LOCAL NEWS : ಮುದಗಲ್ಲ : ರಾಯಚೂರು – ಬೆಳಗಾವಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರಸ್ತೆ ಗುಂಡಿ ಗಂಡಾಂತರ : ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ..!
BREAKING :- ಸುಗಮ ಸಂಚಾರಕ್ಕೆ ರಸ್ತೆಯ ತಗ್ಗು ಗುಂಡಿ ಅಡ್ಡಿ…
ಮುದಗಲ್ಲ : ರಸ್ತೆ ಮೇಲಿನ ಗುಂಡಿಗಳು ಬಾಯ್ದೆರೆದು ಕುಳಿತಂತೆ ಕಾಣುತ್ತಿದೆ. ಎಲ್ಲಿ ನೋಡಿದರೂ ರಸ್ತೆ ತುಂಬಾ ಗುಂಡಿಗಳೆ ತುಂಬಿಕೊಂಡಿದ್ದು ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರು ಹಾರಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ.

ರಾಯಚೂರು – ಬೆಳಗಾವಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಮಧ್ಯೆಯೇ ಅಪಾಯಕಾರಿ ಗುಂಡಿ ನಿರ್ಮಾಣಗೊಂಡಿದ್ದು ವಾಹನ
ಸವಾರರಿಗೆ ಜೀವ ಕಂಟಕವಾಗಿದೆ.

ಶ್ರೀ ಆಂಜನೇಯ ದೇವಸ್ಥಾನ ದಿಂದ ಕೆನರಾ ಬ್ಯಾಂಕ್ ಮುಖ್ಯ ರಸ್ತೆ ಮಧ್ಯೆಯೇ ಈ ಗುಂಡಿ ನಿರ್ಮಾಣಗೊಂಡಿದೆ. ಆರಂಭದಲ್ಲಿ ಚಿಕ್ಕದಾದ ಗುಂಡಿಯಾಗಿದ್ದು ಇದನ್ನು ಹಲವು ಬಾರಿ ಸ್ಥಳೀಯರು
ಮಣ್ಣು, ಜಲ್ಲಿ ಹಾಕಿ ಮುಚ್ಚಿದ್ದರು ಆದರೆ ಅಲ್ಪ ಸ್ವಲ್ಪ ಪ್ರಮಾಣದ ಮಳೆಗೆ ಜಲ್ಲಿ ಮಣ್ಣು ಎದ್ದು ಹೋಗಿ ಇಡೀ ರಸ್ತೆಯೇ ಸಂಪೂರ್ಣ ಗುಂಡಿಯಾಗಿದೆ. ಇದು ಅತ್ಯಂತ ಅಪಾಯಕಾರಿ ಗುಂಡಿಯಾಗಿದೆ ಏಕೆಂದರೆ ವಾಹನ ಸವಾರರಿಗೆ ಇಲ್ಲಿ ಗುಂಡಿ ಇದೆ ಎಂಬುದು ಹತ್ತಿರ ಬಂದ ಮೇಲಷ್ಟೆ ತಿಳಿಯುತ್ತದೆ ನೇರ ರಸ್ತೆ ಇದಾಗಿರುವುದರಿಂದ ವಾಹನ ಸವಾರರು ವೇಗವಾಗಿ ವಾಹನ ಚಲಾಯಿಸಿಕೊಂಡು ಬರುತ್ತಾರೆ ಇದರಿಂದ ಗುಂಡಿಗೆ ವಾಹನಗಳನ್ನು ಇಳಿಸದೇ ಬೇರೆ ಉಪಾಯ ವಿಲ್ಲದಂತಾಗಿದೆ.

ಡಾಂಬರ್ ಜಲ್ಲಿ ಸಂಪೂರ್ಣ ಎದ್ದು ಹೋಗಿ ಇಡೀ ರಸ್ತೆ ಗುಂಡಿಯಾಗಿ ರುವುದರಿಂದ ಇದಕ್ಕೆ ಮಣ್ಣು, ಕಲ್ಲು ಹಾಕಿ ಸರಿಪಡಿಸುವ ಅಸಾಧ್ಯ ವಾಗಿದೆ. ಈ ಹಿಂದೆ ಹಲವು ಬಾರಿ ಸ್ಥಳೀಯರು ಕಲ್ಲು, ಮಣ್ಣು ಹಾಕಿ ಸರಿಪಡಿಸಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಡಾಂಬರ್ ಹಾಕಿಯೇ ಸರಿಪಡಿಸ ಬೇಕಾಗಿದೆ. ದುರಂತ ಸಂಭವಿಸುವ ಮುನ್ನ ಸಂಬಂಧ ಪಟ್ಟ ಇಲಾಖೆಯವರು ಎಚ್ಚೆತ್ತು ಕೊಂಡು ಇದಕ್ಕೆ ಪ್ಯಾಚ್ ವರ್ಕ್ ಮಾಡುತ್ತಾರೋ ಕಾದು ನೋಡ ಬೇಕಾಗಿದೆ.
ಈ ಹಿಂದೆ ಇಲ್ಲಿದ್ದ ಗುಂಡಿಯೊಂದಕ್ಕೆ ದ್ವಿಚಕ್ರ ವಾಹನ ಸವಾರರು ರಾತ್ರಿ ವೇಳೆ ಬಿದ್ದು ಅಲವಾರು ಗಾಯಗಳು ಆಗಿದೆ ದೊಡ್ಡ ದುರಂತ ಸಂಭವಿಸುವ ಮುನ್ನ ಲೋಕಪೋಯೋಗಿ ಇಲಾಖೆ ಯವರು ತುರ್ತಾಗಿ ಈ ಗುಂಡಿಗೆ ಡಾಂಬರ್ ಹಾಕುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಮುದಗಲ್ಲ ಘಟಕ ಅಧ್ಯಕ್ಷರಾದ ಬಂಕದಮನೆ ಆಗ್ರಹಿಸಿದ್ದಾರೆ
ವರದಿ:- ಮಂಜುನಾಥ ಕುಂಬಾರ..

