You are currently viewing LOCAL NEWS : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷರಾಗಿ ಪತ್ರಕರ್ತ ಚಂದ್ರು ಆರ್‌ ಭಾನಾಪೂರ್‌ ನೇಮಕ!

LOCAL NEWS : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷರಾಗಿ ಪತ್ರಕರ್ತ ಚಂದ್ರು ಆರ್‌ ಭಾನಾಪೂರ್‌ ನೇಮಕ!

ಪ್ರಜಾ ವೀಕ್ಷಣೆ ಸುದ್ದಿ :-

LOCAL NEWS : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷರಾಗಿ ಪತ್ರಕರ್ತ ಚಂದ್ರು ಆರ್‌ ಭಾನಾಪೂರ್‌ ನೇಮಕ!

ಕುಕನೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಬೆಂಗಳೂರು ಇದರ ಕುಕನೂರು ತಾಲೂಕು ಘಟಕದ ಅಧ್ಯಕ್ಷರಾಗಿ “ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ ಮಾಧ್ಯಮ“ದ ಸಂಪಾದಕ ಚಂದ್ರು ಆರ್‌ ಭಾನಾಪೂರ್‌ ಅವರನ್ನು ಸಂಸ್ಥಾಪಕ & ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರು ನೇಮಕ ಮಾಡಿ ಆದೇಶ ಪ್ರತಿಯನ್ನು ನೀಡಿದರು.

ಇದೇ ಸಪ್ಡೆಂಬರ್‌ 3 ಮತ್ತು 4 ರಂದು ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಬೆಂಗಳೂರು ಇವರ ಆಶ್ರಯದಲ್ಲಿ ಸಿಂಧನೂರು ತಾಲೂಕಾ ಘಟಕದ ವತಿಯಿಂದ “ರಾಜ್ಯ ಮಟ್ಟದ ಪತ್ರಿಕಾ ಕಾರ್ಯಗಾರ ಮತ್ತು ಸಿಂಧನೂರು ತಾಲೂಕಾ ಘಟಕ ಉದ್ಘಾಟನೆ, ಪದಗ್ರಹಣ ಕಾರ್ಯಕ್ರಮ”ವನ್ನು ಹಮ್ಮಿಕೊಂಡಿದ್ದರು. ಈ ವೇಳೆಯಲ್ಲಿ ಕುಕನೂರು ತಾಲೂಕ ಘಟಕದ ಅಧ್ಯಕ್ಷರಾಗಿ “ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ ಮಾಧ್ಯಮ“ದ ಸಂಪಾದಕ ಹಾಗೂ ಯುವ ಪತ್ರಕರ್ತ ಚಂದ್ರು ಆರ್‌ ಭಾನಾಪೂರ್‌ ಅವರನ್ನು ನೇಮಕ ಮಾಡಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಬೆಂಗಳೂರು, ರಾಜ್ಯ ಉಪಾಧ್ಯಕ್ಷ ಮೊಹ್ಮದ ಇಷಾಕ್‌ ತೆಕ್ಕಲಕೋಟೆ, ಕೊಪ್ಪಳ ಜಿಲ್ಲಾಧ್ಯಕ್ಷ ಸುನೀಲ್‌ ಕುಮಾರ್‌ ಮಠದ್, ರಾಯಚೂರು ಜಿಲ್ಲಾಧ್ಯಕ್ಷ ಸೈಯದ್‌ ಅಬ್ದುಲ್‌ ಗನಿ, ಸೇರಿದಂತೆ ಇನ್ನಿತರರು ಇದ್ದರು.

Leave a Reply

error: Content is protected !!