You are currently viewing LOCAL NEWS : ಕುಕನೂರು | ಪವಿತ್ರ ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ ಏರ್ಪಡಿಸಿದ ಸಮಾಜ ಸೇವಕ ಕಳಕಪ್ಪ ಕಂಬಳಿ!

LOCAL NEWS : ಕುಕನೂರು | ಪವಿತ್ರ ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ ಏರ್ಪಡಿಸಿದ ಸಮಾಜ ಸೇವಕ ಕಳಕಪ್ಪ ಕಂಬಳಿ!

LOCAL NEWS : ಕುಕನೂರು | ಪವಿತ್ರ ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ ಏರ್ಪಡಿಸಿದ ಸಮಾಜ ಸೇವಕ ಕಳಕಪ್ಪ ಕಂಬಳಿ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು ಮಾ. 09 : ರಂಜಾನ್ ತಿಂಗಳಲ್ಲಿ ಮುಸ್ಲಿಂ ಸಮಾಜದವರು 30ದಿನಗಳ ಕಾಲ ಉಪವಾಸ ಮಾಡುತ್ತಾರೆ. ಅವರ ಈ ಕಠಣ ಉಪವಾಸಕ್ಕೆ ಅನ್ನದಾನ ಮಾಡುವದು ಶ್ರೇಷ್ಠ ಕಾಯಕವಾಗಿದೆ. ಇದರಿಂದ ಸಮಾಜದಲ್ಲಿ ಸೌಹಾರ್ದತೆಯನ್ನು ಹೆಚ್ಚಿಸುತ್ತವೆ ಎಂದು ತಾ.ಪಂ ಮಾಜಿ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ಕಳಕಪ್ಪ ಕಂಬಳಿ ಹೇಳಿದರು.

ಸೋಮವಾರ (ಮಾ.09) ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಸಂಜೆ ವೇಳೆಯಲ್ಲಿ ಹಮ್ಮಿಕೊಂಡಿದ್ದ ಇಫ್ತಾರ್ ಕೂಟವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಸಮಯದಲ್ಲಿ ಕೇವಲ ಹಸಿವು ಮತ್ತು ನೀರಡಿಕೆಯನ್ನು ತಡೆಯುವುದಲ್ಲ. ಕೆಟ್ಟ ಆಲೋಚನೆಗಳು, ಸುಳ್ಳು ಮತ್ತು ಕೋಪವನ್ನು ನಿಯಂತ್ರಿಸುವುದು. ಹಸಿವಿನ ನೋವು ಹೇಗಿರುತ್ತದೆ ಎಂದು ಅನುಭವಿಸುವ ಮೂಲಕ, ಬಡವರು ಮತ್ತು ಹಸಿದವರ ಬಗ್ಗೆ ಕಾಳಜಿ ವಹಿಸುವುದು. ತಮ್ಮ ಸಂಪತ್ತಿನ ಒಂದು ಭಾಗವನ್ನು ಬಡವರಿಗೆ ಹಂಚುವುದು ಈ ತಿಂಗಳ ವಿಶೇಷವಾಗಿದೆ. ಈ ಪವಿತ್ರ ಕೆಲಸಗಳನ್ನು ಮಾಡಿ ಅವರು ಅಲ್ಲಾನ ಕೃಪೆಗೆ ಪಾತ್ರರಾಗುತ್ತಾರೆ ಎಂದರು.

 ಇಫ್ತಾರಕೂಟ ಹಮ್ಮಿಕೊಂಡಿದ್ದ ಕಳಕಪ್ಪ ಕಂಬಳಿ ಅವರನ್ನು ಸಮಾಜದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉದ್ಯಮಿ ಹಾಗೂ ಹಿರಿಯ ಮುಖಂಡ ಸತ್ಯನಾರಾಯಣಪ್ಪ ಹರಪನಹಳ್ಳಿ, ಜಾಮೀಯಾ ಮಸೀದಿಯ ಅಧ್ಯಕ್ಷ ರಶೀದ್‌ ಸಾಬ ಹಣಜಗಿರಿ, ಜಿ.ಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಪ.ಪಂ ಮಾಜಿ ಸದಸ್ಯ ಹನುಮಯ್ಯ ಹಂಪನಾಳ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರೇಹಮಾನಸಾಬ ಮಕ್ಕಪ್ಪನವರ್, ರಶೀದ್‌ಸಾಬ ಉಮಚಗಿ, ಅಲ್ಲಾವುದ್ದೀನ್ ಎಮ್ಮಿ,, ಶಫೀಸಾಬ ಗುಡಿಹಿಂದಲ್ ನಿಂಗಪ್ಪ ಗೊರ್ಲೆಕೊಪ್ಪ, ನೂರುದ್ದೀನ್ ಸಾಬ್ ಗುಡಿಹಿಂದಲ್ ಸೇರಿದಂತೆ ಅನೇಕರು ಇದ್ದರು.

Leave a Reply

error: Content is protected !!