BREAKING NEWS : ಕುಕನೂರಿನ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು..!!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು : ಕುಕನೂರು ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 367ರ ಬಳಿ ಇಂದು ರಾತ್ರಿ 10 ಗಂಟೆ ಸುಮಾರಿಗೆ ಕಾರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದರ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಹೌದು, ಕುಕನೂರು ಪಟ್ಟಣದ ಹೊರವಲಯದ ಮಗಜಿ ಮಂಗಲ ಭವನದ ಎದುರುಗಡೆಗೆ ಇರುವ ರಾಷ್ಟ್ರೀಯ ಹೆದ್ದಾರಿ 367ರ ಬಳಿ ತಡ ರಾತ್ರಿ 10 ಗಂಟೆ ಸುಮಾರಿಗೆ ಕೊಪ್ಪಳದ ಕಡೆಯಿಂದ ಕುಕನೂರು ಕಡೆ ವೇಗವಾಗಿ ಕಾರ್ಯೊಂದು ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಅನಾಮದೇಯ ಇಬ್ಬರೂ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದು ದೃಢವಾಗಿದೆ.

KA 37 N 7550 ಇದು ಡಿಕ್ಕಿ ಹೊಡೆದ ಕಾರ್ ನಂಬರ್ ಇದಾಗಿದ್ದು, ಈ ಕಾರ್ ಮಾಲೀಕರು ಇದೇ ಕುಕನೂರು ಪಟ್ಟಣದ ಮೆಡಿಕಲ್ ಶಾಪ್ ಮಾಲೀಕರೋರ್ವರ ಕಾರ್ ಎಂದು ಹೇಳಲಾಗುತ್ತಿದೆ. ಮೃತರಿಗೆ ಸಂಬಂಧಿಸಿದ ಬೈಕ್ ನಂಬರ್ KA 25 EK 6946 ಇದೆ. ಮೃತರ ದೇಹಗಳನ್ನ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಪ್ರಕರಣವು ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ದೂರು ಇನ್ನೇನು ದಾಖಲಾಗಬೇಕಾಗಿದೆ.
