ಮುದಗಲ್ಲ ವರದಿ..

ಐತಿಹಾಸಿಕ ಮುದಗಲ್ಲ ಭಾವೈಕ್ಯ ಸಂಕೇತವಾದ ಮೊಹರಂ ನೋಡ ಬನ್ನಿ..

ಮುದಗಲ್ಲ: ರಾಷ್ಟ್ರದಲ್ಲಿ ಹಿಂದು ಮುಸ್ಲಿಂ ಭಾವೈಕ್ಯ ಸಂಕೇತವಾಗಿ
ಹಲವು ಹಬ್ಬಗಳ ಆಚರಣೆ ನಡೆಸುತ್ತ ಬರಲಾಗಿದೆ. ಆ ಪೈಕಿ ಕೋಟೆ ಕೊತ್ತಲುಗಳ ಐತಿಹಾಸಿಕ ಪಟ್ಟಣ ಮುದಗಲ್ಲ ಪಟ್ಟಣದಲ್ಲಿ ಹತ್ತು ದಿನಗಳ ಕಾಲ ಆಚರಿಸಲ್ಪಡುವ ಮೊಹರಂ ವೈಶಿಷ್ಟ್ಯ ಪೂರ್ಣವಾಗಿದೆ.

ಕಳೆದ 1565ರಲ್ಲಿ ವಿಜಯನಗರದ ಅರಸರು ಮತ್ತು ಆದಿಲ್‌ ಶಾಹಿಗಳ ಮಧ್ಯೆ ಜರುಗಿದ ಕದನದಲ್ಲಿ ಆದಿಲ್‌ಶಾಹಿ ಸೈನ್ಯ
ವಿಜಯ ಸಾಧಿಸಿತು.ಆಸಂದರ್ಭದಲ್ಲಿ ಆದಿಲ್‌ಶಾಹಿ ಅರಸರು ಆಲಂ (ಪಂಜಾ)ಗಳನ್ನು ಪ್ರತಿಷ್ಠಾಪಿಸಿ ಹಿಂದು ಮುಸ್ಲಿಂಬಾಂಧವರಲ್ಲಿ ಸಹೋದರತ್ವ ಭಾವನೆ ಮೂಡಿಸಲು ಈ ಆಚರಣೆಜಾರಿಗೆ ತಂದರು ಎಂಬುದು ಇತಿಹಾಸದ ಪುಟಗಳಿಂದ ತಿಳಿದುಬ ರುತ್ತದೆ.

ಹಜರತ್‌ ಹುಸೇನ್‌ಬಾಷ, ಹಜರತ್ ಮೌಲಾಲಿ, ಇಮಾಮ್
ಖಾಸಿಂ, ಹಸೇನ್-ಹುಸೇನ್ ಸೇರಿದಂತೆ ಇತರೆ ಹೆಸರುಗಳ
ಆಲಂಗಳನ್ನು ಶೃಂಗಾರಗೊಳಿಸಿ ಸ್ಥಾಪಿಸಲಾಗುತ್ತದೆ.ಛಟ್ಟಿ ಅಮವಾಸ್ಯೆ ಆದ ಮೂರನೆ ದಿನ ಅಂದರೆ. ಮುಸ್ಲಿಂ ಧರ್ಮಿಯರಪ್ರಕಾರ ಹೊಸ ವರ್ಷದ ಆರಂಭದ ದಿನದಂದು ಚಂದ್ರದರ್ಶನದನಂತರ ಅಲಾಯಿ ಕುಣಿ (ಗುಂಡಿ)ಗೆ ಗುದ್ದಲಿ ಹಾಕುವ ಮೂಲಕಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.

