LOCAL NEWS : ಅಪ್ಪಟ ಗ್ರಾಮೀಣ ಕ್ರೀಡಾಪಟು ಹಾಗೂ ಕ್ರಿಕೆಟ್ ಆಟಗಾರನಾದ ತಳಾ ಅಲಿಯಾಸ್ ಮತ್ತುರಾಜ್ ನಿಧನ..!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು : ಕುಕನೂರ ತಾಲೂಕಿನ ಕ್ರೀಡಾಪಟು, ಅಪ್ಪಟ ಗ್ರಾಮೀಣ ಕ್ರಿಕೆಟ್ ಆಟಗಾರರಾದ ತಳಾ ಅಲಿಯಾಸ್ ಮುತ್ತುರಾಜ್ (35) ಅವರ ಹಠಾತ್ ನಿಧನದಿಂದ ಉತ್ತಮ ಕ್ರೀಡಾಪಟುವನ್ನ ತಾಲೂಕು ಕಳೆದುಕೊಂಡಂತಾಗಿದೆ.
ಕುಕನೂರು ಪಟ್ಟಣದ ಜವಳದ ನಗರದಲ್ಲಿ ವಾಸವಿದ್ದ ಈತನು ಕುಕನೂರು ಪಟ್ಟಣ ಪಂಚಾಯತಿಯಲ್ಲಿ ನೀರು ಗಂಟಿಯಾಗಿ ಕೆಲಸ ನಿರ್ವಹಿಸುತ್ತಿದ್ದನು.
ಕೆಲವು ದಿನಗಳಿಂದ ಅನಾರೋಗ್ಯದ ಪೀಡಿತರಾಗಿದ್ದ ಇವರು ಇಂದು ಬೆಳಗಿನ ಜಾವ ಮೃತ ಹೊಂದಿದ್ದಾರೆಂದು ಅವರ ಕುಟುಂಬದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಕುಕನೂರು ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕನಾಗಿ ನೀರು ಗಂಟೆಯಾಗಿ ಕೆಲಸ ನಿರ್ವಹಿಸಿದ ಇವರು, ಧರ್ಮಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪೌರಾಡಳಿತ ಹಾಗೂ ನಗರಭಿವೃದ್ಧಿ ಇಲಾಖೆಯಿಂದ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಅವರ ಪತ್ನಿಗೆ ಡಿ ದರ್ಜೆಯ ಯಾವುದಾದರೂ ಸರ್ಕಾರಿ ಕೆಲಸ ಕೊಡಬೇಕೆಂದು ಅವರ ಕುಟುಂಬದ ಹಾಗೂ ಅವರ ಹಿತೈಷಿಗಳ ಆಗ್ರಹ ಕೂಡ ಆಗಿದೆ.
ಒಂದು ವೇಳೆ ಡಿ ದರ್ಜೆಯ ಕೆಲಸ ಕೊಟ್ಟಿದ್ದೆ ಆದಲ್ಲಿ ಮೃತನ ಕುಟುಂಬಕ್ಕೆ ಆರ್ಥಿಕ ಸಹಾಯ ಹಾಗೂ ದಿಕ್ಕೆ ಇಲ್ಲದ ಕುಟುಂಬಕ್ಕೆ ಆಸರೆ ಕೂಡ ಆಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ಮುತ್ತುರಾಜ್ ಕ್ರಿಕೆಟ್ ಆಟಗಾರನಾಗಿ ಸುಪ್ರಸಿದ್ದ
