You are currently viewing LOCAL EXPRESS : ಪ್ರತಿಭಟನೆ : ಒಳ ಮೀಸಲಾತಿ ಸಮೀಕ್ಷೆ ಅವೈನಿಜ್ಞಾಕ, ಕಾನೂನು ಬಾಹಿರ!, ಇದರಿಂದ ಕೊಲಂಭೋ ಸಮುದಾಯಗಳಿಗೆ ಘೋರ ಅನ್ಯಾಯ..!!

LOCAL EXPRESS : ಪ್ರತಿಭಟನೆ : ಒಳ ಮೀಸಲಾತಿ ಸಮೀಕ್ಷೆ ಅವೈನಿಜ್ಞಾಕ, ಕಾನೂನು ಬಾಹಿರ!, ಇದರಿಂದ ಕೊಲಂಭೋ ಸಮುದಾಯಗಳಿಗೆ ಘೋರ ಅನ್ಯಾಯ..!!

ಪ್ರಜಾ ವೀಕ್ಷಣೆ ಸುದ್ದಿ : 

LOCAL EXPRESS : ಬೃಹತ್ ಪ್ರತಿಭಟನೆ : ಒಳ ಮೀಸಲಾತಿ ಸಮೀಕ್ಷೆ ಅವೈನಿಜ್ಞಾಕ, ಕಾನೂನು ಬಾಹಿರ!, ಇದರಿಂದ ಕೊಲಂಭೋ ಸಮುದಾಯಗಳಿಗೆ ಘೋರ ಅನ್ಯಾಯ..!!

ಒಳ ಮೀಸಲಾತಿ ಸಮೀಕ್ಷೆ ಅವೈನಿಜ್ಞಾಕ, ಕಾನೂನು ಬಾಹಿರ!, ಇದರಿಂದ ಬಂಜಾರ ಕೊರಮ ಕೊರಚ ಬೋವಿ ಸಮುದಾಯಗಳಿಗೆ ಘೋರ ಅನ್ಯಾಯವಾಗಲಿದೆ : ಸುರೇಶ್‌ ಬಳೂಟಗಿ ಆರೋಪ!

ಕುಕನೂರು : ರಾಜ್ಯ ಸರ್ಕಾರವು ಒಳಮೀಸಲಾತಿ ವರ್ಗೀಕರಣವನ್ನು ನೈಜತೆಯ ಆದಾರದ ಮೇಲೆ ಮಾಡಿರುವುದಿಲ್ಲ. ಇದು ಅವೈನಿಜ್ಞಾಕ ಕಾನೂನು ಬಾಹಿರವಾಗಿರುವ ತೀರ್ಮಾನವಾಗಿದೆ. ಇದರಿಂದ ಬಂಜಾರ ಕೊರಮ ಕೊರಚ ಬೋವಿ ಸಮುದಾಯಗಳಿಗೆ ಘೋರ ಅನ್ಯಾಯವಾಗಲಿದೆ ಎಂದು ಗೋರ್‌ ಸೇನಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯಧರ್ಶಿ ಸುರೇಶ್‌ ಬಳೂಟಗಿ ಆರೋಪಿಸಿದರು.

