LOCAL NEWS : ಆ.26 ರಂದು ವಿಶ್ವ ಜಾನಪದ ದಿನಾಚರಣೆ , ೧೦ ನೆಯ ಯುವ ಜಾನಪದ ಸಾಂಸ್ಕೃತಿಕ ಹಬ್ಬ !  

You are currently viewing LOCAL NEWS : ಆ.26 ರಂದು ವಿಶ್ವ ಜಾನಪದ ದಿನಾಚರಣೆ , ೧೦ ನೆಯ ಯುವ ಜಾನಪದ ಸಾಂಸ್ಕೃತಿಕ ಹಬ್ಬ !  

ಆ.26 ರಂದು ವಿಶ್ವ ಜಾನಪದ ದಿನಾಚರಣೆ , ೧೦ ನೆಯ ಯುವ ಜಾನಪದ ಸಾಂಸ್ಕೃತಿಕ ಹಬ್ಬ ! 

ಕುಕನೂರು: ಇಲ್ಲಿಯ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ (ರಿ) ವತಿಯಿಂದ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ೧೦ನೆಯ ಜಾನಪದ ಯುವ ಸಾಂಸ್ಕೃತಿಕ ಹಬ್ಬ , ಹಾಡು , ಮಾತು ಮಂಥನ . ಕಾರ್ಯಕ್ರಮ 26ರಂದು ಸೋಮವಾರ ಮುಂಜಾನೆ 11.30 ಕೆ ಕುಕನೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜರುಗಲಿದೆ.

ಈ ಕಾರ್ಯಕ್ರಮದಲ್ಲಿ ತತ್ವಪದಕಾರರು ಹಾಗೂ ಸಾಹಿತಿ ಆರ್. ಪಿ .ರಾಜೂರು ಅವರು ಕಾಯ೯ಕ್ರಮಕ್ಕೆ ಚಾಲನೆ ನೀಡುವರು. ಪ್ರಾಚಾರ್ಯ ಈಶಪ್ಪ ಮಳಗಿ ಅಧ್ಯಕ್ಷತೆ ವಹಿಸುವರು. ಕೆ.ಎಲ್. ಇ ಕಾಲೇಜ್ ಉಪನ್ಯಾಸಕ ಶರಣಪ್ಪ ಉಮಚಗಿ ಅವರು ಉಪನ್ಯಾಸ ನೀಡಲಿದ್ದಾರೆ.

ಪಟ್ಟಣ ಪಂಚಾಯತ್ ಸದಸ್ಯ ನೂರ ಅಹ್ಮದ್ ಗುಡಿ ಹಿಂದಲ್ ಪ್ರಶಸ್ತಿ ವಿತರಣೆ ಮಾಡುವರು. ಮುಖ್ಯಅತಿಥಿಗಳಾಗಿ ಶ್ರೀನಿವಾಸ್ ದೇಸಾಯಿ ಉಪಾಧ್ಯಕ್ಷರು ಕಾಲೇಜು ಸುಧಾರಣಾ ಸಮಿತಿ. ಶ್ರೀ ಸಿದ್ದಪ್ಪ ಬಗರಿಕರ ಮೃದಂಗ ವಾದಕರು,ಜಾನಪದ ಕಲಾವಿದರು ಕಲ್ಲೂರು. ಸಿದ್ಧಲಿಂಗಯ್ಯ ಶ್ರೀ ಮೇಘರಾಜ ಎಸ್ ಜಿಡಗಿ , (ಜಾನಪದ ಗಾಯನ ). ಗೋವಿಂದ ಭಜಂತ್ರಿ ( ಜಾನಪದ ಗಾಯನ) ಮುದುಕಪ್ಪ ಅಣ್ಣಿಗೇರಿ( ಹಲಗಿ ವಾದನ ) ಮುರಾರಿ ಭಜಂತ್ರಿ (ಜಾನಪದ ಗಾಯನ ) ಹಾಗೂ ಸ್ಥಳೀಯ ವಿವಿಧ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ವೈವಿಧ್ಯ ನಡೆಯಲಿವೆ . ಮಂಜುನಾಥ್ ಅಂಗಡಿ ಹಾಗೂ ಕನಕರಾಯ ಭಜಂತ್ರಿ ನಿರೂಪಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ರುದ್ರಪ್ಪ ಭಂಡಾರಿ ತಿಳಿಸಿದ್ದಾರೆ…

Leave a Reply

error: Content is protected !!