You are currently viewing LOCAL NEWS : ಪೋಲಿಯೋ ಲಸಿಕೆಗೆ ಚಾಲನೆ ನೀಡಿದ ಪ.ಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ 

LOCAL NEWS : ಪೋಲಿಯೋ ಲಸಿಕೆಗೆ ಚಾಲನೆ ನೀಡಿದ ಪ.ಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ 

LOCAL NEWS : ಪೋಲಿಯೋ ಲಸಿಕೆಗೆ ಚಾಲನೆ ನೀಡಿದ ಪ.ಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ 

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರ : ಪಟ್ಟಣದ 8ನೇ ವಾರ್ಡಿನ ಅಂಗನವಾಡಿ ಕೇಂದ್ರದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಲಿತಮ್ಮ ಯಡಿಯಾಪುರ ಅವರು ಮಗುವಿಗೆ ಪೋಲಿಯೋ ಹನಿ ಹಾಕುವುದರ ಮೂಲಕ ಚಾಲನೆ ನೀಡಿದರು.

ಬಳಿಕ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಲಿತಮ್ಮ ಯಡಿಯಾಪುರ ಮಾತನಾಡಿ, ಪೋಲಿಯೊ ಮೈಲೈಟಿಸ್ ವೈರಸ್‌ನಿಂದ ಪೋಲಿಯೊ ಬರಲಿದ್ದು ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಸಂಭಾವ್ಯ ಅಂಗವಿಕಲತೆ ತಡೆಗಟ್ಟಬಹುದು, ಪೋಲಿಯೊ ಕಾಯಿಲೆಯು ಕಲುಷಿತ ನೀರು ಮತ್ತು ಆಹಾರದಿಂದಲೂ ಹರಡುತ್ತದೆ ಎಂದು ಮಾಹಿತಿ ನೀಡಿದರು.

2011ರಲ್ಲಿ ದೇಶದಲ್ಲಿ ಕೊನೆಯದಾಗಿ ಪೋಲಿಯೊ ಪ್ರಕರಣ ವರದಿಯಾಗಿದ್ದು ನಂತರ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ‘ಪೋಲಿಯೊ ಮುಕ್ತ ದೇಶ’ ಎಂದು ಘೋಷಿಸಿದೆ. ಆದರೂ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಗಾನಿಸ್ಥಾನದಲ್ಲಿ ಕೆಲವು ಪೋಲಿಯೊ ಪ್ರಕರಣಗಳು ವರದಿಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ‌ಭಾರತದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಮುಂದುವರಿಸಲಾಗಿದೆ. ಪೋಲಿಯೊ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಶ್ವೇತ ವನ್ನಳ್ಳಿ, ಆಶಾ ಕಾರ್ಯಕರ್ತೆ ಶಂಕ್ರಮ್ಮ ಹಳ್ಳಿಕೇರಿ, ಅಂಗನವಾಡಿ ಸಹಾಯಕಿ ಶರಿಪಾ ಬೇಗಂ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

error: Content is protected !!