SPECIAL DAY : ಸತ್ಗುರು ಸಂತ ಶ್ರೀ ಸೇವಾಲಾಲ್ ಮಹಾರಾಜ್‌ರವರ 287ನೇಯ ಜಯಂತಿಯ ಶುಭಾಶಯಗಳು : ಸಂಕ್ಷಿಪ್ತ ಇತಿಹಾಸ..!

You are currently viewing SPECIAL DAY : ಸತ್ಗುರು ಸಂತ ಶ್ರೀ ಸೇವಾಲಾಲ್ ಮಹಾರಾಜ್‌ರವರ 287ನೇಯ ಜಯಂತಿಯ ಶುಭಾಶಯಗಳು : ಸಂಕ್ಷಿಪ್ತ ಇತಿಹಾಸ..!

SPECIAL DAY : ಸತ್ಗುರು ಸಂತ ಶ್ರೀ ಸೇವಾಲಾಲ್ ಮಹಾರಾಜ್‌ರವರ 287ನೇಯ ಜಯಂತಿಯ ಶುಭಾಶಯಗಳು

ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ : 

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ : ಸಂತ ಶ್ರೀ ಸೇವಾಲಾಲ್ ಮಹಾರಾಜ್‌ರವರು(1739-1806) ಬಂಜಾರ (ಲಂಬಾಣಿ) ಸಮುದಾಯದ ಅತ್ಯಂತ ಶ್ರೇಷ್ಠ ಆಧ್ಯಾತ್ಮಿಕ ಗುರು, ಸಮಾಜ ಸುಧಾರಕ ಮತ್ತು ಗೋರಕ್ಷಕರಾಗಿದ್ದಾರೆ.

ಫೆಬ್ರವರಿ 15, 1739 ರಂದು ಕರ್ನಾಟಕದ ಶಿವಮೊಗ್ಗದ ಸುರಗೊಂಡನಕೊಪ್ಪದಲ್ಲಿ ಜನಿಸಿದ ಇವರು, ಮೂಢನಂಬಿಕೆ, ಪ್ರಾಣಿ ಬಲಿ ವಿರೋಧಿಸಿ, ಸತ್ಯ, ಅಹಿಂಸೆ ಮತ್ತು ಶಿಕ್ಷಣದ ಮಹತ್ವ ಸಾರಿದವರು. ಬಂಜಾರರನ್ನು ಅಲೆಮಾರಿ ಜೀವನದಿಂದ ಮುಕ್ತಗೊಳಿಸಿ ತಾಂಡಾಗಳಲ್ಲಿ ನೆಲೆಸಲು ಪ್ರೇರೇಪಿಸಿದರು.

ಇವರ ಜೀವನದ ಕೋನೆಯ ದಿನಗಳನ್ನು ಮಹಾರಾಷ್ಟ್ರದ ಪೋಹ್ರಾದೇವಿಯಲ್ಲಿ ಕಳೆಯುತ್ತಾರೆ. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಮನೋರಾ ತಾಲೂಕಿನ ಪೋಹ್ರಾದೇವಿಯಲ್ಲಿ ಇವರ ಸಮಾಧಿ ಸ್ಥಳವಿದ್ದು, ಇದನ್ನು ಬಂಜಾರರ ಕಾಶಿ ಎಂದು ಕರೆಯುತ್ತಾರೆ.

ಸೇವಾಲಾಲ್‌ ಮಹಾರಾಜರ ಸಾಮಾಜಿಕ ಬದಲಾವಣೆಗಳು

  • ಸಮಾಜ ಸುಧಾರಣೆ:- ಬಂಜಾರ ಸಮುದಾಯದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಿ, ಅಲೆಮಾರಿ ಜೀವನದಿಂದ ಮುಕ್ತಗೊಳಿಸಿ ಕೃಷಿ ಮತ್ತು ವ್ಯವಸ್ಥಿತ ಬದುಕಿಗೆ ದಾರಿ ತೋರಿದರು.

  • ತತ್ವಗಳು:- ಅಹಿಂಸೆ, ಗೋರಕ್ಷಣೆ, ಸತ್ಯ, ಮಹಿಳಾ ಸಮಾನತೆ ಮತ್ತು ಪ್ರಕೃತಿ ರಕ್ಷಣೆಯನ್ನು ಬೋಧಿಸಿದರು.

  • ಆಧ್ಯಾತ್ಮಿಕತೆ:- ಜಗದಂಬಾ ದೇವಿಯ ಪರಮ ಭಕ್ತರಾಗಿದ್ದರು ಮತ್ತು ಆಯುರ್ವೇದ, ಪ್ರಕೃತಿ ಚಿಕಿತ್ಸೆಯಲ್ಲಿ ಪರಿಣಿತರಾಗಿದ್ದರು.

    ಸೇವಾಲಾಲ್‌ ಮಹಾರಾಜರು ಕೇವಲ ಬಂಜಾರ ಸಮುದಾಯವಲ್ಲದೆ, ಮಾನವತಾವಾದಿಯಾಗಿ ಸಮಾಜದ ಏಳಿಗೆಗಾಗಿ ಬದುಕಿದ ಮಹಾನ್ ದಾರ್ಶನಿಕರಾಗಿದ್ದಾರೆ.

Leave a Reply

error: Content is protected !!