ಇಂದು ಕುಕನೂರು ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ರ್ಯಾಲಿ ಹಮ್ಮಿಕೊಂಡಿದ್ದರು, ಈ ಕುರಿತು ಮಾತನಾಡಿದ ಅವರು, ‘ನ್ಯಾ. ನಾಗಮೋಹನದಾಸ್ ಆಯೋಗವು ಪರಿಶಿಷ್ಠ ಜಾತಿಗಳ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಲಂಬಾಣಿ ಸಮುದಾಯದ ಜನರು ಗೋವಾ, ಕೇರಳ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಗೆ ಹೊಟ್ಟೆಪಾಡಿಗಾಗಿ ವಲಸ ಹೋಗಿದ್ದರು ಅವರು ಈ ಸಮೀಕ್ಷೆಯಿಂದ ಹೊರ ಉಳಿದಿದ್ದಾರೆ, ಈ ಸಮೀಕ್ಷೆಗೆ ಒಳಪಟ್ಟಿಲ್ಲ, ಹಾಗಾಗಿ ಅವೈಜ್ಞಾಕ ಕಾನೂನು ಬಾಹಿರವಾಗಿರುವುದು ಸತ್ಯವಿದೆ, ಆದ್ದರಿಂದ ಈ ಒಳಮೀಸಲಾತಿಯನ್ನು ಇಲ್ಲೆಗ ಕೈಬೀಟ್ಟು ಯತ್ತಾವತ್ತಾಗಿ ಜಾರಿ ಆಬೇಕು ಇಲ್ಲವಾರೇ, ಅಲೆಮಾರಿಗಳ ಸಮುದಾಯಗಳನ್ನು ಹೊರತುಪಡೆಸಿ 5 % ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆಯಲ್ಲಿ ಬಂಜಾರರ ಸಾಂಪ್ರದಾಯಿಕ ಉಡುಗೆ ತುಡಿಗಳನ್ನು ತೊಟ್ಟು ಕುಲ ಕಸುಬು ಕಟ್ಟಿಗೆ ಮಾರುವುದರ ವೇಶಧರಿಸಿ ಜೊತೆಗೆ ಬಹಳ ವಿಭಿನ್ನವಾಗಿ ಯುವಕರು ತಮ್ಮ ತಲೆ ಕೂದಲನ್ನು ಬೋಳಿಸುವ ಮುಖಾಂತರ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಸರಿಯಾದ ಮಾರ್ಗ ಅನುಸರಿಸದೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡದೆ ದತ್ತಾಂಶಗಳನ್ನು ಕೃಡೀಕರಿಸಿ ಸಿದ್ಧಪಡಿಸಿರುವ ಈ ವರದಿಯನ್ನು ಅಂಗೀಕರಿಸಬಾರದು. ಮತ್ತೊಮ್ಮೆ ನೈಜತೆಯಿಂದಿರುವ ದತ್ತಾಂಶಗಳನ್ನು ಸಮೀಕ್ಷಯ ಮೂಲಕ ಕೃಡೀಕರಿಸಲು ಆಯೋಗಕ್ಕೆ ಸೂಚಿಸಬೇಕು. ಇಲ್ಲವಾದಲ್ಲಿ ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಮಾಡುವ ಜನಸಂಖ್ಯೆ ಹಾಗೂ ಜಾತಿಗಣತಿಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಮಾತನಾಡಿದ ಯಮನೂರಪ್ಪ ಕಟ್ಟಿಮನಿ, ‘ಬುಡಗ ಜಂಗಮ ಸೇರಿದಂತೆ ಅಲೆಮಾರಿ ಸಮುದಾಯಗಳ 59 ಜಾತಿಯ ಸಹೋದರ ಸಮುದಾಯಗಳನ್ನು ಸಿ ಗುಂಪಿನಿಂದ ತಗೆದು ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು. ದಯವಿಟ್ಟು ಬಂಜಾರ ಲಂಬಾಣಿ, ಕೊರಮ, ಕೊರಚ, ಬೋವಿ ಸಮುದಾಯದ ಜನತೆಗೆ ಸಾಂವಿಧಾನಿಕವಾಗಿ ಮೀಸಲಾತಿಯ ನ್ಯಾಯ ನೀಡಬೇಕು, ಈ ನಮ್ಮ ಹೋರಾಟವನ್ನು ಕಡೆಗೆಣಸಿದರೇ, ಮುಂದಿನ ದಿನದಲ್ಲಿ ಉಗ್ರ ಹೋರಾಟಕ್ಕೂ ನಾವು ಸಿದ್ದರಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ಈ ವೇಳೆಯಲ್ಲಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಶಿರೂರು ವೀರಭದ್ರಪ್ಪ ವೃತ್ತದವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ಮಾಡಿ ಬಳಿಕ ಕುಕನೂರು ತಹಶೀಲ್ದಾರ್ ಹೆಚ್ ಪ್ರಾಣೇಶ್ ಅವರಿಗೆ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಲಂಬಾಣಿಗರ ನಂಗಾರ,ವಾಜಾ ಅಂದರೆ ಭಜನೆ ಮಾಡುತ್ತಾ ತಮ್ಮ ಕುಲಕಸಬು ಕಟ್ಟಿಗೆ ಮಾರುವು ರೀತಿಯಲ್ಲಿ ವೇಶಧರಿಸಿ ಬಹಳ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮೇಘರಾಜ್‌ ಬಳಗೇರಿ, ಬಸವರಾಜ ನಾಯ್ಕ್, ಜೀತು ನಾಯ್ಕ್‌, ಹಂಪಣ್ಣ ಕಟ್ಟಿಮನಿ, ಯಮನೂರಪ್ಪ ಕಟ್ಟಮನಿ, ಯಲ್ಲಪ್ಪ ಕಾರಭಾರಿ, ಯಮನೂರಪ್ಪ ಭಾನಾಪೂರ್‌, ಪರಸಪ್ಪ ಕಾರಭಾರಿ, ತುಕಾರಂ ಹೊನ್ನುಂಚಿ, ಸೋಮಪ್ಪ ಚಿಕೇನಕೊಪ್ಪ, ಕಳಕೇಶ್ ನಾಯ್ಕ್, ಮಹಿಳಾ ಮುಖಂಡರಾದ ದೇವವ್ವ ಕಟ್ಟಿಮನಿ, ಶಿವವ್ವ ಭಾನಾಪುರ, ಲಕ್ಷ್ಮವ್ವ ಬಳಗೇರಿ, ಸೋನವ್ವ ಚಿಕೆನಕೊಪ್ಪ, ಹೊನ್ನವ್ವ ಇಟಗಿ, ಶಾಂತವ್ವ ಕಾರಭಾರಿ, ನಾಗಮ್ಮ ರಾಠೋಡ್‌, ಪಾರವ್ವ ಕಾರಭಾರಿ, ಶ್ರೀಮತಿ ಜಾನಕಿ ನಾಯ್ಕ್, ಶಾಂತವ್ವ ಚವ್ಹಾಣ ಹಾಗೂ ಶ್ರೀಕಾಂತ್ ಕಟ್ಟಿಮನಿ, ರಾಘವೇಂದ್ರ ಬಳಗೇರಿ, ಪ್ರಕಾಶ್‌ ಬಳಗೇರಿ, ಹೋಬಣ್ಣ ಚವ್ಹಾಣ, ಬಸುವರೆಡ್ದೆಪ್ಪ ಬಳಗೇರಿ, ಹನುಮಂತಪ್ಪ ಚವ್ಹಾಣ, ಕಲ್ಲಪ್ಪ ಕಟ್ಟಿಮನಿ, ತಿರುಪತಿ ಕಟ್ಟಿಮನಿ, ಕುಮಾರ್ ಬಳಗೇರಿ ಇನ್ನು ಸಮಾಜ ಮುಖಂಡರು ಹಾಗೂ ಕೊಲಂಭೋ ಸಮಾಜದ ಮುಖಂಡರು ಭಾಗವಹಿಸಿದ್ದರು.

Leave a Reply

error: Content is protected !!