ಅಥ್ಲೆಟಿಕ್ಸ್‌ನಲ್ಲಿ ಹೊಸ ಇತಿಹಾಸ : 100 ಮೀಟರ್ ಓಟವನ್ನು 10.09 ಸೆಕೆಂಡುಗಳಲ್ಲಿ ಮುಗಿಸಿ ಭಾರತದ ಅತಿವೇಗದ ಓಟಗಾರನಾದ ಗುರುಿಂದರ್‌ವಿರ್ ಸಿಂಗ್!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಬೆಂಗಳೂರು, ಮೇ 26 : ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಹೊಸ ಇತಿಹಾಸವೊಂದು ನಿರ್ಮಾಣವಾಗಿದೆ. ಭಾರತದ ಪ್ರತಿಭಾವಂತ ಅಥ್ಲೀಟ್ ಗುರುಿಂದರ್‌ವಿರ್ ಸಿಂಗ್ (Gurindervir Singh) ಅವರು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಅತ್ಯಂತ ವೇಗದ ಸಾಧನೆ ಮಾಡುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದಾರೆ.
ಇತ್ತೀಚೆಗೆ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ ಗುರುಿಂದರ್‌ವಿರ್ ಸಿಂಗ್ ಅವರು ಕೇವಲ 10.09 ಸೆಕೆಂಡುಗಳಲ್ಲಿ 100 ಮೀಟರ್ ದೂರವನ್ನು ಕ್ರಮಿಸುವ ಮೂಲಕ ಭಾರತದ ಇತಿಹಾಸದಲ್ಲೇ ಅತಿ ವೇಗವಾಗಿ ಓಡಿದ ದೇಶದ ನಂಬರ್ ಒನ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತೀಯ ಓಟಗಾರನೊಬ್ಬ 10.10 ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿರುವುದು ಇದೇ ಮೊದಲು. ಈ ಐತಿಹಾಸಿಕ ವಿಜಯದೊಂದಿಗೆ ಅವರು ಮುಂಬರುವ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಕೂಟಗಳಿಗೂ ಅರ್ಹತೆ ಪಡೆದುಕೊಂಡಿದ್ದಾರೆ.
