ದೆಹಲಿ : ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024 ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬರ್ಜರಿ 8 ವಿಕೆಟ್‌ಗಳ ಗೆಲುವು ಸಾಧಿಸಿದರು.
ಆರ್.ಸಿ.ಬಿ ನಾಯಕಿ ಸ್ಮೃತಿ ಮಂದಾನ ಮುಂದಾಳತ್ವದ ತಂಡವು 16 ವರ್ಷಗಳ ಬಳಿಕ ಆರ್.ಸಿ.ಬಿ ಕಪ್ ಕಾಯುವಿಕೆಯನ್ನು ಕೊನೆಗೊಳಿಸಿದರು. ಆರ್‌ಸಿಬಿ ದಂತಕಥೆ ಕಿಂಗ್ ವಿರಾಟ್ ಕೊಹ್ಲಿ ಮಂದಾನ ಅವರಿಗೆ ವೀಡಿಯೊ ಕರೆ ಮಾಡುವ ಮೂಲಕ WPL ಫೈನಲ್‌ನಲ್ಲಿ ತಂಡದ ಸಂಭ್ರಮಾಚರಣೆಯಲ್ಲಿ ಸೇರಿಕೊಂಡರು.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಆಟಗಾರರು ಮತ್ತು ಅಭಿಮಾನಿಗಳು ಸಂಭ್ರಮಿಸುತ್ತಿದ್ದಂತೆ ಭಾವೋದ್ವೇಗ ಹೆಚ್ಚಾಯಿತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ವೈಭವವನ್ನು ಸಂಭ್ರಮಿಸುತ್ತಿದ್ದ ಸ್ಮೃತಿ ಮಂದಾನ ಮತ್ತು ಅವರ ತಂಡದ ಸದಸ್ಯರಿಗೆ ಕಿಂಗ್ ವಿರಾಟ್ ಅವರ ವೀಡಿಯೊ ಕರೆ ವಿಶೇಷವಾಗಿತ್ತು.