You are currently viewing BREAKING : ರಾಜ್ಯದ ಸರ್ಕಾರದಿಂದ ಆರ್‌ಎಸ್‌ಎಸ್‌ಗೆ ಬಿಗ್‌ ಶಾಕ್‌..!!

BREAKING : ರಾಜ್ಯದ ಸರ್ಕಾರದಿಂದ ಆರ್‌ಎಸ್‌ಎಸ್‌ಗೆ ಬಿಗ್‌ ಶಾಕ್‌..!!

BREAKING : ರಾಜ್ಯದ ಸರ್ಕಾರದಿಂದ ಆರ್‌ಎಸ್‌ಎಸ್‌ಗೆ ಬಿಗ್‌ ಶಾಕ್‌..!!

ಬೆಂಗಳೂರು : ರಾಜ್ಯದ ಸರ್ಕಾರದಿಂದ ಆರ್‌ಎಸ್‌ಎಸ್‌ಗೆ ಬಿಗ್‌ ಶಾಕ್‌ ನೀಡಿದೆ. ರಾಜ್ಯದ ಸರ್ಕಾರಿ ಜಾಗಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿಷೇಧ ಮಾಡಿದ್ದು, ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಇಂದು  ಸಿಎಂ ಸಿದ್ಧರಾಮಯ್ಯ ನೇತಡತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಸರ್ಕಾರಿ ಜಾಗಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ಬ್ರೇಕ್ ಹಾಕುವಂತ ತೀರ್ಮಾನವನ್ನು ಕೈಗೊಂಡಿದೆ. ರಾಜ್ಯದ ಸರ್ಕಾರಿ ಜಾಗಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಖಾಸಗಿ ಸಂಘ-ಸಂಸ್ಥೆಗಳಿಗೆ ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ಇದೆ.

ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳಿಗೆ ಕಾರ್ಯಕ್ರಮ ಮಾಡಲು ನಿರ್ಭಂದ ವಿಧಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ಮಾಡಲು ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ಆಸ್ತಿ, ಸಾಂಸ್ಥಿಕ ಆಸ್ತಿ ಸರಿಯಾಗಿ ನಿರ್ವಹಣೆ ಮಾಡಬೇಕು. ಯಾವುದೇ ರೀತಿ ಟ್ರಸ್ ಪಾಸ್ ಆಗೋಕೆ ಬಿಡುವಂತಿಲ್ಲ. ಅನುಮತಿ ಪಡೆದು ಕಾರ್ಯಕ್ರಮ ಮಾಡಲು ಅವಕಾಶ. ಅವಕಾಶ ಇಲ್ಲದೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!