವ : 3 ದಿನಗಳಕಾಲ ಧಾರ್ಮಿಕ ಕಾರ್ಯಕ್ರಮ

ಕುಕನೂರು: ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಪ್ರತಿ ವರ್ಷ ದಂತೆ ಸಾಂಪ್ರದಾಯಕವಾಗಿ ನಡೆದುಬಂದ ಸುಕ್ಷೇತ್ರ ಬಿನ್ನಾಳ ಬಸವೇಶ್ವರ ಜಾತ್ರಾಹೋತ್ಸವವು ಮೂರು ದಿನಗಳಕಾಲ ವೈಭವದಿಂದ ನಡೆಯಲಿದ್ದು, ಆಗಸ್ಟ 11 ರ ಸೋಮವಾರ ಸಂಜೆ 5 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ ಎಂದು ಮಾಜಿ ತಾಲೂಕಾ ಪಂಚಾಯತ್‌ ಉಪಾಧ್ಯಕ್ಷ ಕಳಕಪ್ಪ ಕಂಬಳಿ ತಿಳಿಸಿದರು.

ಇಂದು ಕುಕನೂರಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಕಳಕಪ್ಪ ಕಂಬಳಿಯವರು ನೀಡಿದರು.

-:ಮೂರು ದಿನಗಳಕಾಲ ಧಾರ್ಮಿಕ ಕಾರ್ಯಕ್ರಮಗಳ ವಿವರಣೆ:-

-:ಧರ್ಮ ಧ್ವಜಾರೋಹಣ:-

ಜಾತ್ರೆಯ ಮುನ್ನಾದಿನವಾದ ಅ.10 ರ ಭಾನುವಾರದಂದು ಬೆಳಗ್ಗೆ 8 ಗಂಟೆಗೆ ಧರ್ಮಸಭೆ ಹಾಗೂ ಕಳಸಾರೋಹಣ ಜರುಗುವುದು. ಮಧ್ಯಾಹ್ನ 3 ಗಂಟೆಗೆ ಧರ್ಮಸಭೆ ಜರುಗಲಿದ್ದು, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಸಾನಿದ್ಯ ವಹಿಸಲಿದ್ದಾರೆ. ಹಾಳಕೇರಿಯ ಮುಪ್ಪಿನ ಬಸವಲಿಂಗ ಸ್ವಾಮಿಗಳು, ಹೊಸಳ್ಳಿಯ ಬೂದೀಶ್ವರ ಸ್ವಾಮಿಗಳು, ಹೂವಿನಡಗಲಿ ಡಾ.ಶಿವಶಾಂತವೀರ ಸ್ವಾಮಿಗಳು, ತಂಗಡಗಿಯ ಭಾರತಿ ಅನ್ನದಾನೇಶ್ವರ ಸ್ವಾಮಿಗಳು ಉಪಸ್ಥಿತರಿರಲಿದ್ದಾರೆ. ಸಿದ್ದಲಿಂಗಯ್ಯ ಶಿ. ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಹಾಗೂ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಕಳಕನಗೌಡ ಪಾಟೀಲ, ತಹಶಿಲ್ದಾರ ಪ್ರಾಣೇಶ ಕುಲಕರ್ಣಿ ಭಾಗವಹಿಸಲಿದ್ದಾರೆ. ಗದಗನ ವಚನ ಟಿವಿ ಸಂಪಾದಕ ಸಿದ್ದು ಆ್ಯಾಪಲ್ ಪುರಿ ಉಪನ್ಯಾಸ ನೀಡಲಿದ್ದಾರೆ. ವೇದಿಕೆಯಲ್ಲಿ ಪುರಾಣ ಪ್ರವಚನಕಾರರಾದ ಕೊಟ್ರಯ್ಯಸ್ವಾಮಿ ಹಿರೇಮಠ, ಗ್ರಾ.ಪಂ ಸದಸ್ಯರುಗಳಾದ ಮಹಮ್ಮದಸಾಬ ವಾಲೀಕಾರ, ಗುರಪ್ಪ ಪಂತರ, ಲಕ್ಷ್ಮಣ ಚಲವಾದಿ, ಉಪಸ್ಥಿತರಿರಲಿದ್ದಾರೆ.

