You are currently viewing LOCAL NEWS : ಕುಕನೂರು | ನೂತನ ತಾಲೂಕು ನ್ಯಾಯಾಲಯದ ಸ್ಥಳ ಪರಿಶೀಲನೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ

LOCAL NEWS : ಕುಕನೂರು | ನೂತನ ತಾಲೂಕು ನ್ಯಾಯಾಲಯದ ಸ್ಥಳ ಪರಿಶೀಲನೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ

LOCAL NEWS : ನೂತನ ತಾಲೂಕು ನ್ಯಾಯಾಲಯದ ಸ್ಥಳ ಪರಿಶೀಲನೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :

ಕುಕನೂರು, ಮಾರ್ಚ್ 15 : ಪಟ್ಟಣದಲ್ಲಿ ನೂತನವಾಗಿ ಮಂಜೂರಾಗಿರುವ ತಾಲೂಕು ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಲಾದ ಜಾಗಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸಿ.ಎಂ. ಪೂನ್ನಚ್ಚ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಕುಕನೂರು ಪಟ್ಟಣದ 17ನೇ ವಾರ್ಡ್‌ನಲ್ಲಿ ನೂತನವಾಗಿ ಮಂಜೂರಾಗಿರುವ ತಾಲೂಕು ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಲಾದ ಜಾಗ.

​ಸ್ಥಳ ಪರಿಶೀಲನೆ :- ನ್ಯಾಯಮೂರ್ತಿ ಸಿಎಂ ಪೂನ್ನಚ್ಚ ಕುಕನೂರು ಪಟ್ಟಣದ 19 ವಾರ್ಡ್ ನ ಗುದ್ನೆಪ್ಪನ ಮಠದಲ್ಲಿ ಪ್ರಸ್ತಾವಿತ ಜಾಗದ ವಿಸ್ತೀರ್ಣ, ಸುತ್ತಮುತ್ತಲಿನ ಪರಿಸರ ಮತ್ತು ಸಾರ್ವಜನಿಕರಿಗೆ ಇರುವ ಸಂಪರ್ಕ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು.

ಈಗಾಗಲೇ ಈ ಜಮೀನಿನ ವಿಚಾರವಾಗಿ ಕೋರ್ಟ್ ಹಂತದಲ್ಲಿ ಇರುವುದರಿಂದ ಆದಷ್ಟು ಬೇಗ ಈ ಜಾಗದ ಇತ್ಯರ್ಥಗೊಂಡ ನಂತರ ಕಟ್ಟಡ ನಿರ್ಮಾಣಕ್ಕೆ ಯಾವುದೇ ತಾಂತ್ರಿಕ ತೊಂದರೆಗಳಿಲ್ಲದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

​ಈ ಸಂದರ್ಭದಲ್ಲಿ ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸಿ. ಚಂದ್ರಶೇಖರ್. ಕೊಪ್ಪಳ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಮಾರ ಡಿ. ಕೆ, ತಾಲೂಕು ನ್ಯಾಯಾಧೀಶರು, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗತ್ತಿ , ಕೊಪ್ಪಳ ಡಿವೈಎಸ್ ಪಿ ಮುತ್ತಣ್ಣ ಸರ್ವಗೋಳ್, ಕುಕನೂರು ತಹಶೀಲ್ದಾರ್ ಬಸವರಾಜ್ ಬೆಣ್ಣೆಶಿರೂರು ಹಾಗೂ ಯಲಬುರ್ಗಾ ಕುಕನೂರು ವಕೀಲರ ಸಂಘದ ಅಧ್ಯಕ್ಷ ಸುಭಾಸ್ ಎಸ್ ಹೊಂಬಾಳ ಸೇರಿದಂತೆ ಪದಾಧಿಕಾರಿಗಳು, ಹಾಗೂ ಇಲಾಖೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!