ಇಲಕಲ್ಲ: ಭಾರತ ವೈಭವ ನ್ಯೂಸ್ ಚಾನಲ್ ವರದಿಗಾರ ದಾವಲ್ ಸೇಡಂ ಇನ್ನಿಲ್ಲ…

ನಿಧನ ವಾರ್ತೆ..

ಭಾರತ ವೈಭವ ನ್ಯೂಸ್ ಚಾನಲ್ ವರದಿಗಾರ ದಾವಲ್ ಸೇಡಂ ಇನ್ನಿಲ್ಲ…

ಇಳಕಲ್ : ಕರ್ನಾಟಕ ಕಾರ್ಯನಿರ್ತರ ಪತ್ರಕರ್ತರ ಸಂಘ ಬೆಳಗಾವಿ ಇಳಕಲ್ ತಾಲೂಕ ಅಧ್ಯಕ್ಷ ದಾವಲ್ ಸೇಡಂ ಇಂದು ಬೆಳಿಗ್ಗೆ ಅನಾರೋಗದ ಕಾರಣ ನಿಧಾನರಾಗಿದ್ದಾರೆ.

ಅವರಿಗೆ 53 ವರ್ಷ ವಯಸ್ಸಾಗಿತ್ತು ದಿವಂಗತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಮಿತ್ರರನ್ನು ಬಿಟ್ಟು ಅಗಲಿದ್ದಾರೆ, ಅವರ ಅಂತ್ಯಕ್ರಿಯೆ ಇಂದು ಸಾಯಂಕಾಲ 4:00ಗಂಟೆಗೆ ಜರುಗಲಿದೆ .

ಭಾರತ ವೈಭವ ವರದಿಗಾರರಾಗಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿ, ತನ್ನದೇ ಯಾದ ಸ್ವಂತ ದೈತ್ಯ ನ್ಯೂಸ್ಎಂಬ ಯೂಟ್ಯೂಬ್ ಚಾನಲ್ ಪ್ರಾರಂಭಿಸಿದ್ದರು. ಅವರ ಅಗಲಿಕೆಯಿಂದ ಅವರ ಕುಟುಂಬ ನೋವು ತಡೆದುಕೊಳ್ಳುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ಇಳಕಲ್ ತಾಲೂಕ ಸಮಸ್ತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ, ಹಾಗೂ ಬಾಗಲಕೋಟೆ ಜಿಲ್ಲಾ ಕಮಿಟಿ  ಹಾಗೂ ಆತ್ಮೀಯರಾದ  ಸಂಜೆವಾಣಿ ದಿನ ಪತ್ರಿಕೆಯ ಮುದಗಲ್ಲ ವರದಿಗಾರರಾದ  ಮಂಜುನಾಥ ಕುಂಬಾರ ಸಂತಾಪ ವ್ಯಕ್ತಪಡಿಸಿದೆ.

 

Prajavikshane

Chandru R Bhanapaur

Leave a Reply

error: Content is protected !!