You are currently viewing ಮುದಗಲ್ಲ :–ಕುಡಿಯುವ ನೀರಿನ ಸಮಸ್ಯೆ ಯಾಗದಂತೆ ಎಚ್ಚರಿಕೆವಹಿ :-ಶಾಸಕ ಮಾನಪ್ಪ ಡಿ. ವಜ್ಜಲ್ ಖಡಕ್ ಸೂಚನೆ ..

ಮುದಗಲ್ಲ :–ಕುಡಿಯುವ ನೀರಿನ ಸಮಸ್ಯೆ ಯಾಗದಂತೆ ಎಚ್ಚರಿಕೆವಹಿ :-ಶಾಸಕ ಮಾನಪ್ಪ ಡಿ. ವಜ್ಜಲ್ ಖಡಕ್ ಸೂಚನೆ ..

ಮುದಗಲ್ಲ ವರದಿ..

ಮುದಗಲ್ಲ :–ಕುಡಿಯುವ ನೀರಿನ ಸಮಸ್ಯೆ ಯಾಗದಂತೆ ಎಚ್ಚರಿಕೆವಹಿ :-ಶಾಸಕ ಮಾನಪ್ಪ ಡಿ. ವಜ್ಜಲ್ ಖಡಕ್ ಸೂಚನೆ ..

