You are currently viewing SPECIAL STORY : ಕೊಪ್ಪಳ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇನ್ನು 2 ದಿನ ಭಾರೀ ಚಳಿ ಹಾಗೂ ಶೀತಗಾಳಿ..! : ಹೈ ಅಲರ್ಟ್ ಘೋಷಣೆ ಸಾಧ್ಯತೆ!  

SPECIAL STORY : ಕೊಪ್ಪಳ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇನ್ನು 2 ದಿನ ಭಾರೀ ಚಳಿ ಹಾಗೂ ಶೀತಗಾಳಿ..! : ಹೈ ಅಲರ್ಟ್ ಘೋಷಣೆ ಸಾಧ್ಯತೆ!  

SPECIAL STORY : ಕೊಪ್ಪಳ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇನ್ನು 2 ದಿನ ಭಾರೀ ಚಳಿ ಹಾಗೂ ಶೀತಗಾಳಿ..! : ಹೈ ಅಲರ್ಟ್ ಘೋಷಣೆ ಸಾಧ್ಯತೆ!  

ಪ್ರಜಾ ವೀಕ್ಷಣೆಯ ವಿಶೇಷ ವರದಿ : 

ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ಕೊಪ್ಪಳ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 9 ರಿಂದ 11 ಡಿಗ್ರಿ ಸೆಂಟಿಗ್ರೇಡ್ ತಲುಪುವ ಸಾಧ್ಯತೆಯಿದೆ. ಇದರಿಂದ ಜನ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ.

ಚಳಿ ಹಾಗೂ ಶೀತಗಾಳಿಯಿಂದಾಗಿ ಬೆಳಗ್ಗೆ ವಾಕಿಂಗ್ಗೆ ಹೋಗಲು ಸಹ ಜನರು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ 2 ದಿನ ರಾಜ್ಯಾದ್ಯಂತ ಇದೇ ರೀತಿಯ ಚಳಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಖಚಿತ ಪಡಿಸಿದೆ.

ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 9 ರಿಂದ 11 ಡಿಗ್ರಿ ಸೆಂಟಿಗ್ರೇಡ್ ತಲುಪುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಹೆಚ್ಚಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸುಮಾರು 12 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಎರಡು ದಿನಗಳಲ್ಲಿ ಇನ್ನೂ ಹೆಚ್ಚಿನ ಚಳಿ ಹಾಗೂ ಶೀತಗಾಳಿ ಇರಲಿದೆ. ಇದು ವಯಸ್ಸಾದವರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಜೊತೆಗೆ ಬೆಳೆ ವೈಪರಿತ್ಯವೂ ಉಂಟಾಗಲಿದೆ ಎಂದ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಶೀತಗಾಳಿ ಮತ್ತು ಚಳಿಯಿಂದ ರಕ್ಷಣೆ ಹೇಗೆ?

ಇತ್ತೀಚಿನ ದಿನಗಳಲ್ಲಿ ಸೀತ ಗಾಳಿ ಹಾಗೂ ಚಳಿ ಬಹಳಷ್ಟು ಇರುವುದರಿಂದ ಇದರಿಂದ ಕಾಪಾಡಿಕೊಳ್ಳಲು ಬಹಳ ಮುಖ್ಯವಾಗಿದೆ ಅದರಂತೆ ಈ ಕೆಳಗಿನ ಸಲಹೆಗಳನ್ನು ಪಡೆದುಕೊಳ್ಳಿ. ಶೀತಗಾಳಿ ಮತ್ತು ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ, ಪದರ ಪದರ ಬಟ್ಟೆ ಧರಿಸುವುದು, ಟೋಪಿ, ಮಫ್ಲರ್, ಗ್ಲೌಸ್‌ಗಳಂತಹವು ಬಳಸುವುದು, ಬೆಳಿಗ್ಗೆ ಮತ್ತು ಸಂಜೆ ಹೊರಗಡೆ ಹೋಗುವುದನ್ನು ಕಡಿಮೆ ಮಾಡುವುದು, ಮನೆಯ ಬಾಗಿಲು ಕಿಟಕಿಗಳನ್ನು ಬಿಗಿಯಾಗಿ ಮುಚ್ಚುವುದು, ಬೆಚ್ಚಗಿನ ನೀರು ಮತ್ತು ಪೌಷ್ಟಿಕ ಆಹಾರ ಸೇವಿಸುವುದು, ಮತ್ತು ಶೀತಗಾಳಿಯಿಂದ ಕಿವಿ, ಗಂಟಲು ಮತ್ತು ಪಾದಗಳನ್ನು ರಕ್ಷಿಸುವುದು ಬಹಳ ಮುಖ್ಯವಾಗಿದೆ.

