You are currently viewing FLASH NEWS : ಗದಗ |ಅವಧಿ ಮುಗಿದ ಔಷಧಿ ವಿತರಣೆ; ಮಹಿಳೆ ಅಸ್ವಸ್ಥ!!

FLASH NEWS : ಗದಗ |ಅವಧಿ ಮುಗಿದ ಔಷಧಿ ವಿತರಣೆ; ಮಹಿಳೆ ಅಸ್ವಸ್ಥ!!

FLASH NEWS : ಗದಗ |ಅವಧಿ ಮುಗಿದ ಔಷಧಿ ವಿತರಣೆ; ಮಹಿಳೆ ಅಸ್ವಸ್ಥ!!

 ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ  : 

ಶಿರಹಟ್ಟಿ : ಪಟ್ಟಣದಲ್ಲಿ ಇರುವ ತಾಲೂಕು ಆಸ್ಪತ್ರೆಗೆ ಖಾನಾಪೂರ ಗ್ರಾಮದ ಮಹಿಳಾ ರೋಗಿ ಆಶಾಬಿ ದೊಡ್ಡಮನಿ ಅವರಿಗೆ ಸರಕಾರಿ ಆಸ್ಪತ್ರೆಯ ವೈದ್ಯರು ಅವಧಿ ಮುಗಿದಿರುವ ಔಷಧಗಳನ್ನು ನೀಡಿದ್ದಾರೆ. ಈ ಕುರಿತು ಕೇಳಲು ಹೋದ ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದಾರೆ” ಎಂದು ಆರೋಪ ಮಾಡಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಖಾನಾಪುರ ಗ್ರಾಮದ ಆಶಾಬಿ ದೊಡ್ಡಮನಿ ಎಂಬ ಮಹಿಳೆ ಮಾನಸಿಕ ರೋಗದಿಂದ ಬಳಲುತ್ತಿದ್ದು, ಫೆ.17ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ನಂತರ ವೈದ್ಯ ಡಾ.ಗೋಪಾಲರಾಜ್ ಅವಧಿ ಮುಗಿದ ಮಾತ್ರೆ ನೀಡಿ ಕಳುಹಿಸಿದ್ದಾರೆ. ಎರಡು ದಿನ ಮಾತ್ರೆ ತೆಗೆದುಕೊಂಡ ಮಹಿಳೆ ಅಸ್ವಸ್ಥಗೊಂಡಾಗ ಮನೆಯವರು ಔಷಧಿ ಅವಧಿ ಪರಿಶೀಲಿಸಿದ್ದು, 2026 ಜನವರಿ 1ಕ್ಕೆ ಅವಧಿ ಮುಗಿದ ಮಾತ್ರೆ ವಿತರಿಸಿದ್ದಾರೆ ಎಂದು ರೋಗಿಯ ಮನೆಯರು ಆರೋಪಿಸಿದ್ದಾರೆ.

ಸ್ಥಳೀಯ ಮುಖಂಡರು ಆಸ್ಪತ್ರೆಗೆ ತೆರಳಿ ಅವಧಿ ಮುಗಿದ ಔಷಧಿ ಯಾಕೆ ವಿತರಣೆ ಮಾಡಿದ್ದೀರಿ ಎಂದು ಕೇಳಿದವರ ಮೇಲೆಯೇ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗೋಪಾಲರಾಜ್ ನೀವು ಯಾರು ಕೇಳೋಕೆ? ಎಂದು ಏರುಧ್ವನಿಯಲ್ಲಿ ಕೇಳಿ ಮುಖಂಡ ಪ್ರಕಾಶ ಬಂಡೆನ್ನವರ ಹಾಗೂ ಶಿಶಿರ ಪಾಟೀಲ್ ಎಂಬುವವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಈ ಘಟನೆಗೆ ಸಾರ್ಜನಿಕರು ಪ್ರತಿಕ್ರೀಯೆ ನೀಡಿದ್ದು, “ಆಸ್ಪತ್ರೆಗೆ ಕೇಳಲು ಬಂದವರ ಮೇಲೆ ಪ್ರಕರಣ ದಾಖಲು ಮಾಡುವ ಅಧಿಕಾರಿ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದಾನೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಕೊಡುವುದಿಲ್ಲ, ಔಷಧಿಗಳನ್ನು ಹೊರಗೆ ಬರೆದುಕೊಡುತ್ತಾರೆ. ವೈದ್ಯರು ರೋಗಿಗಳ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಈ ಕುರಿತು ಗದಗ ಜಿಲ್ಲೆ ಡಿಎಚ್ಓ ಮಾತನಾಡಿ, “ಆಸ್ಪತ್ರೆಗೆ ಎಡಿಸಿ ಅವರು ಭೇಟಿ ಮಾಡಿ ಪರೀಸಿಲನೆ ಮಾಡಿದ್ದು, ಇನ್ನೂ ವರದಿ ಬಂದಿಲ್ಲ. ಬಂದ ನಂತರ ವರದಿ ನೋಡಿ ಮುಂದಿನ ಕ್ರಮ ಕೈಗೊಳುತ್ತೇವೆ” ಎಂದು ಪ್ರತಿಕ್ರೀಯೆ ನೀಡಿದರು.

Leave a Reply

error: Content is protected !!