LOCAL NEWS : ಕಳೆದ 4 ವರ್ಷಗಳಿಂದ ಬೆಳೆ ವಿಮೆ ಹಣ ರೈತರ ಖಾತೆಗೆ ಬರುತ್ತಿಲ್ಲ ಎಂದು ಬನ್ನಿಕೊಪ್ಪ ಗ್ರಾಮಸ್ಥರ ಗಂಭೀರ ಆರೋಪ!!

You are currently viewing LOCAL NEWS : ಕಳೆದ 4 ವರ್ಷಗಳಿಂದ ಬೆಳೆ ವಿಮೆ ಹಣ ರೈತರ ಖಾತೆಗೆ ಬರುತ್ತಿಲ್ಲ ಎಂದು ಬನ್ನಿಕೊಪ್ಪ ಗ್ರಾಮಸ್ಥರ ಗಂಭೀರ ಆರೋಪ!!

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : ಕಳೆದ 4 ವರ್ಷಗಳಿಂದ ಬೆಳೆ ವಿಮೆ ಹಣ ರೈತರ ಖಾತೆಗೆ ಬರುತ್ತಿಲ್ಲ ಎಂದು ಬನ್ನಿಕೊಪ್ಪ ಗ್ರಾಮಸ್ಥರ ಗಂಭೀರ ಆರೋಪ!!

ಕೊಪ್ಪಳ : ರೈತರಿಗೆ ವರದಾನವಾಗಲಿ ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಮಂತ್ರಲಯದಿಂದ ಜಾರಿಗಾಗಿರುವ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ರೈತರ ಕೈಗೆಟುಕದೆ ಕೇವಲ ಸೀಮಿತ ಜನರಿಗೆ ಮಾತ್ರ ವರದಾನವಾಗಿದೆ ಎಂದು ರೈತರು ಪ್ರತಿಭಟನೆ ನಡೆಸುವುದರೊಂದಿಗೆ ಆರೋಪ ಮಾಡಿದರು.

ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ರೈತರು ಸುಮಾರು ನಾಲ್ಕು ಐದು ವರ್ಷಗಳಿಂದ ರೈತರಿಗೆ ಸರಿಯಾದ ಬೆಳೆ ವಿಮೆ ಪಾವತಿಯಾಗಿದೆ ಕೇವಲ ಸೀಮಿತ ವ್ಯಕ್ತಿಗಳಿಗೆ ಮಾತ್ರ ಬೆಳೆ ವಿಮೆ ಸಂದಾಯವಾಗುತ್ತಿರುವುದು ಆಶ್ಚರ್ಯಕರವಾಗಿದ್ದು ಅವರು ಬೆಳೆಯುವ ಬೆಳೆ ಹಾಗೂ ಅವರಿಗೆ ಸಂದಾಯವಾಗುವ ಬೆಳೆ ವಿಮೆಯ ಬೆಳೆಯ ದಾಖಲಾತಿಗೆ ಬೇರೆ ಆಗಿರುತ್ತದೆ ಇದೊಂದು ರೀತಿಯ ಆಶ್ಚರ್ಯಕರ ಸಂಗತಿಯಾದರು ಸತ್ಯ ಸಂಗತಿ ಆಗಿದೆ ಎಂದು ರೈತ ವರ್ಗದವರು ಬನ್ನಿಕೊಪ್ಪ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಈ ಅನ್ಯಾಯವನ್ನು ತಪ್ಪಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು.

ಬನ್ನಿಕೊಪ್ಪ ಗ್ರಾಮವು ಅತಿ ಹೆಚ್ಚು ಕೃಷಿ ಭೂಮಿಯನ್ನು ಹೊಂದಿದ ಗ್ರಾಮವಾಗಿದ್ದು ಇಲ್ಲಿನ ಪ್ರತಿಯೊಬ್ಬ ರೈತರು ಸುಮಾರು ವರ್ಷಗಳಿಂದ ಬೆಳೆ ವಿಮೆಯ ಪಾವತಿ ಮಾಡುತ್ತಿದ್ದು ಮೊದಲಿಗೆ ಎರಡು ಮೂರು ವರ್ಷಗಳ ಮಾತ್ರ ಬೆಳೆವಿಮೆಯ ಪ್ರತಿ ರೈತರಿಗೂ ಸಂದಾಯವಾಗಿದ್ದು ನಂತರದ ವರ್ಷಗಳಲ್ಲಿ ಮುಂಗಾರು ಮತ್ತು ಹಿಂಗಾರು ಎರಡು ಋತುವಿನಲ್ಲಿ ಕೇವಲ ಸೀಮಿತ ವ್ಯಕ್ತಿಗಳ ಖಾತೆಗೆ ಮಾತ್ರ ಬೆಳೆ ವಿಮೆ ಸಂದಾಯವಾಗುತ್ತಿದ್ದು ಅವರು ಯಾವುದೋ ಬೆಳೆ ಹಾಕಿದರು ಸಹ ಇನ್ಯಾವುದೋ ಬೆಳೆಯ ಹೆಸರಿನಲ್ಲಿ ಅದೇ ವ್ಯಕ್ತಿಗಳ ಖಾತೆಗೆ ಪ್ರತಿವರ್ಷ ಬೆಳೆ ವಿಮೆಯ ಹಣ ಸಂದಾಯವಾಗುತ್ತಿರುವುದು ಆಶ್ಚರ್ಯಕರವಾಗಿದ್ದು ಇದರಿಂದ ಇರುವ ಕಾಣದ ಕೈಗಳು ಯಾವುದು ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದ್ದು ಸೂಕ್ತ ತನಿಖೆ ನಡೆಸುವುದರೊಂದಿಗೆ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿರುತ್ತಾರೆ.

ಮನವಿ ಪತ್ರವನ್ನು ಸ್ವೀಕರಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ ವೆಂಕಟಪುರ ಮಾತನಾಡುತ್ತಾ ವಿಷಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಪಟ್ಟ ವಿಷಯವಾಗಿದ್ದು ಅವರಿಗೆ ಪತ್ರ ಬರೆಯುವುದರ ಮುಖಾಂತರ ಸಮಸ್ಯೆ ಬಗೆಹರಿಸುವಂತೆ ವಿನಂತಿಸಲಾಗುವುದು ಎಂದು ಹೇಳಿದರು.

ಈ ವೇಳೆಯಲ್ಲಿ ಪ್ರಮುಖ ರೈತರದ ಯಂಕಣ್ಣ ದೇಸಾಯಿ, ಷಣ್ಮುಖಪ್ಪ ಸಣ್ಣ ಯರಾಶಿ, ಶರಣಗೌಡ ಶಿವನಗೌಡ, ಬಾಬಣ್ಣ ತಗ್ಗಿನಮನಿ, ಶರಣಪ್ಪ ಗೌಡ ಗೂಳಪ್ಪ ಗೌಡ್ರು, ಅಂಬರೀಶ್ ದಂಬಳ, ಹನುಮಂತಪ್ಪ ಆಡವಳ್ಳಿ, ಅಶೋಕ್ ಶಿವಪ್ಪ ಗೌಡ್ರು, ಅಲ್ಲಾ ಸಾಬ್ ಆರಡುಗಿ, ಪಂಪಣ್ಣ ಸಜ್ಜನ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

error: Content is protected !!