You are currently viewing BIG NEWS : ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ, ಟ್ರೋಫಿಗಳನ್ನು ನೀಡುವುದು ಕಡ್ಡಾಯ ನಿಷೇಧ..! : ಸರ್ಕಾರದಿಂದ ಮಹತ್ವದ ಆದೇಶ.!

BIG NEWS : ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ, ಟ್ರೋಫಿಗಳನ್ನು ನೀಡುವುದು ಕಡ್ಡಾಯ ನಿಷೇಧ..! : ಸರ್ಕಾರದಿಂದ ಮಹತ್ವದ ಆದೇಶ.!

BIG NEWS : ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ, ಟ್ರೋಫಿಗಳನ್ನು ನೀಡುವುದು ಕಡ್ಡಾಯ ನಿಷೇಧ..! : ಸರ್ಕಾರದಿಂದ ಮಹತ್ವದ ಆದೇಶ.!

 

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ : ರಾಜ್ಯದಲ್ಲಿ ಇನ್ನುಂದೇ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ ಮತ್ತು ಟ್ರೋಫಿಗಳನ್ನು ಅತಿಥಿಯಾಗಿ ಭಾಗವಹಿಸಿದ ಗಣ್ಯರಿಗೆ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಿ ಸರ್ಕಾರ ಮಹತ್ವದ ಆದೇಶ ಮಾಡಿದೆ.

ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್.ಆರ್ ಅವರು ಸುತ್ತೋಲೆ ಹೊರಡಿಸಿದ್ದು, ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದೆಂದು ತಿಳಿಸಿದ್ದಾರೆ.

ಇದರ ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದೆಂದು ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಸದರಿ ಸುತ್ತೋಲೆಗೆ ಹಲವು ಅಂಶಗಳನ್ನು ಸೇರ್ಪಡೆಗೊಳಿಸಬೇಕಿರುವ ಅವಶ್ಯಕತೆಯನ್ನು ಮನಗಂಡು ಈ ಸುತ್ತೋಲೆಯನ್ನು ಕೆಲವು ಅಂಶಗಳನ್ನು ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

 

Prajavikshane

Chandru R Bhanapaur

Leave a Reply

error: Content is protected !!