ಈ ಹಬ್ಬದ 5ನೇ ದಿನದಂದು ಹಿಂದು ಮುಸ್ಲಿಂ ಬೇಧ-ಭಾವ
ಮರೆತು ಹರಕೆ ತೀರಿಸಲು ಕೆಂಪು ಸಕ್ಕರೆ ನೈವೇದ್ಯ ನೀಡಿ
ಲಾಡಿಗಳನ್ನು ಧರಿಸುತ್ತಾರೆ.ಆಲಂಗಳಿಗೆ ದಟ್ಟಿ, ಬೆಳ್ಳಿಯ ಕುದುರೆಅರ್ಪಿಸಿ ಹರಕೆ ತೀರುವುದು ಸಂಪ್ರದಾಯ..7ನೇ ದಿನಕ್ಕೆ ಇಮಾಮ್ ಖಾಸಿಂ ದೇವರ ಸವಾರಿ (ಉತ್ಸವ)ಜರಗುತ್ತದೆ. 9ನೇ ದಿನಕ್ಕೆ ಹಜರತ್‌ ಮೌಲಾಲಿ, ಹಸೇನ್-ಹುಸೇನ್ದೇವರುಗಳ ಸವಾರಿ ಭಾರಿ ವಿಜೃಂಭಣೆಯಿಂದ ನಡೆಯುತ್ತದೆ.ಕೊನೆಯ 10ನೇ ದಿನ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ ಎಲ್ಲಾ ಆಲಂಗಳು ಪರಸ್ಪರ ಭೇಟಿ ನೀಡಿದ ನಂತರ ಕರಬಲಾ (ಹೊಳೆ)ಕ್ಕೆ ತೆರಳಿದ ನಂತರ ಮಹೊರಂ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.

ಈ ಹಬ್ಬದ ಹತ್ತು ದಿನಗಳ ಅವಧಿಯಲ್ಲಿ ಮುದಗಲ್ಲ ಸೇರಿದಂತೆ
ತಾಲ್ಲೂಕಿನಾದ್ಯಂತ ಹಿಂದು-ಮುಸ್ಲಿಂ ಬಾಂಧವರು ಹೆಜ್ಜೆ ಮೇಳ,
ಕರಡಿ ಕುಣಿತ, ಹುಲಿವೇಷ, ಅಲಾಯಿ ಜಾನಪದ ಸೊಗಡಿನ
ಹಾಡುಗಳ ಮೂಲಕ ವೈವಿಧ್ಯಮಯ ಸಾಂಸ್ಕೃತಿಕ ಮೆರಗು ನೀಡುವುದು ಹಬ್ಬಕ್ಕೆ ಕಳೆ ಕಟ್ಟಿರುತ್ತದೆ.

ಮುದಗಲ್ಲ ಮೊಹರಂ ನೋಡಲು ಈಗಲೂ ರಾಜ್ಯದ ವಿವಿಧ
ಜಿಲ್ಲೆಗಳು ಸೇರಿದಂತೆ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ,
ಕೇರಳ, ಗೋವಾ ಮತ್ತಿತರ ರಾಜ್ಯಗಳಿಂದ ಲಕ್ಷಾಂತರ ಭಕ್ತರು
ಆಗಮಿಸುತ್ತಾರೆ. ತಾಲ್ಲೂಕು ಮತ್ತು ಪಟ್ಟಣ ಪುರಸಭೆ ಆಡಳಿತ ಮಂಡಳಿ ಭಕ್ತ ಸಮೂಹಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತದೆ.ಪೊಲೀಸ್ ಇಲಾಖೆ ಸೂಕ್ತ ಬಂದೋ ಬಸ್ತ್ ವ್ಯವಸ್ಥೆ ಮಾಡಿಕೊಡುವಮೂಲಕ ಸೌಹಾರ್ದತೆ ಹಬ್ಬ ಎಂಬ ಹೆಗ್ಗಳಿಕೆಗೆ ಕಾರಣೀಕರ್ತರಾಗಿದ್ದಾರೆ.

ರಾಜ್ಯದ ಸಚಿವರು, ಶಾಸಕರು, ವಿವಿಧ ಇಲಾಖೆಗಳ ಪ್ರಮುಖ
ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಐತಿಹಾಸಿಕ ಮೊಹರಂ ಹಬ್ಬದಲ್ಲಿ ಪಾಲ್ಗೊಂಡು ಸಾಕ್ಷಿಕರಿಸುತ್ತಾರೆ.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!