ಅಂದು ಸಂಜೆ 5 ಗಂಟೆಗೆ ಲಘು ರಥೋತ್ಸವ ಜರುಗಲಿದೆ. ಸಂಜೆ ವಿರೇಶ್ವರ ಪುಣ್ಯಾಶ್ರಮದ ಸಂಗೀತ ಶಿಕ್ಷಕ ಕಳಕಪ್ಪ ಮುದ್ಲಾಪೂರ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

-:ಧರ್ಮಚಿಂತನಾ ಸಭೆ:-

ಅ.11 ರ ಸೋಮವಾರ ಬೆಳಗ್ಗೆ 5 ಗಂಟೆಗೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ಬಸವೇಶ್ವರನಿಗೆ ಮಹಾ ರುದ್ರಾಭಿಷೇಕ. ಮದ್ಯಾಹ್ನ 2 ಗಂಟೆಗೆ ನಂದಿಕೋಲು ಮೆರವಣಿಗೆ, ನಂತರ ಧರ್ಮಚಿಂತನಾ ಸಭೆ ಜರುಗುವುದು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಶಿರಹಟ್ಟಿ-ಬಾಳೆಹೊಸೂರ ಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಸಾನಿದ್ಯ ವಹಿಸಲಿದ್ದಾರೆ. ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳು, ದಾವಣಗೇರಿ ವಿರಕ್ತಮಠದ ಬಸವಪ್ರಭು ಸ್ವಾಮಿಗಳು ಉಪಸ್ಥಿತರಿರಲಿದ್ದು, ಮೈನಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ.

ಚನ್ನಯ್ಯ ತೋ. ಹಿರೇಮಠ ಉಪಸ್ಥಿತಿ ವಹಿಸಲಿದ್ದಾರೆ. ಅತಿಥಿಗಳಾಗಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು, ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಆಗಮಿಸಲಿದ್ದಾರೆ. ವೇದಿಕೆಯಲ್ಲಿ ಸಿಪಿಐ ಮೌನೇಶ ಮಾಲಿಪಾಟೀಲ, ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ದ್ರಾಕ್ಷಾಯಣಿ ತಹಶಿಲ್ದಾರ, ಸದಸ್ಯರಾದ ಶ್ರೀಮತಿ ಚನ್ನಮ್ಮ ಮುತ್ತಾಳ, ಶ್ರೀಮತಿ ಕಮಲಾಕ್ಷಿ ಕಂಬಳಿ, ಉಪಸ್ಥಿತರಿರಲಿದ್ದಾರೆ. ಅಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಸಂಜೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶಂಕರ ಬಿನ್ನಾಳ, ಮತ್ತು ಗೊಂಡಬಾಳದ ಸಂಗೀತಗಾರ ಶ್ರೀಶೈಲಪ್ಪ ಏ. ಹಳ್ಳಿಕೇರಿ ಮತ್ತು ತಂಡದಿಂದ ಭಕ್ತಿ ಸಂಗೀತ ಜರುಗಲಿದೆ.