 
ಮುದಗಲ್ : ಈ ಬಾರಿ ಬಿಸಿಲು ಜೋರಾಗಿರುವುದರಿಂದ ಪಟ್ಟಣದ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಈಗಿನಿಂದಲೇ ಅಗತ್ಯ ಮುಂಜಾಗ್ರತೆ ವಹಿಸುವಂತೆ ಲಿಂಗಸುಗೂರು ಕ್ಷೇತ್ರದ ಶಾಸಕ ಮಾನಪ್ಪ ಡಿ. ವಜ್ಜಲ್ ಖಡಕ್ ಸೂಚನೆ ನೀಡಿದ್ದರು.
ಬೇಸಿಗೆಯ ತೀವ್ರತೆಯಿಂದಾಗಿ ನಮ್ಮ ಜನರು ಎದುರಿಸುವ ಪ್ರಮುಖ ಸಮಸ್ಯೆ ಎಂದರೆ ಕುಡಿಯುವ ನೀರಿನ ಅಭಾವ. ಇದು ಕೇವಲ ಒಂದು ಸಮಸ್ಯೆಯಲ್ಲ, ಜನರ ದೈನಂದಿನ ಬದುಕಿಗೆ ಸಂಬಂಧಿಸಿದ ಅತ್ಯಂತ ಮುಖ್ಯ ವಿಷಯವಾಗಿದೆ. ಆದ್ದರಿಂದ ಈ ವಿಷಯವನ್ನು ನಾವು ಅತ್ಯಂತ ಗಂಭೀರವಾಗಿ ತೆಗೆದು ಕೊಳ್ಳಬೇಕಾಗಿದೆ ಪಟ್ಟಣದಲ್ಲಿ ಬಹು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಸಾರ್ವಜನಿಕ ರಿಗೆ ತೊಂದರೆಯಾಗದಂತೆ ನೋಡಿ ಕೊಳ್ಳಬೇಕು ಎಂದು ಲಿಂಗಸುಗೂರು ಕ್ಷೇತ್ರದ ಶಾಸಕ ಮಾನಪ್ಪ ಡಿ. ವಜ್ಜಲ್ ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಬೋಗಾರ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪುರಸಭೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ  ಕುಡಿಯುವ ನೀರಿನ ಸಮಸ್ಯೆ ಸಭೆಯಲ್ಲಿ ಮಾತನಾಡಿದ ಅವರು ನೀರಿನ ಸಮಸ್ಯೆ ಬಗೆಹರಿಸಲು ಎಷ್ಟು ಹಣ ವ್ಯಯವಾಗುತ್ತದೆ. ಕ್ರಿಯಾ ಯೋಜನೆ ಮಾಡಿದ್ದೀರಾ, 23 ವಾರ್ಡ್ ಗಳಲ್ಲಿ ಬೋರ್‌ವೆಲ್
ಚಾಲ್ತಿ, ವಾಡ೯ಗಳಲ್ಲಿ ರಸ್ತೆ ಅಕ್ರಮಿತ ಸ್ಥಳಗಳ ಪರಿಶೀಲನೆ, ಚರಂಡಿ ಸ್ವಚ್ಛತೆ, ಕಸ ಎತ್ತುವಿಕೆ, ಬೀದಿ ನಾಯಿಗಳಿಂದ ಜನರಿಗೆ ತೊಂದರೆ, ಖಾತಾ ನಕಲ್ ನೀಡುವ ಸಮಸ್ಯೆ, ಗೋವುಗಳ ರಕ್ಷಣೆ, ವಾಣಿಜ್ಯ ಮಳಿಗೆ ಹರಾಜು, ಬೀದಿ ದೀಪ ಸಮಸ್ಯೆ, ಸಾರ್ವಜನಿಕ ಸೌಲಭ್ಯಕ್ಕಾಗಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮೀಸಲಿಟ್ಟಿರುವ ನಿವೇಶನ ಸಿ.ಎ ಸೈಟ್ ಲಿಸ್ಟ್ ನೀಡಿ , ಕೋಟೆ ತಡೆಗೋಡೆ ನಿರ್ಮಾಣ, ಬೀದಿಬದಿ ವ್ಯಾಪಾರಸ್ಥರ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆ ಹಾಗೂ ಪುರಸಭೆಯ ರೆವಿನ್ಯೂ ದಾಖಲೆ ಸಹಿತ ಮಾಹಿತಿ ಕೇಳಿದರು. 
ಮಾಹಿತಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ನೀರಿಗಾಗಿ ಅಂದಾಜು 75 ಲಕ್ಷದವರೆಗೆ ವೆಚ್ಚ ತಗಲುತ್ತದೆ ಎಂದು ಉತ್ತರಿಸಿದರು. ನೀರಿನ ಸಮಸ್ಯೆ ಬಗೆಹರಿಸಲು, ಜಿಲ್ಲಾಧಿಕಾರಿ ಅನುದಾನದಲ್ಲಿ ಒಂದು ಕೋಟಿ ಹಣವಿದೆ. ಶಾಸಕರ  (ಕೆಕೆಆರ್‌ಡಿಬಿ) ಯಲ್ಲಿ ಒಂದು ಕೋಟಿ ಅನುದಾನ ನೀಡುವ ಭರವಸೆ ನೀಡಿದರು. ಪಟ್ಟಣದ ಸಾರ್ವಜನಿಕರಿಗೆ ನಾಲ್ಕರಿಂದ ಐದು ದಿನಗಳಿಗೊಮ್ಮೆ ಸಮರ್ಪಕ ನೀರು ಪೂರೈಕೆ ಮಾಡಬೇಕು. ಮೀಟಿಂಗ ಇರುವಾಗ ದಾಖಲೆಗಳು ಇಲ್ಲದೆ ಅಡ್ಡಗೋಡೆ ಮೇಲೆ ದೀಪ ಇಟ್ಟಹಾಗೆ ಹೇಳುವುದು ಸರಿಯಲ್ಲ, ಸರಕಾರಿ ಆಸ್ತಿಗಳಿಗೆ ದಕ್ಕೆ ಯಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿಗಾಗಿ ಸಮರ್ಪಕ ಕಾರ್ಯನಿರ್ವಹಿಸಲು ರಂಗನಾಥ ತಳವಾರ ಅವರಿಗೆ ವಹಿಸಬೇಕು. 
ಕಾಟಾಚಾರಕ್ಕೆ ಬರಬೇಡಿ’: ತಮ್ಮ ಇಲಾಖೆ ಮಾಹಿತಿ ಇಲ್ಲದೆ ಸಭೆಗೆ ಬಂದಿದ್ದ ಅಧಿಕಾರಿಗಳ ವಿರುದ್ಧ ಗರಂ ಆದ ಶಾಸಕರು, ‘ನೀರಿನ ಸಮಸ್ಯೆ ಬಗ್ಗೆ ಸಭೆ ಕರೆದಿದ್ದೇನೆ, ನೀವು ಮಾಹಿತಿ ಇಲ್ಲದೆ ಬಂದಿದ್ದೀರಿ ಅಂದರೆ ಸಭೆಯ ಗಂಭೀರತೆ ಅರಿವು ಇಲ್ಲವಾ, ಕಾಟಾಚಾರಕ್ಕಾಗಿ ಸಭೆಗೆ ಬರಬೇಡಿ. ಈ ಬಗ್ಗೆ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಬಸವಣ್ಣಪ್ಪ ಕಲಶೆಟ್ಟಿ, ಮಸ್ಕಿ ವೃತ್ತದ ಸಿಪಿಐ ರಾಮಣ್ಣ ಜಲಗೇರಿ, ಪುರಸಭೆ ಸಿಬ್ಬಂದಿಗಳು ಇದ್ದರು.
 ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!