LOCAL NEWS : ‘ಬಂಜಾರ & ಇತರೆ ಸಮಾಜದವರಿಗೆ ಶೇಕಡಾ 6ರಷ್ಟು ಒಳಮಿಸಲಾತಿ ಕಲ್ಪಿಸಿ ಎಂದು ಸಚಿವ ಡಾ.ಜಿ. ಪರಮೇಶ್ವರ್&ಸಚಿವ ಹೆಚ್ ಕೆ ಪಾಟೀಲ್ ಅವರಿಗೆ ಮನವಿ!
ಕುಕನೂರು : ರಾಜ್ಯದಲ್ಲಿ ಇದೀಗ ಒಳಮಿಸಲಾತಿ ವಿಚಾರ ಭಾರೀ ಚರ್ಚೆಗೆ ಬಂದಿದ್ದು, ರಾಜ್ಯದ ಬಂಜಾರ, ಭೋವಿ, ಕೊರಮ, ಕೊರಚರಿಗೆ ಶೇಕಡಾ 6ರಷ್ಟು ಒಳಮಿಸಲಾತಿ ಕಲ್ಪಿಸಬೇಕು ಎಂದು ಕುಕನೂರು ತಾಲೂಕಾ ಬಂಜಾರ ಸಮಾಜದ ಮುಖಂಡರಿಂದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹಾಗೂ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರಿಗೆ ಮನವಿ ಮಾಡಿದರು.
ads place
ಇಂದು ಕುಕನೂರಿನ ಪರಿವೀಕ್ಷಣಾ ಮಂದಿರದಲ್ಲಿ ಬಂಜಾರ, ಭೋವಿ,ಕೊರಚ, ಕೊರಮ ಸಮಾಜದ ಮುಖಂಡರು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹಾಗೂ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರಿಗೆ ಭೇಟಿ ಮಾಡಿ ಒಳಮಿಸಲಾತಿ ವಿಚಾರದ ಬಗ್ಗೆ ಸಂಕ್ಷೀಪ್ತವಾಗಿ ಮನವರಿಕೆ ಮಾಡಿ ಮನವಿ ಮಾಡಿದರು.
ಬಂಜಾರ, ಭೋವಿ,ಕೊರಚ, ಕೊರಮ ಸಮಾಜದ ಸರ್ವ ನಾಗರಿಗರು, ಸರಕಾರ ಪರಿಶಿಷ್ಟ ಪಂಗಡದಲ್ಲಿ ಒಳ ಮೀಸಲಾತಿ ಮಾಡುತ್ತಿರುವದು ಸರಿಯಷ್ಟೆ.ಆದರೆ ಇದನ್ನು ಮಾಡುವಾಗ ನ್ಯಾ.ನಾಗಮೋಹನ ದಾಸ್ ವರದಿ ತಯಾರಿಸಲು ಜಾತಿ ಗಣತಿ ಕಾರ್ಯವನ್ನು ಮಾಡಿರುತ್ತಿರಿ, ಇದು ಸಮರ್ಪಕವಾಗಿ, ವೈಜ್ಞಾನಿಕವಾಗಿ ನ್ಯಾಯವಾಗಿ ನಡೆದಿರುವದಿಲ್ಲ. ನಮ್ಮ ಜನಾಂಗದವರು ಅನಕ್ಷರಸ್ಥರು, ಮುಗ್ದರು ಇರುವದರಿಂದ ಹಾಗೂ ನಮ್ಮ ಹತ್ತಿರ ಸರಿಯಾದ ದಾಖಲೆಗಳು ಇಲ್ಲದೇ ಇರುವದರಿಂದ ನಮ್ಮ ಜನಾಂಗಗಳ ನೋಂದಣಿ ಸರಿಯಾಗಿ ಆಗಿರುವುದಿಲ್ಲ. ಈ ಸಮಯದಲ್ಲಿ ಕೆಲವೊಂದಿಷ್ಟು ಜನ ಹೊಟ್ಟೆ ಪಾಡಿಗಾಗಿ ದುಡಿಯಲು ಗುಳೆ ಹೋಗಿರುವುದರಿಂದ ಈ ಜಾತಿಗಣತಿಯಿಂದ ಹೊರಗುಳಿದಿದ್ದಾರೆ. ಆದ ಕಾರಣ ಈ ಒಳ ಮೀಸಲಾತಿಯನ್ನು ಇಲ್ಲಿಗೆ ಬಿಡುವದು ಸೂಕ್ತವೆಂದು ನಮ್ಮ ಅಭಿಪ್ರಾಯವಾಗಿದೆ. ಎಂದರು.
ಹಾಗೊಂದು ವೇಳೆ ಜಾತಿಗಣತಿ ಮಾಡಲೇಬೇಕೆಂಬ ಇಚ್ಛೆ ನಿಮಗಿದ್ದರೆ, ಒಳಮೀಸಲಾತಿಯಲ್ಲಿ ನಮ್ಮ ಈ ನಾಲ್ಕು ಸಮಾಜಗಳಿಗೆ ಶೇಕಡಾ 6 ರಷ್ಟು ನೀಡಿದರೆ ನಮಗೆ ಅನುಕೂಲವಾಗುತ್ತದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ನಮಗೆ ಉಪಕಾರ ಮಾಡಿದಂತಾಗುತ್ತದೆ ಎಂದು ತಿಳಿಸಲಾಯಿತು.
ads place
ಈ ಸಂದರ್ಭದಲ್ಲಿ ಸುರೇಶ ಬಳೂಟಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಗೋರ ಸೇನಾ ಕರ್ನಾಟಕ. ಆಲ್ ಇಂಡಿಯಾ ಬಂಜಾರ್ ಸೇವಾ ಸಂಘದ ತಾಲೂಕಾ ಅದ್ಯಕ್ಷ ಮೇಘರಾಜ್ ಬಳಗೇರಿ, ಸಮಾಜದ ಮುಖಂಡರಾದ ಯಮನೂರಪ್ಪ ಕಟ್ಟಿಮನಿ, ಪ್ರಕಾಶ ಬಳಿಗೇರಿ, ಹನಮಂತ ಚವ್ಹಾಣ, ಪ್ರಾಣೇಶ ನಾಯಕ, ರಾಘವೇಂದ್ರ ಬಳಗೇರಿ, ಲಿಂಬಣ್ಣ ನಾಯಕ,ಚೇತನ ಬಳಿಗೇರಿ,ದಿಲೀಪ ಕಾರಭಾರಿ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.