LOCAL NEWS : ಮೆಕ್ಕೆಜೋಳಕ್ಕೆ ಸೂಕ್ತ ಬೆಂಬಲ ಬೆಲೆ ನೀಡಿ, “ಕಡಲೆ ಹಬ್” ನಿರ್ಮಾಣಕ್ಕೆ ಕ್ರಾಂತಿಕಾರಿ ಕಿಸಾನ್ ಸೇನಾ ಒತ್ತಾಯ..!!
ಕುಕನೂರು : ‘ಮೆಕ್ಕೆಜೋಳಕ್ಕೆ ಸೂಕ್ತ 3500ರೂ. ಬೆಂಬಲ ಬೆಲೆ ನೀಡಿ, ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ಆರಂಭಿಸಿ. ಈ ಭಾಗದಲ್ಲಿ ಅತಿ ಹೆಚ್ಚು ಕಡಲೆ ಬೆಳೆಯುವುದರಿಂದ ರೈತರ ಅನುಕೂಲಕ್ಕಾಗಿ ರೈಸ್ ಪಾರ್ಕ್ ಮಾದರಿಯಲ್ಲಿ ‘ಕಡಲೆ ಹಬ್’ ನಿರ್ಮಿಸಬೇಕು ಎಂದು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಎಂ.ಎನ್.ಕುಕನೂರು ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಭಾಗದಲ್ಲಿ ಈ ಬಾರಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆದ ರೈತರು, ಸರಿಯಾದ ಬೆಲೆ ಸಿಗದೆ ರೈತರು ಪರದಾಡುವಂತಾಗಿದೆ. ಆದ್ದರಿಂದ ಮೆಕ್ಕೆಜೋಳಕ್ಕೆ ಕನಿಷ್ಠ 3500 ರೂ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರವನ್ನ ತತಕ್ಷಣ ಆರಂಭಿಸಬೇಕು. ಅದೇ ರೀತಿ ಹಿಂಗಾರಿನಲ್ಲಿ ಈ ಭಾಗದಲ್ಲಿ ಅತ್ತೆ ಹೆಚ್ಚಾಗಿ ಕಡಲೆ ಬೆಳೆಯುವುದರಿಂದ ರೈಸ್ ಪಾರ್ಕ್ ಮಾದರಿಯಲ್ಲಿ “ಕಡಲೆ ಹಬ್’ ಮಾಡಿ ರೈತರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸಿ, ಇದರಿಂದ ರೈತನು ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಆಗಲಿದೆ’ ಎಂದರು.
‘ಅತಿವೃಷ್ಟಿಯಿಂದ ಹಾಳಾಗಿರುವ ಬೆಳೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ನೀಡುತ್ತಿದ್ದು, ಅದರಲ್ಲಿ ಪ್ರದೇಶವಾರು ಆಗುತ್ತಿರುವ ತಾರತಮ್ಯವನ್ನು ಸರಿಪಡಿಸಿ ಒಂದೇ ರೀತಿಯಾದ ಪರಿಹಾರವನ್ನು ಸಿಗುವಂತೆ ಮಾಡಬೇಕು, ಜೊತೆಗೆ ಸಾವಯವ ಕೃಷಿಗೆ ಹೆಚ್ಚು ಒತ್ತನ್ನು ಕೊಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೂರಕವಾದ ವಾತಾವರಣ ನಿರ್ಮಿಸಿ, ಈ ಸಾವಯವ ಕೃಷಿಯನ್ನ ಅರವಿನ ಬಗ್ಗೆ ಪ್ರಚಾರ ಮಾಡಬೇಕಾದ ಅನಿವಾರ್ಯತೆ ಇದೆ’ ಎಂದರು.
‘ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ರೈತ ಭವನಗಳು ಇರುವ ಹಾಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ಎಪಿಎಂಸಿ ಆವರಣದಲ್ಲಿ ರೈತ ಭವನವನ್ನು ನಿರ್ಮಿಸಿ, ರೈತ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳ ಸಭೆ ಸಮಾರಂಭ ಹಾಗೂ ರೈತರ ಕುಂದುಕೊರತೆಗಳ ಸಭೆಗಳನ್ನು ಮಾಡುವುದಕ್ಕೆ ಅನುಕೂಲವಾಗಲಿದೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕರಾದ ಬಸವರಾಜ ರಾಯರೆಡ್ಡಿಯವರು, ರಾಜ್ಯದ ಕೃಷಿ ಸಚಿವ, ಎಪಿಎಂಸಿ ಹಾಗೂ ಸಹಕಾರ ಸಚಿವರಿಗೆ ಮನವರಿಕೆ ಮಾಡಿ ರೈತ ಭವನ ನಿರ್ಮಾಣಕ್ಕೆ ಒತ್ತು ನೀಡಬೇಕು’ ಎಂದರು.
ಈ ಸಂದರ್ಭದಲ್ಲಿ ಭಾರತೀಯ ಕ್ರಾಂತಿಕಾರಿ ಚಿಕನ್ ಸೇನಾ ಜಿಲ್ಲಾಧ್ಯಕ್ಷ ಬರಮಣ್ಣ, ಪದಾಧಿಕಾರಿಗಳಾದ ದೊಡ್ಡಪ್ಪ ಬಾವಿಕಟ್ಟಿ, ಹನುಮೇಶ್ ಶಾಕಾಪುರ, ದುರಗಪ್ಪ ಬೇವಿನಗಿಡದ್ , ಶರಣಪ್ಪ ಚನ್ನಪ್ಪನಹಳ್ಳಿ, ರುದ್ರೇಶ್ ಹೆಬ್ಬಾಳ, ರವಿಚಂದ್ರ ರೇವಡಿ ಹಾಗೂ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.