KOPPAL NEWS : ಲಕ್ಷಾಂತರ ಭಕ್ತರ ನಡುವೆ ಅದ್ದೂರಿಯಾಗಿ ಜರುಗಿದ ಕೊಪ್ಪಳ ಗವಿಸಿದ್ದೇಶ್ವರ ಮಹಾ ರಥೋತ್ಸವ!!
ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕೊಪ್ಪಳ : ಐತಿಹಾಸಿಕ, ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಖ್ಯಾತಿಗೊಂಡಿರುವ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವವು ಇಂದು ಭಕ್ತಿ ಮತ್ತು ಸಡಗರದಿಂದ ಜರುಗಿತು. ಈ ರಥೋತ್ಸವಕ್ಕೆ ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅವರು ಚಾಲನೆ ನೀಡಿದರು.
ಸುಮಾರು 5 ಲಕ್ಷ ಜನರು ಈ ವೇಳೆ ಭಾಗಿಯಾಗಿದ್ದರು ಎಂಬುವವರು ಬಹಳ ವಿಶೇಷವಾಗಿದೆ. ರಾಜ್ಯದ ಅನೇಕ ಜನಪ್ರತಿನಿಧಿಗಳು ಸ್ವ ಇಚ್ಛೆಯಿಂದ ಶ್ರೀ ಗವಿಸಿದ್ದೇಶ್ವರನ ಆಶೀರ್ವಾದ ಪಡೆಯಲು ಮತ್ತು ಈ ಪುಣ್ಯ ಕಾರ್ಯಕ್ಕೆ ಸಾಕ್ಷಿಯಾಗಲು ಆಗಮಿಸಿದ್ದರು. ಕೇಂದ್ರ ಸಚಿವ ವಿ.ಸೋಮಣ್ಣ, ಸಚಿವ ಶಿವರಾಜ ತಂಗಡಗಿ, ಸಂಸದರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿ ಹಲವರು ಉಪಸ್ಥಿತರಿದ್ದರು. ಇದೊಂದು ಬಹಳ ವಿಶೇಷವಾದ ಕ್ಷಣಕ್ಕೆ ಸಾಕ್ಷಿಯಾಯ್ತು ಎಂದು ಹೇಳಬಹುದು.