SPECIAL STORY : ಕುಕನೂರು ತಾಲೂಕಿನಾದ್ಯಂತ “ಆಧಾರ್ ಸೇವಾ ಕೇಂದ್ರ” ಸ್ಥಗಿತ..! : ಸಾರ್ವಜನಿಕರ ಪರದಾಟ..!!

You are currently viewing SPECIAL STORY : ಕುಕನೂರು ತಾಲೂಕಿನಾದ್ಯಂತ “ಆಧಾರ್ ಸೇವಾ ಕೇಂದ್ರ” ಸ್ಥಗಿತ..! : ಸಾರ್ವಜನಿಕರ ಪರದಾಟ..!!

ಪ್ರಜಾ ವೀಕ್ಷಣೆ ವಿಶೇಷ ವರದಿ :

SPECIAL STORY : ಕುಕನೂರು ತಾಲೂಕಿನಾದ್ಯಂತ “ಆಧಾರ್ ಸೇವಾ ಕೇಂದ್ರ” ಸ್ಥಗಿತ..! : ಸಾರ್ವಜನಿಕರ ಪರದಾಟ..!!

ಕುಕುನೂರು : ಇತ್ತೀಚಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯುವದರ ಜೊತೆಗೆ ಶಾಲಾ ಕಾಲೇಜುಗಳ ದಾಖಲಾತಿಗೂ ಸಹ ಆಧಾರ್ ಕಾರ್ಡ್ ಅತ್ಯಗತ್ಯವಾಗಿದ್ದು, ಹೀಗಿದ್ದಾಗಿಯೂ ಕುಕನೂರು ತಾಲೂಕಿನಾದ್ಯಂತ ಕಳೆದ 20 ದಿನಗಳಿಂದ ಆಧಾರ್ ಸೇವಾ ಕೇಂದ್ರಗಳು ಸ್ಥಗಿತಗೊಂಡು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕುಕನೂರು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯ, ದೂರವಾಣಿ ವಿನಿಮಯ ಕೇಂದ್ರ ಸೇರಿದಂತೆ ಮಂಗಳೂರು ಗ್ರಾಮದ ನಾಡಕಚೇರಿಯಲ್ಲಿಯೂ ಸಹ ಆಧಾರ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಅತ್ಯಂತ ಅನುಕೂಲಕರ ವಾತಾವರಣ ನಿರ್ಮಾಣಗೊಂಡಿತ್ತು. ಆದರೆ ಕಾಲ ಕಳೆದಂತೆ ಮಂಗಳೂರು ಗ್ರಾಮದ ಹಾಗೂ ಪಟ್ಟಣದ ದೂರವಾಣಿ ವಿನಿಮಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಆಧಾರ್ ಸೇವಾ ಕೇಂದ್ರವೂ ಸ್ಥಗಿತಗೊಳಿಸಲಾಯಿತು.

ಈ ಆಧಾರ್ ಸೇವಾ ಕೇಂದ್ರವೂ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ತುಂಬಾ ಅನಾನುಕಲವಾಗಿದೆ. ಆದರೂ ಸಹ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಆಧಾರ್ ಕೇಂದ್ರದಲ್ಲಿಯೇ ಸಾರ್ವಜನಿಕರು ತಮ್ಮ ಆಧಾರ್ ಕಾರ್ಡಿಗೆ ಸಂಬಂಧಪಟ್ಟ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಜುಲೈ 20 ರಿಂದ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಆಧಾರ್ ಕೇಂದ್ರ ಸಹ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ.

ಬಹುತೇಕ ರೈತರು ತಮ್ಮ ಕೃಷಿ ಜಮೀನಿನ ಪಹಣಿ ಗಳಲ್ಲಿನ ಹೆಸರಿನ ಲೋಪ ದೋಷಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಆಧಾರ್ ಕಾರ್ಡ್ ಅವಶ್ಯಕವಾಗಿದ್ದರೆ, ಇನ್ನೊಂದೆಡೆ ಯಾವುದೇ ತರಹದ ವ್ಯಾಪಾರ ವಹಿವಾಟುಗಳಿಗೂ ಸಹ ಅಷ್ಟೇ ಅವಶ್ಯಕತೆ ಯಾಗಿರುತ್ತದೆ. ಜೊತೆಗೆ ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜುಗಳ ಪ್ರವೇಶ ದಾಖಲಾತಿ ಪಡೆಯಲು ಸಹ ಆಧಾರ್ ಕಾರ್ಡ್ ಅವಶ್ಯಕವಾಗಿದ್ದು, ಆಧಾರ್ ಕಾರ್ಡ್ ನಲ್ಲಿರುವ ಹೆಸರಿನ ಲೋಪ ದೋಷಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಕೊಪ್ಪಳ ಹಾಗೂ ಯಲಬುರ್ಗಾ ಪಟ್ಟಣಕ್ಕೆ ತೆರಳುವಂತಹ ಅನಿವಾರ್ಯತೆ ಎದುರಾಗುತ್ತಿದೆ.