-:ಎತ್ತಿನ ಮೆರವಣಿಗೆ:-

ಅ.12 ರ ಮಂಗಳವಾರ ಪ್ರತಿವರ್ಷದಂತೆ ರೈತನ ಬೆನ್ನೆಲುಬಾಗಿ ಕೆಲಸ ನಿರ್ವಹಿಸುವ ಎತ್ತುಗಳ ಮೆರವಣೆಗೆ ಮದ್ಯಾಹ್ನ 3 ಗಂಟೆಗೆ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಗ್ರಾಮದ ರೈತಬಾಂದವರೆಲ್ಲ ತಮ್ಮ ಎತ್ತುಗಳನ್ನ ಸಿಂಗರಿಸಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಧರ್ಮಸಭೆ ಜರುಗಲಿದ್ದು, ಗದಗ- ಡಂಬಳದ ತೋಂಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮಿಗಳು ಸಾನಿದ್ಯ ಮಹಿಸಲಿದ್ದು, ಯಲಬುರ್ಗಾ ಶ್ರೀಧರ ಮುರಡಿಮಠದ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಹರ್ಲಾಪುರದ ಅಭಿನವ ಡಾ. ಕೊಟ್ಟುರೇಶ್ವರ ಸ್ವಾಮಿಗಳು, ನಿಡಗುಂದಿ ಕೊಪ್ಪದ ಚನ್ನಬಸವ ಸ್ವಾಮಿಗಳು, ಕುಕನೂರಿನ ಡಾ.ಮಹಾದೇವ ಸ್ವಾಮಿಗಳು, ಮಲ್ಲಯ್ಯ ಶೇಖರಯ್ಯ ಪೂಜಾರ ಉಪಸ್ಥಿತರಿರಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ ಆಗಮಿಸಲಿದ್ದು, ನಿವೃತ್ತ ಉಪನ್ಯಾಸಕ ಅನೀಲ ವೈದ್ಯ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹಾಲಪ್ಪ ಬಸಪ್ಪ ಆಚಾರ, ಬಿಜೆಪಿ ಯುವ ಮುಖಂಡ ಬಸವರಾಜ ಕ್ಯಾವಟರ್ ಭಾಗವಹಿಸಲಿದ್ದಾರೆ. ಇಓ ಸಂತೋಷ ಬಿರಾದಾರ, ಪಿಎಸ್ ಐ ಗುರುರಾಜ್, ಗ್ರಾ.ಪಂ ಉಪಾಧ್ಯಕ್ಷ ಶರಣಯ್ಯ ಹಿರೇಮಠ ಇರಲಿದ್ದಾರೆ.

ಅಂದು ಸಂಜೆ ಗವಿಸಿದ್ದೇಶ್ವರ ಸ್ವರ ಸಂಚಾರ ಕಲಾತಂಡ, ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ್ ವಾಲಿಕಾರ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಜೊತೆಗೆ ಅಂದು ಗ್ರಾಮದ ವಯೋನಿವೃತ್ತ ಸರಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

-:ಮಹಾ ಪ್ರಸಾದ:-

ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಪ್ರತಿವರ್ಷದಂತೆ ಗ್ರಾಮದ ನೌಕರರು, ರೈತ ಬಾಂದವರು, ಯುವ ಮಿತ್ರರು, ಸಂಘ-ಸಂಸ್ಥೆ ಪ್ರತಿನಿಧಿಗಳು, ಮಹಿಳಾ ಸಂಘದವರು ಹಾಗೂ ಸದ್ಬಕ್ತರ ಸಹಕಾರದೊಂದಿಗೆ ಮಧ್ಯಾಹ್ನ 12 ಗಂಟೆಯಿಂದ ಮಹಾ ಪ್ರಸಾದ ಜರುಗುವುದು.

ಹುಬ್ಬಳ್ಳಿಯ ಡಾ. ವೆಂಕಟರಾಮ ಕಟ್ಟಿಮನಿ ಅವರಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ, ಕುಕನೂರಿನ ಕಂಬಳಿ ಆಸ್ಪತ್ರೆ ವತಿಯಿಂದ ಡಾ. ಶಿವಕುಮಾರ ಕಂಬಳಿ ಅವರಿಂದ ಇಸಿಜಿ ಹಾಗೂ ಆರೋಗ್ಯ ತಪಾಸಣಾ ಶಿಬಿರ, ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಕಾರದಲ್ಲಿ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಬಸವಂತಪ್ಪ

Leave a Reply

error: Content is protected !!