LOCAL NEWS : ಕುಕನೂರ | ಗುದ್ನೇಶ್ವರ ಮಠದ ಜಮೀನು ವಿವಾದ ಪ್ರಕರಣ: ಅಧಿಕಾರಿಗಳ ಭೇಟಿ ಸ್ಥಳೀಯರ ಕುತೂಹಲಕ್ಕೆ ಕಾರಣ!

You are currently viewing LOCAL NEWS : ಕುಕನೂರ | ಗುದ್ನೇಶ್ವರ ಮಠದ ಜಮೀನು ವಿವಾದ ಪ್ರಕರಣ: ಅಧಿಕಾರಿಗಳ ಭೇಟಿ ಸ್ಥಳೀಯರ ಕುತೂಹಲಕ್ಕೆ ಕಾರಣ!

LOCAL NEWS : ಕುಕನೂರ | ಗುದ್ನೇಶ್ವರ ಮಠದ ಜಮೀನು ವಿವಾದ ಪ್ರಕರಣ: ಅಧಿಕಾರಿಗಳ ಭೇಟಿ ಸ್ಥಳೀಯರ ಕುತೂಹಲಕ್ಕೆ ಕಾರಣ!

ಹೈಕೋರ್ಟ್ ವಿಚಾರಣೆಯ ಮಧ್ಯೆ ಜಮೀನು ಪರಿಶೀಲನೆ”

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು ಫೆ.13: ಪಟ್ಟಣದಲ್ಲಿರುವ ಮುಜರಾಯಿ ಇಲಾಖೆಗೆ ಒಳಪಡುವ ಗುದ್ನೇಶ್ವರ ದೇವಸ್ಥಾನದ ಜಮೀನಿನ ವೀಕ್ಷಣೆಗೆ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಕಲ್ಯಾಣ ಕಲಬುರಗಿ ವಿಭಾಗೀಯ ಉಪ ಆಯುಕ್ತೆ ಜಹೀರಾ ನಸ್ರಿಮ್ ಅವರು ಶುಕ್ರವಾರ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎನ್ನಲಾಗಿದೆ.

ಭೇಟಿಯ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಅವರು ಉಪಸ್ಥಿತರಿದ್ದರು.

‘ಗುದ್ನೇಶ್ವರ ದೇವಸ್ಥಾನದ ಜಮೀನು ಸಂಬಂಧ ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ. ಈ ಜಾಗದಲ್ಲಿ ತಾಲೂಕು ಆಡಳಿತ ಕಚೇರಿ, ಬುದ್ಧ ಬಸವ ಅಂಬೇಡ್ಕರ್ ಭವನ ಹಾಗೂ ನ್ಯಾಯಾಲಯ ನಿರ್ಮಾಣಕ್ಕೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗುದ್ನೇಶ್ವರ ಮಠದ ಗ್ರಾಮಸ್ಥರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

 

ಸುಮಾರು ಎರಡುವರೆ ವರ್ಷಗಳಿಂದ ಜಮೀನು ವಿವಾದ ಮುಂದುವರಿದಿರುವ ಹಿನ್ನೆಲೆ ಪ್ರಕರಣ ಅಂತಿಮ ಹಂತದಲ್ಲಿರುವ ಸಂದರ್ಭದಲ್ಲೇ ಅಧಿಕಾರಿಗಳ ಭೇಟಿ ಸ್ಥಳೀಯ ವಲಯದಲ್ಲಿ ಗಮನ ಸೆಳೆದಿದೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಪ ಆಯುಕ್ತೆ ಜಹೀರಾ ನಸ್ರಿಮ್ ಅವರು, “ಕಂದಾಯ ಇಲಾಖೆಗೆ ಸಂಬಂಧಿಸಿದ ಜಮೀನು ಇರುವ ಹಿನ್ನೆಲೆ ನಿಯಮಿತ ಆಡಳಿತಾತ್ಮಕ ವೀಕ್ಷಣೆ ನಡೆಸಲಾಗಿದೆ,” ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗತ್ತಿ, ಕುಕನೂರು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಂತೋಷ ಬಿರಾದಾರ್ ಪಾಟೀಲ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು

Leave a Reply

error: Content is protected !!