You are currently viewing LOCAL BREAKING : ಅಂತರ್ಜಾತಿ ವಿವಾಹ ಹಿನ್ನೆಲೆ ಗಲಾಟೆ; ವ್ಯಕ್ತಿಗೆ ಗಂಭೀರ ಗಾಯ: ಬಳಗೇರಿಯಲ್ಲಿ ಬಿಗುವಿನ ವಾತಾವರಣ!

LOCAL BREAKING : ಅಂತರ್ಜಾತಿ ವಿವಾಹ ಹಿನ್ನೆಲೆ ಗಲಾಟೆ; ವ್ಯಕ್ತಿಗೆ ಗಂಭೀರ ಗಾಯ: ಬಳಗೇರಿಯಲ್ಲಿ ಬಿಗುವಿನ ವಾತಾವರಣ!

LOCAL BREAKING : ಅಂತರ್ಜಾತಿ ವಿವಾಹ ಹಿನ್ನೆಲೆ ಗಲಾಟೆ; ವ್ಯಕ್ತಿಗೆ ಗಂಭೀರ ಗಾಯ: ಬಳಗೇರಿಯಲ್ಲಿ ಬಿಗುವಿನ ವಾತಾವರಣ!

 ಪ್ರಜಾ ವೀಕ್ಷಣೆ ಡಿಜಿಟಲ್ ಮಾಧ್ಯಮ :

ಕುಕನೂರು: ತಾಲೂಕಿನ ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೇರಿ ಗ್ರಾಮದಲ್ಲಿ ಅಂತರ್ಜಾತಿ ವಿವಾಹದ ಹಿನ್ನೆಲೆ ಗಲಾಟೆ ಸಂಭವಿಸಿ ವ್ಯಕ್ತಿಯೊಬ್ಬರಿಗೆ ಗಾಯವಾದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಲಿಂಗಾಯತ ಸಮುದಾಯಕ್ಕೆ ಸೇರಿದ ಯುವಕ ಹಾಗೂ ಬಾರಕೇರ ಸಮುದಾಯಕ್ಕೆ ಸೇರಿದ ಯುವತಿ ಪರಸ್ಪರ ಪ್ರೀತಿಸಿ ( ಮಾ. 7ರಂದು ಶನಿವಾರ) ನಿನ್ನೆ ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ. ಪ್ರೀತಿಸಿದ ಯುವಕ ಮತ್ತು ಯುವತಿ ಇಬ್ಬರೂ ಬಳಗೇರಿ ಗ್ರಾಮದವರಾಗಿದ್ದು, ಇಬ್ಬರೂ ವಯಸ್ಸಿನ ಮೇಜರ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಯುವತಿಯ ಸಂಬಂಧಿಕರು ಗದಗ್ ಜಿಲ್ಲೆಯ ರೋಣ ತಾಲೂಕಿನ ಶಾಂತಿಗಿರಿ–ಇಟಗಿ ಗ್ರಾಮದವರಾಗಿದ್ದು, ಮದುವೆಯ ವಿಷಯ ತಿಳಿದ ನಂತರ ಬಳಗೇರಿ ಗ್ರಾಮಕ್ಕೆ ಬಂದು ಗಲಾಟೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಬಳಗೇರಿ ಗ್ರಾಮದ ಗ್ಯಾರೇಜ್ ಸಮೀಪ ನಡೆದ ಜಗಳದಲ್ಲಿ ಯುವಕನ ಸ್ನೇಹಿತನ ತಂದೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ನಂತರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಈ ಸಂಬಂಧ ಕುಕನೂರು ಪೊಲೀಸ್ ಠಾಣೆಯ ಪೊಲೀಸರು ಪ್ರಕರಣವನ್ನು ಸ್ವಯಂಪ್ರೇರಿತ ದೂರು ದಾಖಲಿಸಲು ಮುಂದಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Prajavikshane

Chandru R Bhanapaur

Leave a Reply

error: Content is protected !!