ಮುದಗಲ್ಲ :- ಬೋರ್ಡ್ ಇಲ್ಲದ ಇಂದಿರಾ ಕ್ಯಾಂಟೀನ್‌…

ಮುದಗಲ್ಲ ವರದಿ…

ಬೋರ್ಡ್ ಇಲ್ಲದ ಇಂದಿರಾ ಕ್ಯಾಂಟೀನ್‌…

ಹಸಿದವರಿಗೆ ಕ್ಯಾಂಟೀನ್‌ ಹುಡುಕುವ ಸವಾಲು

ಮುದಗಲ್ಲ :- ಲಿಂಗಸೂರು ತಾಲೂಕಿನ ಐತಿಹಾಸಿಕ ಮುದಗಲ್ಲ ಪಟ್ಟಣದ ಮುಖ್ಯ ಕೇಂದ್ರ ಬಿಂದುವಾದ ಪಶು ವೈದ್ಯಕಿಯ ಆಸ್ಪತ್ರೆ ಮುಂಭಾಗದಲ್ಲಿ ನಿರ್ಮಾಣವಾಗಿರುವ ರಾಜ್ಯ ಸರ್ಕಾರದ ಮಹತ್ವ ಪೂರ್ಣ ಯೋಜನೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಯಾಗಿ ಸುಮಾರು ತಿಂಗಳು ಆದರೂ ಇಂದಿರಾ ಕ್ಯಾಂಟೀನ್‌ ಬೋರ್ಡ್ ಇಲ್ಲ ಇಂದಿರಾ ಕ್ಯಾಂಟೀನ್‌ ಪಟ್ಟಣದ ಹೃದಯಭಾಗದಲ್ಲೇ ಇದ್ದರೂ ಸಾರ್ವಜನಿಕರಿಗೆ ಕಾಣದಂತಾಗಿದೆ!

{

ಪರ ಊರುಗಳಿಂದ ಬರುವ ಯಾರಿಗೂ ಇಲ್ಲಿ ಇಂದಿರಾ ಕ್ಯಾಂಟೀನ್ ಎಲ್ಲಿದೆ ಎನ್ನುವುದೇ ಸಿಗುವುದಿಲ್ಲ. ಅವರು ಸ್ಥಳೀಯರ ಬಳಿ ಕೇಳಿ ಕ್ಯಾಂಟೀನ್ ವಿಳಾಸ ಹುಡುಕುವುದು ಅನಿವಾರ್ಯ. ಪ್ರಾರಂಭದಿಂದಲ್ಲೂ ಮುಖ್ಯರಸ್ತೆ ಬದಿಗೆ ಇಂದಿರಾ ಕ್ಯಾಂಟೀನ್ ಎಂಬ ದೊಡ್ಡ ಬೋರ್ಡ್‌ ಇಲ್ಲ. ಹಸಿದವರಿಗೆ ಇಂದಿರಾ ಕ್ಯಾಂಟೀನ್ ವಿಳಾಸ ಸಿಗದಂತಾಗಿದೆ..

ಇಂದಿರಾ ಕ್ಯಾಂಟೀನ್ ಬೋರ್ಡ್‌ ಹಾಕುವ ಭಾಗ್ಯ ಇನ್ನೂ ಸಿಕ್ಕಿಲ್ಲ. ಇದಕ್ಕೆ ಸಂಬಂಧಿಸಿದ ಪುರಸಭೆ ಅಧಿಕಾರಿಗಳು,ಗುತ್ತಿಗೆದಾರ
ಈ ಬಗ್ಗೆ ಗಮನಹರಿಸಿಲ್ಲ. ಅದಷ್ಟು ಬೇಗನೆ ಬೋರ್ಡ್ ಅಳವಡಿಸಿ ಪರ ಊರುಗಳಿಂದ ಬರುವ ಯಾರಿಗೂ ತೊಂದರೆ ಯಾಗದಂತೆ ನೋಡಿಕೊಳ್ಳಿ ಹಾಗೂ ಪರ ಊರುಗಳಿಂದ ಬರುವ.ಜನರು ಸ್ಥಳೀಯರ ಬಳಿ ಕೇಳಿ ಕ್ಯಾಂಟೀನ್ ವಿಳಾಸ ಕೇಳುವುದು ತಪ್ಪುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!