You are currently viewing LOCAL NEWS : ಕುದರಿಮೋತಿ ಕಾಲೇಜಿನಲ್ಲಿ ‘ನನ್ನ ದೇಹ ನನ್ನ ಹಕ್ಕು’ ಮತ್ತು ‘ಪೋಕ್ಸೋ ಕಾಯ್ದೆ’ ಜಾಗೃತಿ ಕಾರ್ಯಕ್ರಮ!

LOCAL NEWS : ಕುದರಿಮೋತಿ ಕಾಲೇಜಿನಲ್ಲಿ ‘ನನ್ನ ದೇಹ ನನ್ನ ಹಕ್ಕು’ ಮತ್ತು ‘ಪೋಕ್ಸೋ ಕಾಯ್ದೆ’ ಜಾಗೃತಿ ಕಾರ್ಯಕ್ರಮ!

LOCAL NEWS : ಕುದರಿಮೋತಿ ಕಾಲೇಜಿನಲ್ಲಿ ‘ನನ್ನ ದೇಹ ನನ್ನ ಹಕ್ಕು’ ಮತ್ತು ‘ಪೋಕ್ಸೋ ಕಾಯ್ದೆ’ ಜಾಗೃತಿ ಕಾರ್ಯಕ್ರಮ!

ಪ್ರಜಾ ವೀಕ್ಷಣೆ ವರದಿ :

ಕುಕನೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ, ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸಲು ತಾಲ್ಲೂಕಿನ ಕುದರಿಮೋತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ನನ್ನ ದೇಹ ನನ್ನ ಹಕ್ಕು’ ಹಾಗೂ ‘ಪೋಕ್ಸೋ (POCSO) ಕಾಯ್ದೆ’ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವಿಸ್ತಾರ್ ಸಂಸ್ಥೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪೊಲೀಸ್ ಇಲಾಖೆಯ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷಿತ ಸ್ಪರ್ಶ (Safe Touch) ಮತ್ತು ಅಸುರಕ್ಷಿತ ಸ್ಪರ್ಶದ (Unsafe Touch) ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಕುರಿತು ಬೇವೂರು ಪೊಲೀಸ್ ಠಾಣೆಯ ಪಿ.ಎಸ್.ಐ ಎಸ್.ಪಿ. ನಾಯಕ ಮಾತನಾಡಿ, “ಮಕ್ಕಳ ರಕ್ಷಣೆಗಾಗಿ ಸರ್ಕಾರವು ಅತ್ಯಂತ ಕಠಿಣವಾದ ಪೋಕ್ಸೋ ಕಾಯ್ದೆಯನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ತಮ್ಮ ಮೇಲಾಗುವ ಕಿರುಕುಳದ ವಿರುದ್ಧ ಧ್ವನಿ ಎತ್ತಬೇಕು ಮತ್ತು ಅಪರಿಚಿತರ ಬಗ್ಗೆ ಎಚ್ಚರದಿಂದಿರಬೇಕು” ಎಂದು ಕಿವಿಮಾತು ಹೇಳಿದರು.

ವಿಸ್ತಾರ್ ಸಂಸ್ಥೆಯ ಅಲಿ ಶಿರೂರು (ಅಲಿಸಾಬ) ಮಾತನಾಡಿ, “ಪ್ರತಿಯೊಬ್ಬ ವಿದ್ಯಾರ್ಥಿಯೂ ‘ನನ್ನ ದೇಹ ನನ್ನ ಹಕ್ಕು’ ಎಂಬ ಅರಿವನ್ನು ಬೆಳೆಸಿಕೊಳ್ಳಬೇಕು. ಮೊಬೈಲ್ ಫೋನ್‌ಗಳ ಅತಿಯಾದ ಮತ್ತು ಅಸಮರ್ಪಕ ಬಳಕೆಯಿಂದ ಅನೇಕ ದುಷ್ಪರಿಣಾಮಗಳು ಎದುರಾಗುತ್ತಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯತ್ತ ಗಮನ ಹರಿಸಬೇಕು” ಎಂದು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಬೋಧಕ ಸಿಬ್ಬಂದಿಗಳು ಹಾಗೂ ವಿಸ್ತಾರ್ ಸಂಸ್ಥೆಯ ಗವಿಸಿದ್ದಮ್ಮ ಮತ್ತು ಮರಿಯಮ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು.

Prajavikshane

Chandru R Bhanapaur

Leave a Reply

error: Content is protected !!