ವ್ಯಕ್ತಿಗತ ರಕ್ಷಣೆ

  • ಬೆಚ್ಚಗಿನ ಬಟ್ಟೆ : ಹತ್ತಿ ಒಳಗಡೆ ಧರಿಸಿ, ಅದರ ಮೇಲೆ ಉಣ್ಣೆಯ ಬಟ್ಟೆಗಳನ್ನು ಧರಿಸಿ. ಟೋಪಿ, ಸ್ಕಾರ್ಫ್ ಮತ್ತು ಕೈಗವಸುಗಳನ್ನು ಬಳಸಬೇಕು. 

  • ಶೀತಗಾಳಿ ತಡೆಯಿರಿ: ಮುಂಜಾನೆ ಬೀಸುವ ಶೀತಗಾಳಿಗೆ ಕಿವಿಗಳು ತೆರೆದಿಡಬೇಡಿ ಹಾಗೂ ಕಿವಿಗೆ ಹತ್ತಿ ಇಟ್ಟುಕೊಳ್ಳಿ ಅಥವಾ ಟೋಪಿ ಧರಿಸಬೇಕು. 

  • ಮೈ ಕಾಯಿಸಿಕೊಳ್ಳಿ: ಮಲಗುವ ಮುನ್ನ ಸ್ವಲ್ಪ ಹೊತ್ತು ಬೆಂಕಿಯ ಬಳಿ ಕುಳಿತುಕೊಳ್ಳಿ ಮೈ ಕಾಯಿಸಿಕೊಳ್ಳಿ , ಆದರೆ ಸುರಕ್ಷತೆವಾಗಿರಿ. ಬೆಳಿಗ್ಗೆ ತಂಪು ಇದ್ದಾಗ ವಾಕಿಂಗ್‌ಗೆ ಹೋಗುವಾಗ ಮುಖ ಕವಚ (mask) ಧರಿಸಿಕೊಂಡು ಹೋಗಿ. 

  • ಮುಖ ಮತ್ತು ತುಟಿಗಳ ಆರೈಕೆ : ಹಾಲಿನ ಕೆನೆ ಅಥವಾ ವ್ಯಾಸಲೀನ್ ಹಚ್ಚಿ. ಹೆಸರು ಹಿಟ್ಟು ಮತ್ತು ಕಡಲೆ ಹಿಟ್ಟಿನಿಂದ ಸ್ನಾನ ಮಾಡಿ ನಿಮ್ಮ  ಮುಖ ಮತ್ತು ತುಟಿಗಳ ಆರೈಕೆಮಾಡಿಕೊಳ್ಳಿ. 

ದೇಹಕ್ಕೆ ಬೇಕಾಗುವ ಆಹಾರ ಮತ್ತು ಪಾನೀಯಗಳು

  1. ಹೆಚ್ಚು ನೀರು ಕುಡಿಯಿರಿ: ಚಳಿಗಾಲದಲ್ಲೂ ದೇಹವನ್ನು ಹೈಡ್ರೇಟೆಡ್ ಆಗಿಡಿ ಇದು ಬಹಳ ಮುಖ್ಯವಾಗಿದೆ.

  2. ಆರೋಗ್ಯಕರ ಆಹಾರ: ವಿಟಮಿನ್ ಸಿ ಸಮೃದ್ಧ ಹಣ್ಣುಗಳು (ಕಿತ್ತಳೆ), ತರಕಾರಿಗಳು, ಬೀಜಗಳು, ಬೆಲ್ಲದ ಖಾದ್ಯಗಳು ಸೇವಿಸಬೇಕು.

  3. ಮಸಾಲಾ ಪಾನೀಯಗಳು: ಶುಂಠಿ ಚಹಾ, ಹಳದಿ ಬೆರೆಸಿದ ಹಾಲು ಕುಡಿಯಬೇಕು.

ವೈದಕೀಯ ಸಲಹೆ ಬಹಳ ಮುಖ್ಯ 

ಜೋರಾದ ಕೆಮ್ಮು, ಎದೆ ನೋವು, ಉಸಿರಾಟದ ತೊಂದರೆ, ಅಥವಾ ದೇಹ ಮರಗಟ್ಟುವಿಕೆ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಅವರಿಂದ ಸಲಹೆ ಪಡೆದುಕೊಳ್ಳಿ. ಈ ಸಲಹೆಗಳನ್ನು ಪಾಲಿಸುವುದರಿಂದ ಚಳಿಗಾಲದ ತೊಂದರೆಗಳಿಂದ ಸುರಕ್ಷಿತವಾಗಿರಬಹುದು.

Leave a Reply

error: Content is protected !!