LOCAL NEWS : ಅವಳಿ ತಾಲೂಕಿನಲ್ಲಿ 500 ಕೃಷಿ ಹೊಂಡಗಳನ್ನು ನಿರ್ಮಿಸಲು ಸರ್ಕಾರ ಅನುಮತಿ : ಶಾಸಕ ಬಸವರಾಜ ರಾಯರೆಡ್ಡಿ

You are currently viewing LOCAL NEWS : ಅವಳಿ ತಾಲೂಕಿನಲ್ಲಿ 500 ಕೃಷಿ ಹೊಂಡಗಳನ್ನು ನಿರ್ಮಿಸಲು ಸರ್ಕಾರ ಅನುಮತಿ : ಶಾಸಕ ಬಸವರಾಜ ರಾಯರೆಡ್ಡಿ
filter: 0; fileterIntensity: 0.0; filterMask: 0; module: a; hw-remosaic: 0; touch: (0.5277778, 0.5277778); modeInfo: ; sceneMode: Auto; cct_value: 0; AI_Scene: (200, -1); aec_lux: 265.83008; hist255: 0.0; hist252~255: 0.0; hist0~15: 0.0;

LOCAL NEWS : 500 ಕೃಷಿ ಹೊಂಡಗಳನ್ನು ನಿರ್ಮಿಸಲು ಸರ್ಕಾರ ಅನುಮತಿ : ಶಾಸಕ ಬಸವರಾಜ ರಾಯರೆಡ್ಡಿ

ಕುಕನೂರು : ಅವಳಿ ತಾಲೂಕಿಗೆ ಬರೋಬ್ಬರಿ 500 ಕೃಷಿ ಹೊಂಡಗಳನ್ನು ನಿರ್ಮಿಸಲು ಸರ್ಕಾರ ಅನುಮತಿ ನೀಡಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕ ಶಾಸಕ ಬಸವರಾಜ ರಾಯರೆಡ್ಡಿ ಅವರು ತಿಳಿಸಿದರು.

ಇಂದು ತಾಲೂಕಿನ ತಳಕಲ ಗ್ರಾಮದಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ರಾಯಚೂರು -ಬೀಜ ಘಟಕ ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ “ಹಿಂಗಾರು ಬೀಜ ದಿನೋತ್ಸವ ಮತ್ತು ಬೀಜ ಗ್ರಾಮ ಯೋಜನೆ ಅಡಿಯಲ್ಲಿ ಕಡಲೆ ಬೀಜ (ಬಿಜಿಡಿ111-1) ವಿತರಣಾ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿತ್ತು.

ಈ ಕುರಿತು ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ ಅವರು, ‘ರಾಜ್ಯದ ಮುಖ್ಯಮಂತ್ರಿಗಳು ಬಹಳ ವಿಶೇಷವಾಗಿ ನಮ್ಮ ಭಾಗಕ್ಕೆ ಮಳೆ ಆಧಾರಿತ ಕೃಷಿ ಪದ್ಧತಿ ಇರುವುದರಿಂದ, ರೈತರ ಹೊಲಗಳಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೆ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯದಿಂದ ನುರಿತ ಪರಿಣಿತ ವಿಜ್ಞಾನಿಗಳು ಈ ಕಾರ್ಯಕ್ರಮದ ಮೂಲ ಆಸೆಗಳನ್ನು ಮತ್ತು ರೈತರಿಗೆ ಬೀಜ ಸಂಸ್ಕರಣೆ ಹಾಗೂ ಬೀಜ ಉತ್ಪಾದನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ವಿಜ್ಞಾನಿ ಹಾಗೂ ಸಂಶೋಧನಾ ಕೇಂದ್ರ ನಿರ್ದೆಶಕರು ಅಮರೇಶ್ ಗೌಡ, ‘ ಮೂಲ ಬೀಜ ಉತ್ಪಾದನೆಯ ಈ ಕಡೆ ಬೀಜಗಳನ್ನ4 ಬಾರಿ ಬಿತ್ತನೆ ಮಾಡಬಹುದಾಗಿದೆ. ಸಂಸ್ಕರಣೆಗೊಂಡ ಮೂಲ ಕಡಲೆ ಬೀಜಗಳು, ಒಂದು ಎಕರೆ ಕಡಲೆ ಬೀಜಗಳನ್ನ ಬಿತ್ತನೆ ಮಾಡಿದರೆ 8 ರಿಂದ 10 ಕ್ವಿಂಟಲ್ ಬೆಳೆ ಇಳುವರಿ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಆದರೆ ಬಿತ್ತನೆ ಮಾಡುವ ಕ್ರಮ ವಿಧಾನ ಹಾಗೂ ಸಿಂಪಡಿಸುವ ರಾಸಾಯನದ ಬಗ್ಗೆ ಸಂಪೂರ್ಣ ಜ್ಞಾನ ಇರಬೇಕಾಗುತ್ತದೆ. ಈ ಮೂಲ ಕಡಲೆ ಬೀಜಗಳನ್ನ ಬಿತ್ತಿದರೆ, ಮುಂದೆ ಕೇವಲ 90 ರಿಂದ 100 ದಿನಗಳ ಒಳಗೆ ನಿಮ್ಮ ಬೆಳೆ ಇಳುವರಿ ಕಟಾವಿಗೆ ಬರಲಿದೆ. ನಮ್ಮ ಸಂಶೋಧನಾ ಕೇಂದ್ರದಲ್ಲಿ ಸಾಕಷ್ಟು ಪರಿಣಿತ ಹೊಂದಿರುವ ವಿಜ್ಞಾನಿಗಳು ಇದ್ದಾರೆ. ಇವರುಗಳ ಪರಿಶ್ರಮದಿಂದಲೇ ಇಂದು ಈ ಕಡಲೆ ಬೀಜಗಳ ಸಂಸ್ಕರಿಸಿ ಅತ್ಯುನ್ನತ ಮಟ್ಟದಲ್ಲಿ ಬಿಜೋತ್ತಾನ ಮಾಡಿ, 60 % ಸಬ್ಸಿಡಿ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ ಎಂದರು.

