BREAKING : T20 World Cup 2026: IND VS PAK : ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು..!!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
PV ನ್ಯೂಸ್ ಡಿಜಿಟಲ್ ಡೆಸ್ಕ್ : 2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ 61 ರನ್ ಗಳ ಗೆಲುವು ಸಾಧಿಸಿದೆ.
ಇಂದು ಶ್ರೀಲಂಕಾದ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಭಾರತ ಹಾಗೂ ಪಾಕಿಸ್ತಾನ (India vs Pakistan) ಮುಖಾಮುಖಿಯಾಗಿದ್ದು, ಭಾರತದ ಬೌಲರ್‌ಗಳ ಮಾರಕ ದಾಳಿಗೆ ಪಾಕ್ ತತ್ತರಿಸಿದೆ. ಈ ಮೂಲಕ ಭಾರತ ನೀಡಿದ 176 ರನ್ ಗುರಿ ಬೆನ್ನಟ್ಟುವ ಬರದಲ್ಲಿ ಪಾಕಿಸ್ತಾನ ತನ್ನ ಎಲ್ಲ ವಿಕೆಟ್ ಕಳೆದುಕೊಂಡು 18 ಓವರ್ ನಲ್ಲಿ 114ರನ್ ಬಾರಿಸಲಷ್ಟೇ ಶಕ್ತವಾಯಿತು. ಇದರಿಂದ ಭಾರತ ತಂಡವು 61 ರನ್ ಗಳ ಭರ್ಜರಿ ಜಯ ಕಂಡಿದೆ.