ಮುದಗಲ್ಲ ವರದಿ..
ಸೆ.3ರಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಸೀರತ್ ಅಭಿಯಾನ : ರಹಿಮಾನಸಾಬ ನಧಫ್..
ಮುದಗಲ್ಲ :- ಪ್ರವಾದಿ ಮುಹಮ್ಮದ್ (ಸ) ರವರ ಜನ್ಮದಿನದ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಕನಾ೯ಟಕ ವತಿಯಿಂದ ‘ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ)’ ಶೀರ್ಷಿಕೆಯಡಿ ಸೆ.3 ರಿಂದ 14ರ ವರೆಗೆ ಹನ್ನೊಂದು ದಿನಗಳ ಕಾಲ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಹಿಮಾನಸಾಬ ನಧಫ್ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಈ ಕುರಿತು ಪಟ್ಟಣದಲ್ಲಿದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ)ರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಹಾಗೂ ವಿವಿಧ ಧರ್ಮಿಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸಲು ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಸೆ.3 ರಿಂದ 14 ರವರೆಗೆ ಈ ಅಭಿಯಾನ ನಡೆಯಲಿದ್ದು, ಈ ಸಮಯದಲ್ಲಿ ಹಳ್ಳಿಗಳಿಗೆ ತೆರಳಿ ಈ ಅಭಿಯಾನ ನಡೆಸಲಾಗುವುದು, ಈ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನ ಪ್ರಕಟಿಸಿರುವ ಪ್ರವಾದಿಯವರ ಬದುಕು ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವ ಎರಡು ಹೊಸ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.
ಈ ಅಭಿಯಾನದಲ್ಲಿ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆಗಳಂತಹ ವಿವಿಧ ಕಾರ್ಯಕ್ರಮಗಳು ಜರುಗಳಿವೆ ಎಂದು ಹೇಳಿದರು ಹಾಗೂ ದಿನಾಂಕ 5-09-2025 ರಂದು 9:30 ಜಮತ್ – ಏ- ಇಸ್ಲಾಮಿ ಹಿಂದ್ ಲಿಂಗಸೂರು ನಲ್ಲಿ ರಕ್ತದಾನ ಶಿಬಿರ ನಡೆಯುತ್ತದೆ ಎಂದು ಹೇಳಿದರು
ಸುದ್ದಿಗೊಷ್ಟಿಯಲ್ಲಿ ನೂರ-ಏ -ಇಲಾಹಿ ಮಜೀದ್ ಮುದಗಲ್ಲಿನ ಅಧ್ಯಕ್ಷರಾದ ಮೊಹಿಯುದ್ದೀನ ಬಂಡಾರಿ , ಆದಂಸಾಬ ತಂಬಾಕು, ಜನಾಬ ಮುಜಿಬೂರ ರಹಮಾನ ಮೌಲಾನಾ, ಫಾರೂಕ್ ಕಲಾಂ, ಮಂಜೂರ ಮಸ್ತ್ರೀ ಇಲ್ಲಕಲ್ , ಮಹಿಬೂಬ ಪಾಶ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