ಮುದಗಲ್ಲ :-ಮಡಿವಾಳ ಮಾಚಿದೇವರ ವಿಚಾರಗಳು ಮಾದರಿ:- ಪ್ರವೀಣ್ ಬೋಗರ್..

ಮುದಗಲ್ಲ :-ಮಡಿವಾಳ ಮಾಚಿದೇವರ ವಿಚಾರಗಳು ಮಾದರಿ:- ಪ್ರವೀಣ್ ಬೋಗರ್..

ಮುದಗಲ್ಲ :-ಪುರಸಭೆ ವತಿಯಿಂದ ಮಡಿವಾಳ ಮಾಚಿದೇವ ಜಯಂತಿ ಯನ್ನು ಸರಳಸುಂದರವಾಗಿ ಆಚರಣೆ ಮಾಡಲಾಯಿತು ನಂತರ ಮಾತನಾಡಿ ದ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಬೋಗರ್ ಅವರು ಮಡಿವಾಳ ಮಾಚಿದೇವರು ತಮ್ಮ ಕಾಯಕ ಮತ್ತು ವಚನಗಳ ಮೂಲಕ ಸಮಸ್ತ ಮಾನವ ಕುಲಕ್ಕೆ ಆದರ್ಶವಾಗಿದ್ದಾರೆ. ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಬೆಳಕು ನೀಡಿದ್ದಾರೆ ಹಾಗೂ ಕಾಯಕ ಮತ್ತು ವಿಶಿಷ್ಟ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ ಮಡಿವಾಳ ಮಾಚಿದೇವರು ಕಾಯಕ ಯೋಗಿ ಎನಿಸಿ ಕೊಂಡಿದ್ದಾರೆ. ಅವರ ಬದುಕಿನ ಚಿಂತನೆಗಳನ್ನು ನಾವು ತಿಳಿದುಕೊಂಡು ಇತರರಿಗೂ ತಿಳಿಸಬೇಕು’ ಎಂದು ಹೇಳಿದರು.

ಮಡಿವಾಳ ಮಾಚಿದೇವ ಅವರ ಭಾವಚಿತ್ರ ಕ್ಕೆ ಮಡಿವಾಳ ಸಮಾಜದ ಬಸವರಾಜ ಮಡಿವಾಳ ಅವರು ಪೂಜೆ ಸಲ್ಲಿಸಿದ್ದರು

ಈ ಸಂದರ್ಭದಲ್ಲಿ ನೈಮಲ್ಯ ವಿಭಾಗದ ಅಧಿಕಾರಿ ಆರೀಪ್ ಹುನ್ನಿಸಾ ಬೇಗಂ ,ಚನ್ನಮ್ಮ ದಳವಾಯಿ ಹಿರೇಮಠ, ನಿಸಾರ್ ಅಹಮದ್. ಮಡಿವಾಳ ಸಮಾಜದ
ಶರಣಪ್ಪ ಮಡಿವಾಳ ,ಲಿಂಗಪ್ಪ ಮಡಿವಾಳ ,ಆನಂದ ಮಡಿವಾಳ, ಗಂಗಾಧರ ಮಡಿವಾಳ , ಸಮಾಜ ಹಿರಿಯ ಮುಖಂಡರು ಹಾಗೂ ಮಲ್ಲಪ್ಪ ಮಾಟೂರ್ , ಖದೀರ್ ಪಾನ್ ವಾಲೆ, ಉಪಸ್ಥಿತರಿದ್ದರು.

ವರದಿ:-ಮಂಜುನಾಥ ಕುಂಬಾರ

 

Leave a Reply

error: Content is protected !!