ಈ ಕಾರ್ಯಕ್ರಮದ ಕುರಿತು ತಿಮ್ಮಣ್ಣ ಚೌಡಿ ಮಾತನಾಡಿ, ‘ ತಳಕಲ್ ಭಾಗದಲ್ಲಿ ಸಾಕಷ್ಟು ಕಪ್ಪು ಮಿಶ್ರಿತ ಮಣ್ಣು ಇರುವುದರಿಂದ ಹಿರೇಮಣ್ಣು ಇರುವುದರಿಂದ ನಮಗೆ ಕಡಲೆ, ಜೋಳ, ಹೆಸರು, ಹೀಗೆ ಮುಂತಾದವುಗಳನ್ನು ಬೆಳೆಯುತ್ತೇವೆ. ನಮಗೆ ಸರಿಯಾದ ಸಮಯದಲ್ಲಿ ಸರಿಯಾದ ಬೀಜಗಳು ಬಿತ್ತನೆ ಮಾಡಿದಾಗ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಕಂಡರೆ ರೈತರಿಗೆ ಮಂದಹಾಸ ಮೂಡುತ್ತದೆ. ಹಾಗಾಗಿ ಇಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಸಾಕಷ್ಟು ಪರಿಣಿತ ಹೊಂದಿರತಕ್ಕಂಥ ವಿಜ್ಞಾನಿಗಳು ನಮ್ಮ ಗ್ರಾಮಕ್ಕೆ ಆಗಮಿಸಿದ್ದಾರೆ ತರಿಗೆ ಬಿತ್ತನೆ ಮಾಡುವಾಗ ಯಾವುದೇ ಸಮಸ್ಯೆಗಳು ಅಥವಾ ಗೊಂದಲಗಳ ಇದ್ದಲ್ಲಿ ನೇರವಾಗಿ ಅವರಿಗೆ ಕೇಳಿ ಪರಿಹಾರ ಪಡೆದುಕೊಳ್ಳಬೇಕೆಂದು ಹೇಳಿದರು.

