You are currently viewing ALERT NEWS :”ಸಿಂಧನೂರು | ವಾಹನ ಬಾಡಿಗೆ ಪಡೆಯುವ ನೆಪ : ಅಕ್ರಮವಾಗಿ ಅನ್ಯರಿಗೆ ಮಾರಾಟ ಮಾಡಿ  ಮಾಲೀಕರಿಗೆ ಮೋಸ.! ಪ್ರಕರಣ ದಾಖಲು”

ALERT NEWS :”ಸಿಂಧನೂರು | ವಾಹನ ಬಾಡಿಗೆ ಪಡೆಯುವ ನೆಪ : ಅಕ್ರಮವಾಗಿ ಅನ್ಯರಿಗೆ ಮಾರಾಟ ಮಾಡಿ  ಮಾಲೀಕರಿಗೆ ಮೋಸ.! ಪ್ರಕರಣ ದಾಖಲು”

ಸಿಂಧನೂರು | ವಾಹನ ಬಾಡಿಗೆ ಪಡೆಯುವ ನೆಪ : ಅಕ್ರಮವಾಗಿ ಅನ್ಯರಿಗೆ ಮಾರಾಟ ಮಾಡಿ  ಮಾಲೀಕರಿಗೆ ಮೋಸ.! ಪ್ರಕರಣ ದಾಖಲು”

 

• ಪ್ರಜಾ ವೀಕ್ಷಣೆ  ಡೆಸ್ಕ್‌ ನ್ಯೂಸ್‌ :

ಸಿಂಧನೂರ : ಸೋಲಾರ್ ಮತ್ತು ವಾಯು ವಿದ್ಯುತ್ ಕಂಪನಿಗಳ ಹೆಸರು ಹೇಳಿಕೊಂಡು ಬಳ್ಳಾರಿಯಲಿ ಬಾಡಿಗೆಗೆ ನೀಡುವುದಾಗಿ ಹೇಳಿ ವಾಹನಗಳನ್ನು ಪಡೆದು ಸಿಂಧನೂರಿನಲ್ಲಿ ಅಕ್ರಮವಾಗಿ ಮಾರಾಟ ಮಾಡಿ ಮಾಲೀಕರಿಗೆ ಮಕ್ಮಲ್ ಟೋಪಿ ಹಾಕಿದ ವಿಶೇಷ ಪ್ರಕರಣವೊಂದು ಸಿಂಧನೂರಿನಲ್ಲಿ ಬಯಲಿಗೆ ಬಂದಿದೆ.

ಸುಮಾರು 50ಕ್ಕೂ ಹೆಚ್ಚು ವಾಹನಗಳನ್ನ ಸಿಂಧನೂರು ನಗರದಲ್ಲಿ ಬಳ್ಳಾರಿಯಿಂದ ಬಾಡಿಗೆ ನೀಡುವುದಾಗಿ ತಂದು ಇಲ್ಲಿನ ಜನರಿಗೆ ಮೋಸದಿಂದ ಮಾರಾಟ ಮಾಡಿ ಹಣ ಪಡೆದ ಘಟನೆಯೊಂದು ನಡೆದಿದೆ. ಮೊಹಮ್ಮದ್ ಜಾಹಿದ್ ಎಂಬ ಯುವಕ ಬಳ್ಳಾರಿಯಲಿ ಸುಮಾರು ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ನೂರಕ್ಕೂ ಹೆಚ್ಚು ಮಾಲೀಕರಿಗೆ ಮೋಸದಿಂದ ವಾಹನಗಳನ್ನ ಪಡೆದು ರಾಯಚೂರು ತಾಲೂಕಿನ ಸಿಂಧನೂರು ಐವತ್ತಕ್ಕೂ ಹೆಚ್ಚು ವಾಹನಗಳನ್ನು ಮೋಸದಿಂದ ಮಾರಾಟ ಮಾಡುವ ಮುಖಾಂತರ ಅನ್ಯಾಯ ಮಾಡಿದ್ದಾನೆ.

 ಸಿಂಧನೂರಿಗೆ ಆಗಮಿಸಿದ ಸಿಪಿಐ ಮಹಾಂತೇಶ ಮತ್ತು ಸಿಪಿಐ ಮಹಮ್ಮಸ್ ರಫಿ ಅವರ ತಂಡ ಸುಮಾರು 25 ವಾಹನಗಳನ್ನು ವಶಕ್ಕೆ ಪಡೆದಿದ್ದು ಇನ್ನೂ ಸಾಕಷ್ಟು ವಾಹನಗಳು ಸಿಂಧನೂರಿನಲ್ಲಿ ಮಾರಾಟ ಮಾಡಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ಖರೀದಿ ಮಾಡಿರುವ ಮಾಲೀಕರು ಕೂಡಲೇ ವಾಹನಗಳನ್ನು ಬಳ್ಳಾರಿ ಪೊಲೀಸ್ ಠಾಣೆ ಅಥವಾ ಸಿಂಧನೂರು ನಗರ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Prajavikshane

Chandru R Bhanapaur

Leave a Reply

error: Content is protected !!