You are currently viewing ಮುದಗಲ್ಲ :- ಸಿರಿಗೇರಿಯ ಕಲಾವಿದ ತಂಡದಿಂದ ಕಿಲ್ಲಾದಲ್ಲಿ ರುವ ಹಜರತ್ ಹುಸೇನ್ ಆಲಂ ದರ್ಗಾದಲ್ಲಿ ಮೊಹರಂ ರಿವಾಯತಿ ಹಾಡುಗಳು ಹಾಡಿದರು..

ಮುದಗಲ್ಲ :- ಸಿರಿಗೇರಿಯ ಕಲಾವಿದ ತಂಡದಿಂದ ಕಿಲ್ಲಾದಲ್ಲಿ ರುವ ಹಜರತ್ ಹುಸೇನ್ ಆಲಂ ದರ್ಗಾದಲ್ಲಿ ಮೊಹರಂ ರಿವಾಯತಿ ಹಾಡುಗಳು ಹಾಡಿದರು..

ಮುದಗಲ್ಲ ವರದಿ..

ಮುದಗಲ್ಲ :- ಸಿರಿಗೇರಿಯ ಕಲಾವಿದ ತಂಡದಿಂದ ಕಿಲ್ಲಾದಲ್ಲಿ ರುವ ಹಜರತ್ ಹುಸೇನ್ ಆಲಂ ದರ್ಗಾದಲ್ಲಿ ಮೊಹರಂ ರಿವಾಯತಿ ಹಾಡುಗಳು ಹಾಡಿದರು..

ಮುದಗಲ್ಲ :- ಕಿಲ್ಲಾದಲ್ಲಿರುವ ಹಜರತ್ ಹುಸೇನ್ ಆಲಂ ದರ್ಗಾದಲ್ಲಿ ಹಾಗೂ ಮೌಲಾಲಿ ದಾಗ೯ ದ ಮುಂದೆ ಬಳ್ಳಾರಿ ಜಿಲ್ಲೆ
ಸಿರಿಗೇರಿ ಯ ತಂಡದಿಂದ ರಿವಾಯತ್ (ಮೊಹರಂ ಪದಗಳು) ಹಾಡುಗಳು, ಅಲಾಯಿ ಕುಣಿತ, ಮತ್ತು ಅಗ್ನಿ ಕುಂಡದ ಪದ್ಧತಿಗಳು ಹಾಡುಗಳು ಹಾಡಿದರು

ಈ ಸಂದರ್ಭದಲ್ಲಿ ಮಾತನಾಡಿದ ತಂಡದ ಮುಖ್ಯ ಗುರಗಳಾದ ಶ್ರೀ ರಾಮಪ್ಪ ಮೇಷ್ಟ್ರು ಅವರು ಮಾತನಾಡಿದ್ದರು ಈ ಭಾಗದ ಪ್ರಮುಖ ರಿವಾಯತಿ ಉತ್ತರ ಕರ್ನಾಟಕ ಭಾಗದಲ್ಲಿ ಮೊಹರಂ ಹಬ್ಬದ ಸಂದರ್ಭದಲ್ಲಿ ಹಾಡುವ ಭಕ್ತಿಗೀತೆಗಳನ್ನು ಮೊಹರಂ ರಿವಾಯತಿ (ರಿವಾಯತ್) ಪದಗಳು ಎನ್ನುವರು. ಇವು ಇಸ್ಲಾಂ ಧರ್ಮದ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಕರ್ಬಲಾ ಯುದ್ಧದ ಕಥೆಯನ್ನು ಹಾಗೂ ಪ್ರವಾದಿ ಮೊಹಮ್ಮದ್ ಅವರ ಮೊಮ್ಮಕ್ಕ. ಳಾದ ಹಸನ್-ಹುಸೇನ್ ಅವರ ತ್ಯಾಗವನ್ನು ಸ್ಮರಿಸುವ ಜನಪದ ಹಾಡುಗಳಾಗಿವೆ.ಈ ಪದಗಳ ಪ್ರಮುಖ ಲಕ್ಷಣಗಳು ಮತ್ತು ಇತಿಹಾಸ ಭಾಷೆ ಮತ್ತು ಶೈಲಿ ಸ್ಥಳೀಯ ಭಾಷೆಯಾದ ಕನ್ನಡದಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ರಚಿತವಾಗಿರುವ ಈ ಪದಗಳು, ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುತ್ತವೆ. ಸಾಮಾನ್ಯವಾಗಿ ಡೋಲು, ತಮಟೆ, ಮತ್ತು ಇತರೆ ಜಾನಪದ ವಾದ್ಯಗಳೊಂದಿಗೆ ಸಮೂಹದಲ್ಲಿ ಲಯಬದ್ಧವಾಗಿ ಹಾಡಲಾಗುತ್ತದೆ. ತಮ್ಮ ಇಷ್ಟಾರ್ಥಗಳು ಈಡೇರಿದಾಗ ಭಕ್ತರು ಮೊಹರಂ ದೇವರ ಮುಂದೆ ಹರಕೆ ತೀರಿಸುತ್ತಾರೆ. ಭಕ್ತಿ ಸಮರ್ಪಣೆ ಮಾಡುವುದು ರೂಢಿಯಲ್ಲಿದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ತಂಡದ ಮುಖ್ಯ ಗುರುಗಳು ಶ್ರೀ ರಾಣಪ್ಪ ಮೇಷ್ಟ್ರು ಹಾಗು ಶಿಷ್ಯರು. ಮೂರ್ತಿ, ರಹಿಮಾನ್, ಸಂತೋಷ, ಶ್ರೀಧರ್, ಬಾಲೆಸಬ್, ಪುರುಷೋತ್ತಮ, ಮಹಮದ್, ಚಂದ್ ಭಾಷ , ಖಜಾ, ಗಾದಿಲಿಂಗ, ತಬರೇಜ್, ಅನ್ವರ್,ಇತರರು ಉಪಸ್ಥಿತರಿದ್ದರು

ವರದಿ: ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!