ಕುಕನೂರು ತಾಲೂಕಿಗೆ ನೂತನ ಕೃಷಿ ವಿಜ್ಞಾನಗಳ ಸಂಶೋಧನೆ ಕೇಂದ್ರ

‘ತಾಲೂಕಿನ ಬೆನಕಲ್ಲು ಗ್ರಾಮದಲ್ಲಿ ಬರುವ ದಿನಗಳಲ್ಲಿ ಶಾಸಕ ಬಸವರಾಜ್ ರೆಡ್ಡಿ ಅವರ ನಮ್ಮ ತಾಲೂಕಿನ ರೈತರಿಗೆ ಹಿತದೃಷ್ಟಿಯಿಂದ ಅತ್ತುನ್ನತ ಕೃಷಿ ವಿಜ್ಞಾನಗಳ ಸಂಶೋಧನಾ ಕೇಂದ್ರವನ್ನ ಆರಂಭಿಸುವ ಕುರಿತು ಈಗಾಗಲೇ ನಮ್ ಭಾಗದ ರೈತರು ನಾವುಗಳು ಕೂಡಿ ಮನವಿ ಮಾಡಿದ್ದೇವೆ. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ನಮ್ಮ ಶಾಸಕರು ಈ ಕೃಷಿ ಸಂಶೋಧನೆಗಳ ಕೇಂದ್ರವನ್ನ ಖಂಡಿತವಾಗಿಯೂ ಸ್ಥಾಪನೆ ಮಾಡೋಣ ಎಂದು ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡ ಶಿವಣ್ಣ ರಾಯರೆಡ್ಡಿ ಮಾತನಾಡಿ, ‘ ನಮ್ಮ ಭಾಗದ ಪ್ರತಿಭಾನ್ವಿತ ರೈತರನ್ನು ಗುರುತಿಸಿ, ಮಾನ ಸನ್ಮಾನ ಪುರಸ್ಕಾರವನ್ನು ಮಾಡಿ, ಅವರನ್ನ ಉತ್ತೇಜಿಸುವ ಕೆಲಸ ಆರಂಭವಾಗಬೇಕಿದೆ. ಜೊತೆಗೆ ಬೇರೆ ಬೇರೆ ದೇಶಗಳಲ್ಲಿ ಇರುವಂತ ಕೃಷಿ ಪದ್ಧತಿಗಳ ಕುರಿತ ಅಧ್ಯಯನ ತರಬೇತಿ ಕೇಂದ್ರ ಹೆಚ್ಚಿನ ಪ್ರವಾಸಕ್ಕಾಗಿ ರೈತರನ್ನ ವಿದೇಶಕ್ಕೆ ಕಳಿಸು ಅಂತ ಪದ್ಧತಿ ಜಾರಿಯ ಆಗಬೇಕಿದೆ. ಸರ್ಕಾರ ಸಾಕಷ್ಟು ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದು ಇದರ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಮಗದಷ್ಟು ತಿಳಿದುಕೊಳ್ಳುವುದಕ್ಕೆ ಜಪಾನ್ ಕೃಷಿ ಮಾದರಿ ಇಸ್ರೇಲ್ ಕೃಷಿ ಮಾದರಿ ಸಣ್ಣ ಸಣ್ಣ ದೇಶಗಳಲ್ಲಿ ಯಾವ ರೀತಿ ಉನ್ನತ ಮಟ್ಟದ ಕೃಷಿ ತಂತ್ರಜ್ಞಾನವನ್ನು ಬಳಸಲಿದ್ದಾರೆ ಎಂಬುದರ ಕುರಿತು ನಮ್ಮ ದೇಶದ ರೈತರಿಗೆ ತರಬೇತಿಗಳು ಆಗಬೇಕಿದೆ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ತಳಕಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಹೀರ ಬೇಗಂ ಜಾಕಿರ್ ಹುಸೇನ್, ಉಪಾಧ್ಯಕ್ಷೆ ಜಿಂದಾಬಿ ಫಕ್ರುದ್ದೀನ್ ಸಾಬ್ ಗುಡುಗುಡಿ, ಡಾ. ಕುರುಬರು ಎ.ಆರ್. ಜಂಟಿ ಕೃಷಿ ನಿರ್ದೇಶಕರು, ಕೊಪ್ಪಳ ರುದ್ರೇಶಪ್ಪ ಟಿಎಸ್, ಕೃಷಿ ವಿಜ್ಞಾನಿ ರಾಘವೇಂದ್ರ ಎಲಿಗಾರ್, ಕೃಷಿ ವಿಜ್ಞಾನಿ ಉಮೇಶ್ ಹಿರೇಮಠ ವಿಜಯಕುಮಾರ್ ಕೆ ರಾದ ಜಿ ಹನುಮಂತಪ್ಪ ದಾಸನಹಳ್ಳಿ ಇನ್ನು ಅನೇಕ ಕೃಷಿ ವಿಜ್ಞಾನಿಗಳು ಹಾಗೂ ತಳಕಲ್ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.

Leave a Reply

error: Content is protected !!