LOCAL NEWS : ಭ್ರಷ್ಟಾಚಾರ ನಿರ್ಮೂಲನೆಗೆ ಸಮೂಹ ಪಾಲ್ಗೊಳ್ಳುವಿಕೆ ಅಗತ್ಯ : ರಾಜೇಶ್ ಸಂಗಣ್ಣ

ಕೊಪ್ಪಳ : ರಾಷ್ಟ್ರದಲ್ಲಿ ವಿಚಕ್ಷಣೆಯನ್ನು ಬಲಪಡಿಸಲು ಹಾಗೂ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಸಮೂಹದ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ಹೇಳಿದರು.
ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿರುವ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮುನಿರಾಬಾದ್ ಉಪ ಕೇಂದ್ರ ದ ವತಿಯಿಂದ ವಿಜಕ್ಷಣ ಜಾಗೃತಿ ಸಪ್ತಹ 2025 ಅನ್ನು ಆಚರಿಸಲಾಯಿತು. ಈ ವೇಳೆ ಪವರ್ ಗ್ರೀಡ್ ಮುಖ್ಯ ವ್ಯವಸ್ಥಾಪಕ ರಾಜೇಶ್ ಸಂಗಣ್ಣ ಮಾತನಾಡುತ್ತಾ ಈ ಆಚರಣೆಯ ಉದ್ದೇಶ ವೃತ್ತಿಜೀವನ ಮತ್ತು ವಯಕ್ತಿಕ ಜೀವನದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಜವಾಬ್ದಾರಿತನದ ಮಹತ್ವದ ಜಾಗೃತಿ ಮೂಡಿಸುವುದಾಗಿದ್ದು. ಎಲ್ಲರೂ ಉನ್ನತ ನೈತಿಕ ಮೌಲ್ಯಗಳನ್ನು ಪಾಲಿಸಿ ದೇಶದ ಪಾರದರ್ಶಕ ಮತ್ತು ಪ್ರಾಮಾಣಿಕತೆಯ ದೃಷ್ಟಿಕೋನಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.