You are currently viewing LOCAL NEWS : ಅಕ್ಟೋಬರ್ 19ಕ್ಕೆ ಮಂಗಳೂರಿನಲ್ಲಿ “ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ” ಆಯೋಜನೆ..!

LOCAL NEWS : ಅಕ್ಟೋಬರ್ 19ಕ್ಕೆ ಮಂಗಳೂರಿನಲ್ಲಿ “ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ” ಆಯೋಜನೆ..!

ಪ್ರಜಾ ವೀಕ್ಷಣೆ ಸುದ್ದಿ :

LOCAL NEWS : ಅಕ್ಟೋಬರ್ 19ಕ್ಕೆ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಆಯೋಜನೆ..!

ಕೊಪ್ಪಳ : ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪತ್ರಕರ್ತರು,ಸಮಾಜ ಸೇವಕ ರವಿ ನಿಂಗಪ್ಪ ಆಗೋಲಿ ಅವರು ಜೈ ಭೀಮ್ ಸ್ಪೋರ್ಟ್ಸ್ ಕ್ಲಬ್ ಮಂಗಳೂರು ಇವರ ಸಹ ಬಾಗಿತ್ವದಲ್ಲಿ 52 ಕೆಜಿ ಎರಡು ಜನ 55 ಕೆಜಿ 5 ಜನ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗಳನ್ನು ಇದೇ ತಿಂಗಳು ಅಕ್ಟೋಬರ್ 19ಕ್ಕೆ ಬೆಳಿಗ್ಗೆ 9:00 ಗಂಟೆಗೆ ಕೆಪಿಎಸ್ ಶಾಲೆಯ ಮೈದಾನದಲ್ಲಿ ಆಯೋಜನೆ ಮಾಡಿದ್ದಾರೆ.

ಪ್ರಥಮ ಬಹುಮಾನ 15001 ರೂಪಾಯಿಯನ್ನು ಕಳಕಪ್ಪ ಕಂಬಳಿ ಸಮಾಜಸೇವಕರು, ದ್ವಿತೀಯ ಬಹುಮಾನ 7001 ರೂಪಾಯಿಯನ್ನ ಸಕ್ರಪ್ಪ ಮಂಗಳಪ್ಪ ಚಿನ್ನೂರ್ ಗ್ರಾಮ ಪಂಚಾಯತಿ ಅಧ್ಯಕ್ಷರು ಮಂಗಳೂರ, ತೃತೀಯ ಬಹುಮಾನ 5001 ರೂಪಾಯಿಗಳನ್ನು ಮಂಜುನಾಥ ತಳವಾರ್ ಸಮಾಜಸೇವಕರು, ಚತುರ್ಥಿ ಬಹುಮಾನ 3001 ರೂಪಾಯಿಗಳನ್ನು ರಾಮಣ್ಣ ಉಪ್ಪಾರ ಸಮಾಜಸೇವಕರು, ಪಂಚಮಿ ಬಹುಮಾನ 2001 ಅನ್ನಪೂರ್ಣ ಸುರೇಶ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಮಂಗಳೂರು, ಟ್ರೋಫಿ ಕೊಡುಗೆ ರಾಮಣ್ಣ ಉಪ್ಪಾರ್ ಸಮಾಜಸೇವಕರು ಹಾಗೂ ಉದ್ಯಮಿದಾರರು.

ಸಮವಸ್ತ್ರ ಕೊಡುಗೆ ಭರತ್ ರಾಮೇಗೌಡ ಸಮಾಜ ಸೇವಕರು, ಈರಪ್ಪ ಕುಡಗುಂಟಿ ಮಾಜಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ಮಹಾಂತೇಶ್ ಬೂದಗುಂಪ ವಕೀಲರು ಅನೇಕರು ಕೂಡ ಸಹಾಯ ಹಸ್ತ ನೀಡಿದ್ದಾರೆ ಕಾರ್ಯಕ್ರಮಕ್ಕೆ, ಅಕ್ಟೋಬರ್ 19ಕ್ಕೆ ಪೂಜ್ಯರು ದಾನಿಗಳು ಮುಖ್ಯ ಅತಿಥಿಗಳು ಗ್ರಾಮದ ಗುರುಹಿರಿಯರು ಅನೇಕರು ಕೂಡ ಆಗಮಿಸಲಿದ್ದಾರೆ.

ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಕೂಡ ಇರುತ್ತದೆ, ಸಹಾಯ ಹಸ್ತ ಮಾಡಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಕೂಡ ಇರುತ್ತದೆ. ಕಬಡ್ಡಿ ಪಂದ್ಯಾವಳಿಯ ಪ್ರವೇಶ ಶುಲ್ಕ 501 ರೂಪಾಯಿಗಳು ಇರುತ್ತದೆ, ಅದರಿಂದ ಕ್ರೀಡಪಟುಗಳು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಈ ಕಾರ್ಯಕ್ರಮದ ಆಯೋಜಕರಾದ ರವಿ ನಿಂಗಪ್ಪ ಆಗೋಲಿ ಪತ್ರಕರ್ತರು ಸಮಾಜ ಸೇವಕರು ಹಾಗೂ ಜೈ ಭೀಮ್ ಸ್ಪೋರ್ಟ್ಸ್ ಕ್ಲಬ್ ಮಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!