BREAKING NEWS : ಕೊಪ್ಪಳ ಡಿಡಿಪಿಐ ಆಗಿ “ರಾಷ್ಟ್ರ ಪ್ರಶಸ್ತಿ ಪುರಸ್ಕೃತ” ಸೋಮಶೇಖರ್ ಗೌಡ ಪಾಟೀಲ್ ನೇಮಕ : ಅಧಿಕೃತ ಸರ್ಕಾರದ ಆದೇಶ..!
ಕೊಪ್ಪಳ : ಕೊಪ್ಪಳ ಡಿಡಿಪಿಐ ಆಗಿ ಯಲಬುರ್ಗಾ ಬಿಇಓ ಹಾಗೂ ಪ್ರಬಾರಿ ಕೊಪ್ಪಳ ಡಿಡಿಪಿಐ ಸೋಮಶೇಖರ್ ಗೌಡ ಪಾಟೀಲ್ ಅವರನ್ನು ಸರ್ಕಾರವೂ ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ (ಪ್ರಾಥಮಿಕ ಹಾಗೂ ಪ್ರೌಢ ವಿಭಾಗ )(ಡಿಡಿಪಿಐ ಹುದ್ದೆ) ,ನೇಮಿಸಿ ಆದೇಶ ಹೊರಡಿಸಿದೆ.
ಈ ಹಿಂದೆ ಕೊಪ್ಪಳ ಡಿಡಿಪಿಐ ಆಗಿ ಶ್ರೀಶೈಲ್ ಬಿರಾದಾರ್ ಅವರನ್ನು ಬಿಡುಗಡೆಗೊಳಿಸಲಾಗಿತ್ತು, ಈ ತೆರವು ಆದ ಸ್ಥಾನಕ್ಕೆ ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೋಮಶೇಖರ್ ಗೌಡ ಪಾಟೀಲ್ ಅವರನ್ನು ಹಾಗೂ ಪ್ರಭಾರಿ ಡಿಡಿಪಿಐಯಾಗಿ ನೇಮಿಸಲಾಗಿತ್ತು, ಇದೀಗ ಖಾಯಂ ಅಂದರೆ ಸರ್ಕಾರದ ಮುಂದಿನ ಆದೆಶದವರೆಗೆ ಕೊಪ್ಪಳ ಡಿಡಿಪಿಐ ಆಗಿ ಸೋಮಶೇಖರ್ ಗೌಡ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.
ಈ ಆದೇಶದ ಬಗ್ಗೆ ಜನಸಾಮಾನ್ಯರಲ್ಲಿ ಒಳ್ಳೆಯ ಅಭಿಪ್ರಾಯವಿದ್ದು, ಶಿಕ್ಷಣ ಪ್ರೇಮಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.