ಇದರ ಜೊತೆಗೆ ಅಲ್ಲಿ ಹೋದರೂ ಸಹ ಜನಸಂದಣಿಯ ನಡುವೆ ಒಂದೇ ದಿನಕ್ಕೆ ಕೆಲಸವಾಗುವ ಯಾವುದೇ ಖಾತರಿಯು ಸಹ ಇಲ್ಲದಂತ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ. ಇದರಿಂದ ರೋಸಿ ಹೋಗಿರುವ ಜನತೆ ಮಾತ್ರ ತಾಲೂಕಿನಲ್ಲಿ ಆಧಾರ್ ಸೇವಾ ಕೇಂದ್ರವೂ ಸ್ಥಗಿತಗೊಳ್ಳಲು ಕಾರಣವಾದ ಅಧಿಕಾರಿಗಳಿಗೆ ಇಡಿ ಶಾಪ ಹಾಕುತ್ತಿರುವುದು ಸಾಮಾನ್ಯವಾಗಿ ಕಂಡು ಬರುವ ಸನ್ನಿವೇಶವಾಗಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ರಾಜ್ಯದಲ್ಲಿ ಅಭಿವೃದ್ಧಿಯ ಹರಿಕಾರ ಊರು ಅಥವಾ ತಾಲೂಕಾ ಕೇಂದ್ರ ಎಂದು ಹೆಸರನ್ನು ಹೊಂದಿರುವ ಶಾಸಕ ಬಸವರಾಜ ರಾಯರೆಡ್ಡಿ ಅವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಈ ಕ್ಷೇತ್ರವು ಹಲವಾರು ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದರು ಸಹ, ಮೂಲಸೌಕರ್ಯಕ್ಕೆ ಅವಶ್ಯಕತೆ ಬೇಕಾಗಿರುವ ಆಧಾರ್ ಸೇವಾ ಕೇಂದ್ರವೇ ಇಲ್ಲದ ಪರಿಸ್ಥಿತಿ ಉಂಟಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ ಎಂದು ಸಾರ್ವಜನಿಕರ ಹಾಗೂ ಪ್ರಜ್ಞಾವಂತರ ಮಾತುಗಳಾಗಿವೆ.

“ಆಧಾರ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯ ಮೇಲೆ ಹಲವು ಆರೋಪಗಳು ಕೇಳಿ ಬಂದ ಕಾರಣದಿಂದ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದು ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ. ಸದ್ಯ ಜಿಲ್ಲಾಧಿಕಾರಿಗಳಿಂದ ಹೊಸ ಆಧಾರ್ ಕೇಂದ್ರ ಸಂಚಾಲಕನ ಆಯ್ಕೆ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಪಟ್ಟಣದ ತಹಸೀಲ್ದಾರರ ಕಾರ್ಯಾಲಯದಲ್ಲಿ ಆಧಾರ್ ಕೇಂದ್ರ ಪುನಃ ಕಾರ್ಯರಂಭಗೊಳ್ಳಲಿದೆ.”

ಪ್ರಾಣೇಶ ಹೆಚ್
ತಹಸಿಲ್ದಾರರು ಕುಕನೂರು ತಾಲೂಕ.

“ಸಾರ್ವಜನಿಕರಿಗೆ ತಾಲೂಕಿನಲ್ಲಿ ಯಾವುದೇ ಆಧಾರ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸದೇ ಇರುವುದರಿಂದ ತುಂಬಾ ಅನಾನುಕೂಲವಾಗಿದ್ದು, ಆಧಾರ್‌ನಲ್ಲಿ ಹೆಸರು,ವಿಳಾಸ, ಪೋನ್ ನಂಬರ್‌, ಇನ್ನಷ್ಟು ಬೇರೆ ಬೇರೆ ತಿದ್ದುಪಡಿಗಾಗಿ ಎರಡು ಮೂರು ಬಾರಿ ಯಲಬುರ್ಗಾ ಹಾಗೂ ಕೊಪ್ಪಳಕ್ಕೂ ತೆರಳಿದರು ಸಹ ಜನಸಂದಣಿಯ ನಡುವೆ ಸರದಿ ಸಿಗದೇ ಇರುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿದೆ”

ತಿರುಪತಿ ತಲ್ಲೂರ
ಕಕ್ಕಿಹಳ್ಳಿ ತಾಂಡದ ನಿವಾಸಿ.

Leave a Reply

error: Content is protected !!