FLASH NEWS : ಕೆಂಪುಕೋಟೆಯಲ್ಲಿ ನಡೆಯುವ ಸ್ವತಂತ್ರೋತ್ಸವಕ್ಕೆ ಕುದರಿಮೋತಿ ಗ್ರಾ.ಪಂ. ಅಧ್ಯಕ್ಷೆ ಫರೀದಾಬೇಗಂಗೆ ವಿಶೇಷ ಅತಿಥಿಯಾಗಿ ಆಹ್ವಾನ..!
ಕುಕನೂರ : ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಆಗಸ್ಟ್ 15ರ ಸ್ವತಂತ್ರೋತ್ಸವದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮಕ್ಕೆ ತಾಲ್ಲೂಕಿನ ಕುದರಿಮೋತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರೀದಾಬೇಗಂ ತಂಬಾಕದಾರ್ ವಿಶೇಷ ಅತಿಥಿ ಯಾಗಿ ಪಾಲ್ಗೊಳ್ಳಲು ಆಯ್ಕೆ ಯಾಗಿದ್ದಾರೆ.
ವಿವಿಧ ಮಾನದಂಡಗಳನ್ನು ಆಧಾರಿಸಿ ರಾಜ್ಯದಲ್ಲಿ ಕೊಡಗು, ದಕ್ಷಣ ಕನ್ನಡ, ಚಿಕ್ಕಮಂಗ ‘ಳೂರು, ತುಮಕೂರು, ಬೆಳಗಾವಿ, ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಯ ಕೇವಲ ಎಂಟು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಮಾತ್ರ ವಿಶೇಷ ಅತಿಥಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ಕೇವಲ ಇಬ್ಬರು ಆಯ್ಕೆಯಾಗಿದ್ದು, ಕೊಪ್ಪಳ ಜಿಲ್ಲೆಯಿಂದ ಫರೀದಾಬೇಗಂ ಆಯ್ಕೆ ಯಾಗಿರುವುದು, ಗಂಗಾವತಿ ತಾಲ್ಲೂಕು ಆನೆಗೊಂದಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಶೇಷ. ಈ ಬಗ್ಗೆ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಆಯುಕ್ತಾಲಯ ಅಧಿಕೃತ ಮಾಹಿತಿ ನೀಡಿದೆ.
ಈ ಎಂಟು ಜನರಿಗೆ ಇಬ್ಬರು ನೋಡಲ್ ಅಧಿಕಾರಿಗಳನ್ನು ನಿ ಯೋಜಿಸಲಾಗಿದೆ. ಆಯ್ಕೆ ಯಾದ ಸದಸ್ಯರು ತಮ್ಮೊಂದಿಗೆ ಪತಿ ಅಥವಾ ಪತ್ನಿಯನ್ನು ಕರೆದೊಯ್ಯಲು ಅವಕಾಶವಿದ್ದು, ರೈಲು ಪ್ರಯಾಣ ಹಾಗೂ ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳುವ ವಸತಿ, ಊಟ, ಉಪಹಾರದ ವೆಚ್ಚಚನ್ನು ಪಂಚಾಯಿತಿ ನಿಧಿಯಿಂದ ಭರಿಸುವಂತೆ ಸೂಚಿಸಲಾಗಿದೆ.
*ಮಾನದಂಡಗಳೇನು*
ಕೇಂದ್ರ ಸರ್ಕಾರದ ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನ, ಘನತ್ಯಾಜ್ಯ ವಿಲೇವಾರಿಯಂತ ಪ್ರಾಥಮಿಕ ಹಂತದ ಕಾರ್ಯಕ್ರಮಗಳ ಅನುಷ್ಠಾನ ಮಾನದಂಡವಾಗಿರಿಸಿಕೊಂಡು ಪಂಚಾಯತ್ ರಾಜ್ ಇಲಾಖೆ ಈ ಆಯ್ಕೆ ಪ್ರಕ್ರಿಯೆ ಮಾಡಿದೆ. ಮುಖ್ಯವಾಗಿ ನರೇಗಾದಲ್ಲಿ ಕೂಲಿಕಾರರು ಎರಡು ಗಂಟೆಯೂ ಸರಿಯಾಗಿ ಕೆಲಸ ಮಾಡಲ್ಲ. ಇಂತಹ ಸಂದರ್ಭದಲ್ಲಿ ಕೂಲಿಕಾರರಿಂದ ಸರಿಯಾಗಿ ಕೆಲಸ ತೆಗೆಸುವ ಉದ್ದೇಶಕ್ಕೆ ಜಾರಿ ಮಾಡಲಾದ ಆನ್‌ಲೈನ್ ಹಾಜರಾತಿ ಜಿಲ್ಲೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.
ಕೂಲಿಕಾರರ ಹಾಜರಾತಿಗೆ ವಿಭಿನ್ನ ಕಾರ್ಯಕ್ರಮದಂತ ಹಮ್ಮಿಕೊಳ್ಳುವ ಮೂಲಕ ಕುದರಿಮೋತಿ ಗ್ರಾಮ ಪಂಚಾ ಯಿತಿ, ಕೊಪ್ಪಳ ಜಿಲ್ಲೆಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ ಗ್ರಾಮದ ಸ್ವಚ್ಛತೆಯ ಅವರನ್ನು ಆಯ್ಕೆ ಮಾಡಲಾಯಿತು.