LOCAL EXPRESS : ಕುಕನೂರು ತಾಲೂಕು ಪಂಚಾಯತ್ ನೂತನ ಪ್ರಭಾರಿ ಇಒ ಆಗಿ ಬೆಟದೇಶ್ ಮಾಳೇಕೊಪ್ಪ ಅಧಿಕಾರ ಸ್ವೀಕಾರ!

“ಜನಸ್ನೇಹಿ, ಪಾರದರ್ಶಕ ಮತ್ತು ಅಭಿವೃದ್ಧಿಮುಖ ಆಡಳಿತಕ್ಕೆ ಆದ್ಯತೆ” – ಪ್ರಭಾರಿ ಇಒ ಬೆಟದೇಶ್ ಮಾಳೇಕೊಪ್ಪ!

PV NEWS ಕನ್ನಡ 24×7 :
ಕುಕನೂರು, ಜುಲೈ 9: ಯಲಬುರ್ಗಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಬೆಟದೇಶ್ ಮಾಳೇಕೊಪ್ಪ ಅವರು ಕುಕನೂರು ತಾಲೂಕು ಪಂಚಾಯತಿಯ ನೂತನ ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಇಒ) ಆಗಿ ಗುರುವಾರ ಅಧಿಕಾರ ಸ್ವೀಕರಿಸಿದರು.
ಕುಕನೂರು ತಾಲೂಕು ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸಂತೋಷ್ ಬಿರಾದಾರ್ ಪಾಟೀಲ್ ಅವರು ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ತೆರವಾದ ಹುದ್ದೆಗೆ ಬೆಟದೇಶ್ ಮಾಳೇಕೊಪ್ಪ ಅವರನ್ನು ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.
