ಮುದಗಲ್ಲ ಪುರಸಭೆ ವತಿಯಿಂದ ಡಾ!!ಫ.ಗು.ಹಳಕಟ್ಟಿ ಅವರ ಜಯಂತಿ ಆಚರಣೆ..
ಮುದಗಲ್ಲ :- ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜಯಂತಿ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಸ್ಥಳೀಯ ಪುರಸಭೆ ವತಿಯಿಂದ ಆಚರಿಸಲಾಯಿತ್ತು
ಈ ಸಂದರ್ಭದಲ್ಲಿ ಪುರಸಭೆ ಯ ಮ್ಯಾನೇಜರ್ ಸುರೇಶ್ ಅವರು ಮಾತನಾಡಿ, ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಬಸವಾದಿ ಶರಣರ ವಚನಗಳ ಹಸ್ತಪ್ರತಿಗಳನ್ನು ಶೋಧಿಸಿ, ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದರು. ಈ ಕಾರ್ಯಕ್ಕಾಗಿ ಅವರು ಅನೇಕ ಕಷ್ಟ, ನೋವುಗಳನ್ನು ಅನುಭವಿಸಿದ್ದರು. ಸ್ವಂತ ಜೀವನ ಬಡತನದಲ್ಲಿಯೇ ಕಳೆದು ವಚನ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದ್ದರು ಎಂದು ತಿಳಿಸಿದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ತಸ್ಲೀಂ ಮುಲ್ಲಾ ಅವರು ಮಾತನಾಡಿ, ಹಳಕಟ್ಟಿ ಅವರು ನಿಜವಾಗಿಯೂ ವಚನ ಗುಮ್ಮಟವಾಗಿದ್ದರು. ಶರಣರ ವಚನಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವು ವಚನ ಸಾಹಿತ್ಯ ಸಂರಕ್ಷಣೆ ಮಾಡಿ ಹಳಕಟ್ಟಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ತಸ್ಲೀಂ ಮುಲ್ಲಾ , ಮ್ಯಾನೇಜರ್ ಸುರೇಶ , ಕಂದಾಯ ವಿಭಾಗದ ಅಂತೋನಿ ,ರೇಣುಕಾ ನೈಮಲ್ಯ ಅಧಿಕಾರಿಗಳಾದ ಅರೀಪ್ ಹುನ್ನಿಸಾ ಬೇಗಂ , ಜಿಲಾನಿ ಪಾಶ , ಚನ್ನಮ್ಮ ,ದೀಪಾ ರೇಣುಕಾ ಇತರರು ಉಪಸ್ಥಿತರಿದ್ದರು..