Post Views: 285
ಮುದಗಲ್ಲ ವರದಿ…
ಮುದಗಲ್ಲ :-ಮನಸೂರೆಗೊಂಡ ರಮಾಭಾಯಿ ಅಂಬೇಡ್ಕರ್ ನಾಟಕ… 

ಮುದಗಲ್ಲ : ‘ಬಿ.ಆರ್. ಅಂಬೇಡ್ಕರ್ ಅವರು ಉನ್ನತ ವ್ಯಾಸಂಗಕ್ಕೆ ಛತ್ರಪತಿ ಶಾಹು ಮಹಾರಾಜರಿಂದ ವಿದ್ಯಾರ್ಥಿ ವೇತನ ಪಡೆದು ಅಮೆರಿಕಕ್ಕೆ ಹೋಗುವ ಸಂದರ್ಭದಲ್ಲಿ ಅವರ ಪತ್ನಿ ರಮಾಬಾಯಿ ತುಂಬು ಗರ್ಭಿಣಿ. ಹೆರಿಗೆ ನಂತರದ ಕೆಲವೇ ದಿನಗಳಲ್ಲಿ ಆ ಮಗು ಮೃತ ಪಡುತ್ತದೆ. ಈ ವಿಷಯ ತಿಳಿಸಿದರೆ ಎಲ್ಲಿ ಗಂಡನ ಅಧ್ಯಯನಕ್ಕೆ ತೊಂದರೆಯಾಗುತ್ತದೆಯೋ ಎನ್ನುವ
ಆತಂಕದಿಂದ ವಿಷಯ ತಿಳಿಸದೆ ಮಗುವಿನ ಅಂತ್ಯ ಸಂಸ್ಕಾರ ಮಾಡುತ್ತಾಳೆ ಮಂಗಳವಾರ ರಾತ್ರಿ ಮುದಗಲ್ಲ ಪುರಸಭೆ ರಂಗಮಂದಿರದಲ್ಲಿ ನಡೆದ ‘ರಮಾಬಾಯಿ ಅಂಬೇಡ್ಕರ್ ‘ನಾಟಕದಲ್ಲಿ ಕಂಡು ಬಂದ ದೃಶ್ಯ, ತಾಯಿಯ ಸಂಕಟ, ವೇದನೆ, ಆಕ್ರಂದನ ನಾಟಕ ನೋಡಲು ಸೇರಿದ್ದ ಜನರ ಕಣ್ಣುಗಳನ್ನೂ ತೇವ ಮಾಡಿದ್ದವು. ಕೊನೆಯ ತನಕವೂ ನಾಟಕ ಜನರ ಮೆಚ್ಚುಗೆ ಗಳಿಸಿತು.

ಚಾಲನೆ: ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಪುರಸಭೆ ಯ ಉಪಾಧ್ಯಕ್ಷ ರಾದ ಅಜ್ಮೀರ್ ಬೆಳ್ಳಿಕಟ್ , ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಶಿವ ಶಂಕರ್ ಗೌಡ ಹಾಗೂ ಪುರಸಭೆ ಸದಸ್ಯರಾದ ಗುಂಡಪ್ಪ ಗಂಗಾವತಿ, ಎಸ್ ಆರ್ ರಸೂಲ್ ಸಾಬ , ತಮ್ಮಣ್ಣ ಗುತ್ತೆದಾರ, ಮಲ್ಲಿಕಾರ್ಜುನ ಗೌಡ, ದುರಗಪ್ಪ ಕಟ್ಟಿಮನಿ ,ಶರಣಪ್ಪ ಕಟ್ಟಿಮನಿ, ಸಂಗಪ್ಪ ಹಿರೇಮನಿ, ಹಾಗೂ ಕಾಂಗ್ರೆಸ್ ಮುಖಂಡರ ಹಾಗೂ ಗಣ್ಯರ ಸಮ್ಮುಖದಲ್ಲಿ ಚಾಲನೆ ಮಾಡಿದರು
ಈ ಸಂದರ್ಭದಲ್ಲಿ ಮಾಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ನ ಅಧ್ಯಕ್ಷ ರಾದ ಮಲ್ಲಿಕಾರ್ಜುನ ಗೌಡ್ರು ‘ದೇಶದ ಆಡಳಿತದ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಇರಬೇಕು, ಬಹುತ್ವ ಭಾರತದಲ್ಲಿ ಎಲ್ಲಾ ವರ್ಗದ ಜನರಿಗೆ ನ್ಯಾಯ ಸಿಗಬೇಕು ಎಂದು ಯೋಚಿಸಿ ಅಂಬೇಡ್ಕರ್ ಅವರು ಶ್ರೇಷ್ಠವಾದ ಸಂವಿಧಾನ ಕೊಟ್ಟಿದ್ದಾರೆ. ಅವರು ಕೊಟ್ಟ ಸಂವಿಧಾನದಿಂದಲೇ ಇಂಥ ಈ ಗೌರವ, ಸ್ಥಾನಮಾನ ಸಿಕ್ಕಿದೆ’ ಎಂದು ಹೇಳಿದರು.ಹಾಗೂ ಈ ಸಂದರ್ಭದಲ್ಲಿ ಗುಂಡಪ್ಪ ಗಂಗಾವತಿ, ಶಿವ ಶಂಕರ್ ಗೌಡ, ಎಸ್ ರಸೂಲ್ ಸಾಬ, ಮಾತನಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರು ಶಶಿಕುಮಾರ್ ರೆವಣಿಕಿ,
ರಾಘವೇಂದ್ರ ಕುದರಿ,ವೆಂಕಟೇಶ ಹಿರೇಮನಿ, ಆನಂದ ಪೇಟರ್ , ಬಸವರಾಜ ಬಂಕದಮನೆ, ರಘವೀರ್ ಚಲುವಾದಿ, ರವಿ ಕಟ್ಟಿಮನಿ, ಶಿವರಾಜ ತಳವಾರ, ಕೃಷ್ಣ ಚಲುವಾದಿ ,ಕಲಾವಿದರು ಉಪಸ್ಥಿತರಿದ್ದರು
ವರದಿ:- ಮಂಜುನಾಥ ಕುಂಬಾರ