You are currently viewing BIG NEWS : ಬ್ಯಾಲೆಟ್ ಪೇಪರ್ ಅಂದ್ರೆ ಬಿಜೆಪಿಗೆ ನಡುಕ : ಸಿಎಂ ಸಿದ್ದರಾಮಯ್ಯ

BIG NEWS : ಬ್ಯಾಲೆಟ್ ಪೇಪರ್ ಅಂದ್ರೆ ಬಿಜೆಪಿಗೆ ನಡುಕ : ಸಿಎಂ ಸಿದ್ದರಾಮಯ್ಯ

ಪ್ರಜಾವೀಕ್ಷಣೆ ಸುದ್ದಿ :

BIG NEWS : ಬ್ಯಾಲೆಟ್ ಪೇಪರ್ ಅಂದ್ರೆ ಬಿಜೆಪಿಗೆ ನಡುಕ : ಸಿಎಂ ಸಿದ್ದರಾಮಯ್ಯ

ಕೊಪ್ಪಳ : ದೇಶದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಬ್ಯಾಲೆಟ್ ಪೇಪರ್ ಎಂದರೆ ಭಯವಾಗುತ್ತಿದ್ದು ಎಷ್ಟೋ ಮುಂದುವರಿದ ದೇಶಗಳೆ ಇವಿಎಂ ತ್ಯಜಿಸಿ ಬ್ಯಾಲೆಟ್ ಪೇಪರ್ ಗಳತ್ತ ಮುಖ ಮಾಡುತ್ತಿವೆ ಅವೆಲ್ಲ ಹಳೆಯ ಕಾಲದ ಶಿಲಾಯುಗಕ್ಕೆ ಹೋಗಿದ್ದಾವೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಜಯಪುರ ಜಿಲ್ಲೆ ಪ್ರವಾಸದ ನಿಮಿತ್ಯ ಜಿಲ್ಲೆಯ ಬಸಾಪುರ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಕುರಿತು ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತ “ಅಮೆರಿಕ ಸೇರಿದಂತೆ ಮುಂದುವರೆದ ಅನೇಕ ರಾಷ್ಟ್ರಗಳು ಇವಿಎಂ ಮತಯಂತ್ರವನ್ನು ತ್ಯಜಿಸಿ ಬ್ಯಾಲೆಟ್ ಪೇಪರ್ ಗಳತ್ತ ಮುಖ ಮಾಡಿದ್ದು, ಯಶಸ್ವಿಯಾಗಿ ಮುನ್ನುಗ್ಗುತ್ತಿವೆ. ಇವಿಎಂ ತ್ಯಜಿಸಿ ಬ್ಯಾಲೆಟ್ ಪೇಪರ್ ಕಡೆ ತಿರುಗಿ ಹೋಗಿದ್ದಾರೆ ಎಂದ ಮಾತ್ರಕ್ಕೆ ಮುಂದುವರಿದ ರಾಷ್ಟ್ರಗಳೆಲ್ಲ ಶಿಲಾಯುಗದ ಕಡೆಗೆ ಹೋಗಿದ್ದಾರೆಯೇ ಎಂದು ಪ್ರಶ್ನಿಸಿದರು. ಜೊತೆಗೆ ಬ್ಯಾಲೆಟ್ ಪೇಪರ್ ಬಳಕೆ ಎಂದರೆ ಭಾರತೀಯ ಜನತಾ ಪಕ್ಷ ಅದೇಕೋ ಭಯಪಡುತ್ತಿದ್ದು, ಅವರಲ್ಲಿ ನಡುಕ ಹುಟ್ಟಿದಂತೆ ಕಂಡುಬರುತ್ತಿದೆ ಎಂದು ಹಾಸ್ಯವಾಡಿದರು.

ಈ ವೇಳೆಯಲ್ಲಿ ಸಚಿವ ಎಂ.ಬಿ ಪಾಟೀಲ್‌, ಶಾಸಕ ರಾಘವೇಂದ್ರ ಹಿಟ್ನಾಳ್ ಇನ್ನಿತರ ಅನೇಕ ಮುಂಡರು, ಅಧಿಕಾರಿಗಳುಅ ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!