LOCAL EXPRESS : K.S.R.T.C ಬಸ್ ಗೆ ಬೈಕ್ ಡಿಕ್ಕಿ : ಬೈಕ್ ಸವಾರ ಸಾವು…!

You are currently viewing LOCAL EXPRESS : K.S.R.T.C ಬಸ್ ಗೆ ಬೈಕ್ ಡಿಕ್ಕಿ : ಬೈಕ್ ಸವಾರ ಸಾವು…!

ಕುಕನೂರು : ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಭಾರಿ ಅಪಘಾತ ನಡೆದಿದ್ದು, ಈ ಪರಿಣಾಮವಾಗಿ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಪಟ್ಟಣದ ಕುಕನೂರು ಬಸ್ ಡಿಪೋ ಹತ್ತಿರ ಗುದ್ನೇಪ್ಪನ ಮಠದಿಂದ ಕುಕನೂರು ಕಡೆಗೆ ಬೈಕ್ ಸವಾರ ಹೋಗುತ್ತಿದ್ದಾ ಈ ವೇಳೆ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮ ಬೈಕ್ ಸವಾರನಿಗೆ ಗಂಭೀರವಾಗಿ ಗಾಯವಾಗಿದ್ದು, ಆಂಬುಲೆನ್ಸ್ ಕರೆಸಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಕೆ ಎಸ್ ಆರ್ ಟಿ ಸಿ ಬಸ್ (KA-37 F 0863) ನಂಬರ್ ಇದಾಗಿದೆ. ಬೈಕ್ ನಂಬರ್ (KA 37 EC 9470).

ಯಲಬುರ್ಗಾ ತಾಲೂಕಿನ ಗದಿಗೇರಿ ಗ್ರಾಮದ ನಿರೂಪಾದ್ ಮುದಿಯಪ್ಪ ಟೆಂಗುಂಟಿ (17 ವರ್ಷ) ಎಂದು ಗುರುತಿಸಲಾಗಿದೆ. ನಿರುಪಾದ ಪ್ರಥಮ ಪಿಯುಸಿ, ಸರಕಾರಿ ಪದವಿ ಪೂರ್ವ ಕಾಲೇಜು ಕುಕನೂರಿನಲ್ಲಿ ಓದುತ್ತಿದ್ದನು. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

error: Content is protected !!